ತಮಿಳುನಾಡಿನ 70% ಜನಸಂಖ್ಯೆ ಕೊರೊನಾಗೆ ಒಡ್ಡಿಕೊಂಡಿದೆ; ಸೆರೊ ಸರ್ವೇ
ಚೆನ್ನೈ, ಅಕ್ಟೋಬರ್ 10: ತಮಿಳುನಾಡಿನಲ್ಲಿ ಶೇ 70ರಷ್ಟು ಜನಸಂಖ್ಯೆ ಕೊರೊನಾ ಸೋಂಕಿಗೆ ಒಡ್ಡಿಕೊಂಡಿದೆ ಎಂದು ಈಚೆಗೆ ರಾಜ್ಯದಲ್ಲಿ ನಡೆಸಿದ ಸೆರೊಪ್ರಿವೆಲೆನ್ಸ್ ಸಮೀಕ್ಷೆ ತಿಳಿಸಿದೆ.
ಈ ವರ್ಷದ ಜುಲೈ ಹಾಗೂ ಆಗಸ್ಟ್‌ನಲ್ಲಿ ನಡೆಸಿದ ಮೂರನೇ ಹಂತದ ಸಮೀಕ್ಷೆ ದತ್ತಾಂಶವನ್ನು ಆಧರಿಸಿ ವರದಿಯನ್ನು ಬಿಡುಗಡೆ ಮಾಡಲಾಗಿದೆ. 827 ಕ್ಲಸ್ಟರ್‌ಗಳಿಂದ ಸಂಗ್ರಹಿಸಲಾದ 24,586 ಮಾದರಿಗಳಲ್ಲಿ, 7090 ಜನರು ಸೋಂಕಿನ ವಿರುದ್ಧ ಪ್ರತಿಕಾಯಗಳನ್ನು ಹೊಂದಿರುವುದಾಗಿ ತಿಳಿದುಬಂದಿದೆ. ಇದು, ಸಂಗ್ರಹಿಸಿದ ಮಾದರಿಯ 70 ಪ್ರತಿಶತ ಸಂಖ್ಯೆಯಾಗಿದೆ.
ಸಾರ್ವಜನಿಕ ಆರೋಗ್ಯ ನಿರ್ದೇಶನಾಲಯ ನಡೆಸಿದ ಸಮೀಕ್ಷೆಯು, 88% ಸೆರೊ ಪಾಸಿಟಿವಿಟಿಯೊಂದಿಗೆ, ವಿರುಧುನಗರ ಜಿಲ್ಲೆ ಅತಿ ಹೆಚ್ಚು ಸೆರೊಪಾಸಿಟಿವಿಟಿ ದಾಖಲಿಸಿದೆ. ಕರೂರ್ 51% ದಾಖಲಿಸಿದ್ದು, ಅತಿ ಕಡಿಮೆ ಸೆರೊಪಾಸಿಟಿವಿಟಿ ಪ್ರಮಾಣ ಹೊಂದಿದೆ ಎಂಬುದನ್ನು ತೋರಿದೆ.

ರಾಜ್ಯದ ಐದು ಜಿಲ್ಲೆಗಳು 75% ಪ್ರತಿಶತದಷ್ಟು ಸೆರೊಪಾಸಿಟಿವಿಟಿ ಪ್ರಮಾಣ ಹೊಂದಿರುವುದಾಗಿ ಸಮೀಕ್ಷೆ ತಿಳಿಸಿದೆ. ತೆಂಕಸಿ- 83%, ಚೆನ್ನೈ 82%, ಮಧುರೈ 79%, ತೇನಿ 76% ಹಾಗೂ ರಾಮನಾಥಪುರಂನಲ್ಲಿ 75% ಸೆರೊಪಾಸಿಟಿವಿಟಿ ದಾಖಲಾಗಿದೆ.
ಸೆರೊಪ್ರಿವೆಲೆನ್ಸ್ ಎಂದರೇನು?: ಸೋಂಕಿಗೆ ವಿರುದ್ಧವಾಗಿ ಪ್ರತಿಕಾಯಗಳನ್ನು ಹೊಂದಿರುವ ಪ್ರಮಾಣವನ್ನು ಸೆರೊಪ್ರಿವೆಲೆನ್ಸ್ ದರ ಎಂದು ಅಂದಾಜಿಸಲಾಗುತ್ತದೆ.
ಕೊರೊನಾ ಎರಡನೇ ತರಂಗದ ಸಮಯದಲ್ಲಿ ಹೆಚ್ಚು ಪರಿಣಾಮಕ್ಕೆ ಒಳಗಾದ ಪ್ರದೇಶಗಳಾದ ಕೊಯಮತ್ತೂರು, ಈರೋಡ್ ಹಾಗೂ ಸೇಲಂನಲ್ಲಿ ಕ್ರಮವಾಗಿ ಶೇ 71, 70 ಹಾಗೂ 60% ಸೆರೊಪಾಸಿಟಿವಿಟಿ ದರ ದಾಖಲಾಗಿದೆ.

2020ರ ಅಕ್ಟೋಬರ್- ನವೆಂಬರ್ ತಿಂಗಳಿನಲ್ಲಿ ಸೆರೋಪ್ರಿವೆಲೆನ್ಸ್ ಸಮೀಕ್ಷೆ ನಡೆಸಲಾಗಿದ್ದು, ಇದರಲ್ಲಿ 32% ಸೆರೊಪಾಸಿಟಿವಿಟಿ ದಾಖಲಾಗಿತ್ತು. 2021ರ ಏಪ್ರಿಲ್‌ನಲ್ಲಿ ಎರಡನೇ ಹಂತದ ಸಮೀಕ್ಷೆ ನಡೆಸಲಾಗಿದ್ದು, ಅದರಲ್ಲಿ 29% ಸೆರೊಪಾಸಿಟಿವಿಟಿ ದರ ತೋರಿಸಿದೆ. ಮೂರನೇ ಹಂತದ ವರದಿಯಲ್ಲಿ 66% ಸೆರೊಪ್ರಿವೆಲೆನ್ಸ್ ದರ ತೋರಿದೆ.
ಸದ್ಯಕ್ಕೆ ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ತಗ್ಗಿದೆ. ಇದಾಗ್ಯೂ ಕೆಲವು ರಾಜ್ಯಗಳಲ್ಲಿ ಸೋಂಕಿನ ಪಾಸಿಟಿವಿಟಿ ದರ 5-10% ಇದೆ. ಕೇರಳ, ಮಹಾರಾಷ್ಟ್ರ, ತಮಿಳುನಾಡು, ಮಿಝೋರಾಂ ಹಾಗೂ ಕರ್ನಾಟಕದಲ್ಲಿ 10 ಸಾವಿರಕ್ಕೂ ಹೆಚ್ಚು ಸಕ್ರಿಯ ಕೊರೊನಾ ಪ್ರಕರಣಗಳಿವೆ. ಲಕ್ಷದ್ವೀಪ, ಚಂಡೀಗಢ, ಗೋವಾ, ಹಿಮಾಚಲ ಪ್ರದೇಶ, ಅಂಡಮಾನ್, ನಿಕೋಬಾರ್ ದ್ವೀಪಗಳು, ಸಿಕ್ಕಂನಲ್ಲಿ 100% ಜನರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ.
ಭಾರತದಲ್ಲಿ ಕೊರೊನಾ ಪ್ರಕರಣ:
ಭಾರತದಲ್ಲಿ ಭಾನುವಾರ 18,166 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಕಳೆದ 24 ಗಂಟೆಯಲ್ಲಿ 23,624 ಜನರು ಗುಣಮುಖರಾಗಿದ್ದು, ಒಂದು ದಿನದಲ್ಕಿ 214 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಸದ್ಯಕ್ಕೆ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,30,971 ಆಗಿದೆ. ಒಟ್ಟು ಗುಣಮುಖರ ಸಂಖ್ಯೆ 3,32,71,915 ಆಗಿದ್ದು, ಸೋಂಕಿನಿಂದ ಇದುವರೆಗೂ ಒಟ್ಟು 4,50,589 ಮಂದಿ ಸಾವನ್ನಪ್ಪಿದ್ದಾರೆ.
ಜಾಗತಿಕವಾಗಿ ವಾರದ ಕೊರೊನಾ ಪ್ರಕರಣಗಳ ಸಂಖ್ಯೆ ಹಾಗೂ ಮರಣ ಸಂಖ್ಯೆ ಇಳಿಮುಖವಾಗಿದೆ. ಆಗಸ್ಟ್ ತಿಂಗಳಿನಿಂದಲೂ ಈ ಬದಲಾವಣೆ ಕಂಡುಬಂದಿದೆ. ಸೆಪ್ಟೆಂಬರ್ 27ರಿಂದ ಅಕ್ಟೋಬರ್ 3ರವರೆಗೆ 3.1 ಮಿಲಿಯನ್ ಹೊಸ ಕೊರೊನಾ ಪ್ರಕರಣಗಳು ಹಾಗೂ 54000 ಮರಣ ಸಂಭವಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರದಲ್ಲಿ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ 9% ಇಳಿಕೆಯಾಗಿದೆ. ಮರಣ ಪ್ರಮಾಣ ಹಾಗೇ ಉಳಿದಿದೆ ಎಂದಿದೆ.
ಮುಂದಿನ ಕೆಲವು ತಿಂಗಳು ಭಾರತಕ್ಕೆ ನಿರ್ಣಾಯಕವಾಗಿವೆ ಹಾಗೂ ಕೊರೊನಾ ಸೋಂಕಿನ ಹಲವು ರೂಪಾಂತರಗಳು ಸೃಷ್ಟಿಯಾಗುತ್ತಿರುವುದರಿಂದ, ಜೊತೆಜೊತೆಗೆ ಹಬ್ಬಗಳು ಬರುತ್ತಿರುವುದು ಸೋಂಕಿನ ಆತಂಕವನ್ನು ಹೆಚ್ಚಿಸಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚರಿಕೆ ನೀಡಿದೆ.
-
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
ಡಿವೋರ್ಸ್ವರೆಗೆ ಪತಿಯ ನಿವಾಸದಲ್ಲೇ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿ: ನಟ ವಿಜಯ್ ಪತ್ನಿ ಕೋರ್ಟ್ಗೆ ಮನವಿ -
Yash: ಪತ್ನಿ ರಾಧಿಕಾ ಪಂಡಿತ್ ಹುಟ್ಟುಹಬ್ಬಕ್ಕೆ ಹೊಸ ಲುಕ್ನಲ್ಲಿ ಯಶ್ ಪ್ರತ್ಯಕ್ಷ -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
ಟಿ20 ವಿಶ್ವಕಪ್ 2026 ಫೈನಲ್ ನಂತರ ಎಲ್ಲಾ ಮಾದರಿಯ ಕ್ರಿಕೆಟ್ಗೆ ಸೂರ್ಯಕುಮಾರ್ ಯಾದವ್ ನಿವೃತ್ತಿ ಘೋಷಣೆ ವದಂತಿ -
Vijay Divorce: ಡಿವೋರ್ಸ್ ವದಂತಿ ನಡುವೆಯೇ ನಟಿ ತ್ರಿಶಾ ಜೊತೆ ಕಾಣಿಸಿಕೊಂಡ ದಳಪತಿ ವಿಜಯ್; ವಿಡಿಯೋ ವೈರಲ್ -
UPSC Results: ಯಾದಗಿರಿ ಜಿಲ್ಲೆ ಒಂದರಲ್ಲೇ 4 ಮಂದಿ ಯುಪಿಎಸ್ಸಿ ಪಾಸ್, ಯಾರವರು? ಹಿನ್ನೆಲೆ ಏನು -
Karnataka Weather: ಕಲಬುರಗಿಯಲ್ಲಿ 39 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲ ಬೇಗೆ -
ದುಬೈ ವಿಮಾನ ನಿಲ್ದಾಣಕ್ಕೆ ನುಗ್ಗಿದ ಡ್ರೋನ್, ಎಲ್ಲಾ ವಿಮಾನ ಹಾರಾಟ ದಿಢೀರ್ ಸ್ಥಗಿತ | Operation Roaring Lion -
LPG Price Hike: ಗೃಹಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆ 60 ರೂಪಾಯಿ ಏರಿಕೆ, ವಾಣಿಜ್ಯ ಸಿಲಿಂಡರ್ ದರ 115 ರೂಪಾಯಿ ಹೆಚ್ಚಳ












Click it and Unblock the Notifications