ಮುಖ್ಯಮಂತ್ರಿ ಗಾದಿಗೆ ಶಶಿಕಲಾ ಹಾದಿಯಲ್ಲಿ 3 ಮುಳ್ಳು!

By: ವಿಕಾಸ್ ನಂಜಪ್ಪ
Subscribe to Oneindia Kannada

ಚೆನ್ನೈ, ಫೆಬ್ರವರಿ 10: ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕಿ ಶಶಿಕಲಾ ನಟರಾಜನ್ ಪರವಾಗಿ ಸಂಖ್ಯಾಬಲ ಇದ್ದರೂ ಮುಖ್ಯಮಂತ್ರಿ ಗಾದಿ ತಲುಪಲು ಅವರ ಪಾಲಿಗೆ ಇನ್ನೂ ಅಡೆತಡೆಗಳಿವೆ. ಮೊದಲನೆಯದಾಗಿ ಅಕ್ರಮ ಆಸ್ತಿ ಪ್ರಕರಣದಲ್ಲಿ ಆಕೆ ನಿರಪರಾಧಿ ಎಂಬ ತೀರ್ಪು ಬರಬೇಕು. ಈ ಪ್ರಕರಣದ ತೀರ್ಪನ್ನು ಸುಪ್ರೀಂ ಕೋರ್ಟ್ ಮುಂದಿನ ವಾರ ನೀಡಲಿದೆ.

ಕಾನೂನು ಹಾಗೂ ಸಂವಿಧಾನ ತಜ್ಞರ ಜೊತೆಗೆ ಒನ್ಇಂಡಿಯಾ ಮಾತನಾಡಿದ್ದು, ತಮಿಳುನಾಡು ಮುಖ್ಯಮಂತ್ರಿ ಆಗುವ ಮೊದಲು ಶಶಿಕಲಾ ಈ ಎಲ್ಲ ತಡೆಗಳನ್ನು ದಾಟುತ್ತಾರಾ ಎಂದು ಪ್ರಶ್ನಿಸಿದೆ. ಈಗ ತಮಿಳುನಾಡಿನಲ್ಲಿ ಉದ್ಭವಿಸಿರುವ ಬಿಕ್ಕಟ್ಟಿನ ಬಗ್ಗೆ ರಾಜ್ಯಪಾಲ ವಿದ್ಯಾಸಾಗರ್ ರಾವ್ ತೀರ್ಮಾನ ತೆಗೆದುಕೊಳ್ಳುವ ಮೊದಲು ಹಲವು ವಿಚಾರಗಳನ್ನು ಪರಿಗಣಿಸಬೇಕಿದೆ.[ರಾಜ್ಯಪಾಲರ ಮುಂದೆ ಸರ್ಕಾರ ರಚಿಸುವ ಪ್ರಸ್ತಾವನೆಯಿಟ್ಟ ಶಶಿಕಲಾ]

ಮೊದಲನೆಯದು ಅಕ್ರಮ ಆಸ್ತಿ ಪ್ರಕರಣ. ಸೋಮವಾರ ಅಥವಾ ಮಂಗಳವಾರ ಸುಪ್ರೀಂ ಕೋರ್ಟ್ ತೀರ್ಪು ಶಶಿಕಲಾ ವಿರುದ್ಧವಾಗಿ ಬಂದರೆ ಆಕೆ ಚುನಾವಣೆಗೆ ಸ್ಪರ್ಧಿಸುವುದಕ್ಕೆ ಅನರ್ಹರಾಗುತ್ತಾರೆ. ಒಂದು ವೇಳೆ ಈಗಾಗಲೇ ವಿಧಿಸಿರುವ ನಾಲ್ಕು ವರ್ಷದ ಶಿಕ್ಷೆಯನ್ನು ಎತ್ತಿಹಿಡಿದರೆ ಮುಂದಿನ ಹತ್ತು ವರ್ಷ ಆಕೆ ರಾಜಕೀಯ ಆಟದಿಂದಲೇ ಹೊರಕ್ಕೆ ಹೋಗಬೇಕಾಗುತ್ತದೆ.

Sasikala Natarajan

ಜನಪ್ರತಿನಿಧಿಗಳ ಕಾಯ್ದೆ ಪ್ರಕಾರ ಅಪರಾಧಿಯು ಆರು ವರ್ಷಗಳ ಕಾಲ ಯಾವುದೇ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಮುಂದಿನ ತಡೆ ಆಕೆ ಪಕ್ಷದ ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆಯಾದ ರೀತಿಯಲ್ಲೇ ಇದೆ. ಶಶಿಕಲಾ ಯಾವುದೇ 'ಮನೆ'ಯ ಸದಸ್ಯೆಯಲ್ಲ. ಅರ್ಥಾತ್, ಆಕೆ ವಿಧಾನಸಭೆ ಅಥವಾ ಸಂಸತ್ ನ ಸದಸ್ಯೆಯಲ್ಲ.[ಪನ್ನೀರ್ ಸೆಲ್ವಂ ಬೆಂಬಲಕ್ಕೆ ಕಮಲ್ ನಿಂತಿದ್ದೇಕೆ? ಇಲ್ಲಿದೆ ಉತ್ತರ]

ಇನ್ನು ಅಂತಿಮವಾಗಿ ಆಕೆಯನ್ನು ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ಮಾತ್ರ ಆಯ್ಕೆ ಮಾಡಲಾಗಿದೆ. ಚುನಾವಣೆ ಆಯೋಗದಲ್ಲಿ ಈ ವಿಚಾರ ತಗಲು ಹಾಕಿಕೊಳ್ಳುತ್ತೆ. ಈ ವಿಚಾರದಲ್ಲಿ ಈಗಾಗಲೇ ಅರ್ಜಿ ಸಲ್ಲಿಸಲಾಗಿದೆ. ಎಐಎಡಿಎಂಕೆ ಮಾಡಿಕೊಂಡಿರುವ ಕಾನೂನಿನ ಪ್ರಕಾರ ಶಶಿಕಲಾ ಅವರು ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ. ಏಕೆಂದರೆ ಸಿಎಂ ಅಗಬಹುದಾದವರು ಪ್ರಧಾನ ಕಾರ್ಯದರ್ಶಿ ಮಾತ್ರ, ಮಧ್ಯಂತರ ಪ್ರಧಾನ ಕಾರ್ಯದರ್ಶಿ ಇಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sasikala does have the numbers, but she also carries a huge baggage. OneIndia spoke to both legal and Constitutional experts on the hurdles that Sasikala has in her way before she could become the Chief Minister of Tamil Nadu.
Please Wait while comments are loading...