ಪನ್ನೀರ್ ಗೆ ಬಹುತೇಕ ಶಾಸಕರ ಬೆಂಬಲ, ಶಶಿಗೆ ಮುಖಭಂಗ!

By: ವಿಕಾಸ್ ನಂಜಪ್ಪ
Subscribe to Oneindia Kannada

ಚೆನ್ನೈ, ಫೆಬ್ರವರಿ 11 : ಶಶಿಕಲಾ ನಟರಾಜನ್ ಮತ್ತು ಓ ಪನ್ನೀರ್ ಸೆಲ್ವಂ ಬಣಗಳ ನಡುವೆ ಭಾರೀ ಚಟುವಟಿಕೆಗಳು ನಡೆದಿದ್ದು, ಪನ್ನೀರ್ ಸೆಲ್ವಂ ಅವರಿಗೆ 65 ಶಾಸಕರು ಮತ್ತು ಹೆಚ್ಚಿನ ಸಂಸದರ ಬೆಂಬಲ ದೊರೆತಿದ್ದು, ಪನ್ನೀರ್ ಕೈ ಮೇಲಾಗಿದೆ.

ಎಐಎಡಿಎಂಕೆಯ ಎಲ್ಲ ಶಾಸಕರನ್ನು ಗೋಲ್ಡನ್ ಬೇ ರೆಸಾರ್ಟಿನಲ್ಲಿ ಕೂಡಿಟ್ಟಿದ್ದ ಶಶಿಕಲಾ ನಟರಾಜನ್ ಅವರಿಗೆ ಭಾರೀ ಹೊಡೆತ ಬಿದ್ದಿದೆ. ಶಶಿಕಲಾ ಅವರ ಆಟಗಳು ಒಂದೊಂದಾಗಿ ಬಯಲಾಗುತ್ತಿರುವುದರಿಂದ ಸಹಜವಾಗಿ, ತಮ್ಮ ಭವಿಷ್ಯದ ದೃಷ್ಟಿಯಿಂದ ಶಾಸಕರು ಪನ್ನೀರ್ ಪರ ವಾಲುತ್ತಿದ್ದಾರೆ.[ಶಶಿಕಲಾ ಕ್ಯಾಂಪ್ ನಿಂದ ಮತ್ತೊಂದು ವಿಕೆಟ್ ಡೌನ್]

ಶಶಿಕಲಾ ನಟರಾಜನ್ ಅವರನ್ನೇ ಪಕ್ಷದಿಂದ ಕಿತ್ತುಹಾಕಿರುವುದರಿಂದ ಎಐಎಡಿಎಂಕೆ ಶಾಸಕಾಂಗ ಪಕ್ಷಕ್ಕೆ ನೂತನ ನಾಯಕನನ್ನು ಆಯುವ ನಿಚ್ಚಳ ಸಾಧ್ಯತೆಗಳು ಕಾಣಿಸುತ್ತವೆ. ಕೆಎಸ್ ಸೆಂಗೊಟೈಯನ್ ಮತ್ತು ಎಡಪಾಡಿ ಪಳನಿಸಾಮಿಯ ಹೆಸರುಗಳು ಕೇಳಿಬರುತ್ತಿವೆ. [ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರಿಸುವರೆ ರಜನಿ?]

Sasikala meets legislators, all MPs except Thambidurai to join OPS camp

ಈ ನಡುವೆ, ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ತಡ ಮಾಡುತ್ತಿರುವುದರಿಂದ ಶಶಿಕಲಾ ಅವರು ರಾಜಭವನದ ಮುಂದೆ ಧರಣಿ ಕೂಡಲು ನಿರ್ಧರಿಸಿರುವುದರಿಂದ ಮತ್ತು ಪ್ರತಿಭಟನೆಗಳು ಭುಗಿಲೇಳುವ ಸಾಧ್ಯತೆಗಳು ಇರುವುದರಿಂದ ಭಾರೀ ಬಂದೋಬಸ್ತ್ ಮಾಡಲಾಗಿದೆ.[ಗೋಲ್ಡನ್ ಬೇ ರೆಸಾರ್ಟ್ ನಲ್ಲಿ ಎಐಎಡಿಎಂಕೆ ಶಾಸಕರಿಗೆ ಪೊಲೀಸರ ಕ್ವೆಶ್ಚನ್ ಅವರ್]

ಪೋಯೆಸ್ ಗಾರ್ಡನ್ ನಲ್ಲಿ ಈ ಮೊದಲು ಪಕ್ಷದ ಕಾರ್ಯಕರ್ತರನ್ನು ಭೇಟಿಯಾಗಿದ್ದ ಶಶಿಕಲಾ, ನಮ್ಮ ಸಹನೆಗೂ ಒಂದು ಮಿತಿಯಿದೆ. ರಾಜ್ಯಪಾಲರು ಕೂಡಲೆ ನಿರ್ಧಾರ ಪ್ರಕಟಿಸದಿದ್ದರೆ ಏನು ಮಾಡಬೇಕೋ ಅದನ್ನು ಮಾಡಲೇಬೇಕು ಎಂಬ ಸೂಚನೆಯನ್ನು ನೀಡಿದ್ದಾರೆ.

ಎಐಎಡಿಎಂಕೆ ಪಕ್ಷದ ಹಿರಿಯ ನಾಯಕ ಸಿ ಪೊನ್ನಿಯಣ್ಣನ್ ಶಶಿಕಲಾ ಬಣದಿಂದ ಜಿಗಿದು ಪನ್ನೀರ್ ಸೆಲ್ವಂ ಕೂಟವನ್ನು ಸೇರಿಕೊಂಡಿರುವುದರಿಂದ ಶಶಿಕಲಾಗೆ ಭಾರೀ ಹಿನ್ನಡೆಯಾದಂತಾಗಿದೆ. ಜೊತೆಗೆ ಸಂಸದರಾದ ಪಿಆರ್ ಸುಂದರಂ, ಕೆ ಅಶೋಕ್ ಕುಮಾರ್ ಅವರು ಕೂಡ ಪನ್ನೀರ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ತಂಬಿದುರೈ ಅವರನ್ನು ಹೊರತುಪಡಿಸಿ ಎಲ್ಲ ಸಂಸದರು ಪನ್ನೀರ್ ಸೆಲ್ವಂ ಅವರಿಗೇ ಬೆಂಬಲ ಸೂಚಿಸಲಿದ್ದಾರೆ ಎಂದು ಸುಂದರಂ ಮತ್ತು ಅಶೋಕ್ ಕುಮಾರ್ ಹೇಳಿರುವುದು ಪನ್ನೀರ್ ಅವರಿಗೆ ಆನೆ ಬಲ ಬಂದಂತಾಗಿದೆ. [ಶಶಿ ಮುಖ್ಯಮಂತ್ರಿಯಾಗದಂತೆ ತಡೆದಿದ್ದಕ್ಕೆ ನಿಜವಾದ ಕಾರಣ]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Tamil Nadu political crisis is turning into a pot boiler. Sasikala Natrajan held a meeting with with the AIADMK MLAs at the resort before the leaving the venue. Earlier as Sasikala made her entry into the Golden Bay resort, several AIADMK MLAs chanted slogans in her favour
Please Wait while comments are loading...