ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಬಿಸಿಗೆ ಮೆಡಿಕಲ್ ಸೀಟಲ್ಲಿ 50% ಮೀಸಲಾತಿ ಕೋರಿದ್ದ ಅರ್ಜಿಗೆ ತಡೆ

|
Google Oneindia Kannada News

ಚೆನ್ನೈ, ಅ. 26: ತಮಿಳುನಾಡು ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಅಖಿಲ ಭಾರತ ಕೋಟಾದಡಿಯಲ್ಲಿ ಶೇ 50ರಷ್ಟು ಮೀಸಲಾತಿ ಒದಗಿಸಲು ಮುಂದಾಗಿದ್ದ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಮೀಸಲಾತಿ ಒದಗಿಸುವಂತೆ ಕೋರಿ ಸಲ್ಲಿಸಲಾಗಿದ್ದ ವಿವಿಧ ಅರ್ಜಿಗಳನ್ನು ಸೋಮವಾರ(ಅ. 26)ದಂದು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.

ಒಬಿಸಿಗೆ ಸೇರಿದ NEET-ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಮೆಡಿಕಲ್ ಹಾಗೂ ಡೆಂಟಲ್ ಸರ್ಕಾರಿ ಕಾಲೇಜಿನಲ್ಲಿ ಮೀಸಲಾತಿ ಒದಗಿಸಲು ಕೋರಿದ್ದ ಅರ್ಜಿ ವಿಚಾರಣೆ ನಡೆಸಿದ ಜಸ್ಟೀಸ್ ಎಲ್ ನಾಗೇಶ್ವರ್ ರಾವ್ ಅವರು ಈ ಅರ್ಜಿ ಕುರಿತಂತೆ ಮಧ್ಯಂತರ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.

 ನೀಟ್ ವಿರೋಧಿಸಿ ಸೂರ್ಯ ಟ್ವೀಟ್ ವಿರುದ್ಧ ಮುಖ್ಯ ನ್ಯಾಯಾಧೀಶರಿಗೆ ಪತ್ರ ನೀಟ್ ವಿರೋಧಿಸಿ ಸೂರ್ಯ ಟ್ವೀಟ್ ವಿರುದ್ಧ ಮುಖ್ಯ ನ್ಯಾಯಾಧೀಶರಿಗೆ ಪತ್ರ

ತಮಿಳುನಾಡು ಸರ್ಕಾರದ ಪರ ಹಿರಿಯ ವಕೀಲರಾದ ವಿ ಗಿರಿ, ಎಐಎಡಿಎಂಕೆ ಪರ ಬಾಲಾಜಿ ಶ್ರೀನಿವಾಸನ್, ಡಿಎಂಕೆ ಪರ ವಕೀಲ ಪಿ ವಿಲ್ಸನ್ ಅವರು ವಾದ ಮಂಡಿಸಿದರು.

SC Rejects Tamil Nadu’s Plea for 50% OBC Reservation in Medical Seats

ನೀಟ್ ಪರೀಕ್ಷೆ ಅರ್ಜಿಯನ್ನು ಜನವರಿ-ಫೆಬ್ರವರಿಯಲ್ಲಿ ವಿದ್ಯಾರ್ಥಿಗಳು ತೆಗೆದುಕೊಂಡಿದ್ದಾರೆ. ಒಬಿಸಿ ಮೀಸಲಾತಿ ಬಗ್ಗೆ ಅರ್ಜಿಯಲ್ಲಿ ಪ್ರಸ್ತಾವವಿಲ್ಲ ಎಂಬ ಆಕ್ಷೇಪಕ್ಕೆ ಉತ್ತರಿಸಿದ ಕೇಂದ್ರ ಸರ್ಕಾರದ ಪರ ವಕೀಲ, ಸೀಟು ಹಂಚಿಕೆ, ಮೀಸಲಾತಿ ಈ ಶೈಕ್ಷಣಿಕ ವರ್ಷಕ್ಕೆ ಮೀಸಲಾತಿ ರೋಸ್ಟರ್ ಪದ್ಧತಿಯಂತೆ ನಿಗದಿಯಾಗಿದೆ. ಆರೋಗ್ಯ ಸೇವೆಗಳ ಪ್ರಧಾನ ನಿರ್ದೇಶನಾಲಯದ ಮಾರ್ಗಸೂಚಿಯಂತೆ ಸರ್ಕಾರ ನಡೆದುಕೊಂಡಿದೆ ಎಂದಿದ್ದಾರೆ.

NLSIU ಸ್ಥಳೀಯರಿಗೆ ಶೇ 25 ಮೀಸಲಾತಿ ಕಾಯ್ದೆಗೆ ಹೈಕೋರ್ಟ್ ಬ್ರೇಕ್' NLSIU ಸ್ಥಳೀಯರಿಗೆ ಶೇ 25 ಮೀಸಲಾತಿ ಕಾಯ್ದೆಗೆ ಹೈಕೋರ್ಟ್ ಬ್ರೇಕ್'

ಜುಲೈ 27ರಂದು ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಒಬಿಸಿಗೆ ಶೇ 50ರಷ್ಟು ಮೀಸಲಾತಿ ಒದಗಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿತ್ತು. ಇದನ್ನು ಸುಪ್ರೀಂಕೋರ್ಟ್ ನಲ್ಲಿ ತಮಿಳುನಾಡು ಸರ್ಕಾರ ಪ್ರಶ್ನಿಸಿತ್ತು. ಕೇಂದ್ರ ಸರ್ಕಾರ ಕೂಡಾ AIQ ಅಡಿಯಲ್ಲಿ ಮೀಸಲಾತಿ ವಿಸ್ತರಣೆ ಈ ಸಮಯಕ್ಕೆ ಸದ್ಯವಿಲ್ಲ ಎಂದು ಸುಪ್ರೀಂಕೋರ್ಟಿಗೆ ಮಾಹಿತಿ ನೀಡಿದೆ.

English summary
The Supreme Court on Monday, 26 October, rejected a bunch of pleas filed by the Tamil Nadu government asking for 50 percent reservation for Other Backward Classes under the All India Quota seats surrendered by state-run medical colleges from this academic year, reported Live Law.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X