ಜಯಲಲಿತಾ ಆರೋಗ್ಯ ಮಾಹಿತಿ ಕೋರಿ ರಾಷ್ಟ್ರಪತಿಗೆ ಪತ್ರ

By: ವಿಕಾಸ್ ನಂಜಪ್ಪ
Subscribe to Oneindia Kannada

ಚೆನ್ನೈ, ಅಕ್ಟೋಬರ್ 01: ತಮಿಳುನಾಡಿನ ಜನರಿಗೆ ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯದ ಬಗ್ಗೆ ಸರಿಯಾದ ಮಾಹಿತಿ ನೀಡುವ ಮೂಲಕ ಊಹಾಪೋಹಗಳಿಗೆ ಕೊನೆ ಹಾಕಿರಿ ಎಂದು ಡಿಎಂಕೆ ಅಧ್ಯಕ್ಷ ಎಂ. ಕರುಣಾನಿಧಿ ಅವರು ಆಗ್ರಹಿಸಿದ್ದು ತಿಳಿದಿರಬಹುದು. ಈಗ ವಕೀಲರೊಬ್ಬರು ಮಾಹಿತಿ ಬಹಿರಂಗ ಪಡಿಸುವಂತೆ ಕೋರಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಅರ್ಜಿ ಸಲ್ಲಿಸಿದ್ದಾರೆ.

ಸುಪ್ರೀಂಕೋರ್ಟ್ ವಕೀಲರಾಗಿರುವ ರೆಹಾನ್ ಎಸ್ ಬೆಲ್ ಅವರು ಮೂರು ಪುಟಗಳ ಪತ್ರವನ್ನು ಬರೆದಿದ್ದು, ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯದ ಬಗ್ಗೆ ಅಪ್ಡೇಟ್ ಕೇಳಿದ್ದಾರೆ. ಈ ಬಗ್ಗೆ ಅಪೋಲೋ ಆಸ್ಪತ್ರೆ ಅಥವಾ ಎಐಎಡಿಎಂಕೆಯಿಂದ ಮಾಹಿತಿ ಸಿಗುತ್ತಿಲ್ಲ. ಹೀಗಾಗಿ ನಮಗೆ ರಾಜ್ಯಪಾಲರ ಮೂಲಕ ಮಾಹಿತಿ ಕೊಡಿಸಿ ಎಂದು ಕೋರಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಮನವಿ ಮಾಡಿದ್ದಾರೆ.['ಅಮ್ಮ' ಜಯಲಲಿತಾರಿಗೆ ನಿಜಕ್ಕೂ ಏನು ಕಾಯಿಲೆ?]

Seeking details on Jayalalithaa's health, advocates petitions President of India

ತಮಿಳುನಾಡಿನಲ್ಲಿ ಆಡಳಿತ ಯಂತ್ರ ಸರಿಯಾಗಿ ಸಾಗುತ್ತಿಲ್ಲ. ಅರಾಜಕತೆ ಉಂಟಾಗುವ ಮೊದಲು ಸಂವಿಧಾನದ 356ನೇ ವಿಧಿಯನ್ನು ಹೇರಬೇಕಿದೆ. ಕೂಡಲೇ ರಾಷ್ಟ್ರಪತಿಗಳು ಈ ವಿಷಯದಲ್ಲಿ ಮಧ್ಯ ಪ್ರವೇಶಿಸಬೇಕು. ಜಯಲಲಿತಾ ಅವರಿಗೆ ಏಮ್ಸ್ ಅಥವಾ ವಿಶೇಷ ತಜ್ಞ ವೈದ್ಯರ ತಂಡದಿಂದ ಚಿಕಿತ್ಸೆ ಕೊಡಿಸಲಿ ಎಂದು ಕೋರಿದ್ದಾರೆ.[ಜಯಲಲಿತಾ ಚಿಕಿತ್ಸೆಗೆ ಯುಕೆಯಿಂದ ಬಂದ ತಜ್ಞ ವೈದ್ಯ]

ಆದರೆ, ತಮಿಳುನಾಡಿನಲ್ಲಿ ಸಂವಿಧಾನ ಬಿಕ್ಕಟ್ಟು ಉದ್ಭವವಾಗಿಲ್ಲ. 356ನೇ ವಿಧಿ ಹೇರಿಕೆ ಮಾಡಿ ರಾಷ್ಟ್ರಪತಿಗಳು ಮಧ್ಯಪ್ರವೇಶಿಸುವ ಅಗತ್ಯ ಕಂಡು ಬಂದಿಲ್ಲ. ಆಡಳಿತ ಯಂತ್ರ ಕುಸಿದಿದ್ದರೆ ರಾಜ್ಯಪಾಲರು ಈ ಬಗ್ಗೆ ರಾಷ್ಟ್ರಪತಿಗಳಿಗೆ ವರದಿ ಸಲ್ಲಿಸುತ್ತಾರೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆ, ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರ ಅನಾರೋಗ್ಯ ವಿಷಯ ಈಗ ರಾಷ್ಟ್ರಪತಿ ಭವನವನ್ನು ಮುಟ್ಟಿದೆ.[ಆರೆಸ್ಸೆಸ್ ನಿಂದ ಜಯಲಲಿತಾ ಸಾವು ಎಂದವಳ ವಿರುದ್ಧ ಎಫ್ ಐಆರ್]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
There is a lot of confusion and speculation regarding Tamil Nadu chief minister, J Jayalalithaa who is admitted in hospital.Former CM M Karunanidhi had sought clarity on her health to put an end to speculation, an advocate also petitioned the President of India regarding the same.
Please Wait while comments are loading...