ಯು.ಎಸ್. ಚೆನ್ನೈ ದೂತಾವಾಸದ ಮುಖ್ಯಸ್ಥರಾಗಿ ರಾಬರ್ಟ್ ಬರ್ಜಸ್

Posted By: Gururaj
Subscribe to Oneindia Kannada

ಚೆನ್ನೈ, ಆ.06 : 'ಅಮೆರಿಕ-ಭಾರತ ನಡುವಿನ ಸಂಬಂಧ ಇತಿಹಾಸದ ಮಹತ್ತರ ಘಟ್ಟದಲ್ಲಿರುವ ಹೊತ್ತಲ್ಲಿ ದಕ್ಷಿಣ ಭಾರತದಲ್ಲಿ ಅಮೆರಿಕವನ್ನು ಪ್ರತಿನಿಧಿಸುವ ಸುಯೋಗ ನನ್ನದು' ಎಂದು ಕಾನ್ಸಲ್‌ ಜನರಲ್‌ ರಾಬರ್ಟ್‌ ಬರ್ಜಸ್ ಹೇಳಿದರು.

ಚೆನ್ನೈನಲ್ಲಿರುವ ಅಮೆರಿಕ ದೂತಾವಾಸ ಕಚೇರಿಯ ಕಾನ್ಸಲ್‌ ಜನರಲ್‌ ಆಗಿ ರಾಬರ್ಟ್‌ ಬರ್ಜಸ್ ಸೋಮವಾರ ಅಧಿಕಾರ ಸ್ವೀಕರಿಸಿದರು. ಬರ್ಜಸ್ ಅವರು ಇಲಿನಾಯ್ ನ ವೌಕೆಗಾನ್‌ ಮೂಲದವರು.

Robert Burgess takes leadership as U.S. Consul general in Chennai

'ಮುಂಬರುವ ದಿನಗಳಲ್ಲಿ ತಮಿಳುನಾಡು, ಕರ್ನಾಟಕ ಮತ್ತು ಕೇರಳ ರಾಜ್ಯಗಳ ಬಗ್ಗೆ ತಿಳಿದುಕೊಳ್ಳಲು ಹಾಗೂ ಉಭಯತ್ರರ ಧ್ಯೇಯೋದ್ದೇಶಗಳ ಮುಂದುವರಿಕೆಗೆ ಉತ್ಸುಕನಾಗಿದ್ದೇನೆ' ಎಂದು ತಿಳಿಸಿದರು.

ಇದಕ್ಕೂ ಮುನ್ನ ರಾಬರ್ಟ್‌ ಬರ್ಜಸ್ ವಾಷಿಂಗ್ಟನ್‌ ಡಿಸಿಯಲ್ಲಿ ಡಿಪಾರ್ಟ್‌ಮೆಂಟ್‌ ಆಫ್‌ ಸ್ಟೇಟ್‌ನ ಬ್ಯೂರೋ ಆಫ್‌ ಸೌತ್‌ ಅಂಡ್‌ ಸೆಂಟ್ರಲ್‌ ಏಷ್ಯನ್‌ ಅಫೇರ್ಸ್‌ನಲ್ಲಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ತಜಕಿಸ್ತಾನದ ದುಶಾಂಬೆಯಲ್ಲಿರುವ ಅಮೆರಿಕ ರಾಯಭಾರ ಕಚೇರಿಯಲ್ಲಿ ಡೆಪ್ಯುಟಿ ಚೀಫ್‌ ಆಫ್‌ ಮಿಶನ್ ಆಗಿ, ಬಿಶ್ಕೆಕ್‌, ಕಿರ್ಜಿಸ್ತಾನ್‌, ಬಾಕು, ಅಜರ್ ಬೈಜಾನ್, ಲಿಲೊನ್‌ಗ್ವೆ, ಮಲಾವಿ ಮತ್ತು ಪಾಕಿಸ್ತಾನದ ಕರಾಚಿಯಲ್ಲಿ ರಾಜತಾಂತ್ರಿಕರಾಗಿ ಕಾರ್ಯ ನಿರ್ವಹಿಸಿದ ಅನುಭವ ಬರ್ಜಸ್ ಅವರಿಗಿದೆ.

ಕೊಲರಾಡೊ ಕಾಲೇಜಿನಲ್ಲಿ ಇತಿಹಾಸದಲ್ಲಿ ಪದವಿ ಪಡೆದಿರುವ ಬರ್ಜಸ್, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಹಾಸ್ಟಿಂಗ್ಸ್‌ ಕಾಲೇಜ್‌ ಆಫ್‌ ದ ಲಾ ದಿಂದ ಜ್ಯೂರಿಸ್‌ ಡಾಕ್ಟರ್‌ ಡಿಗ್ರಿಯನ್ನು ಪಡೆದಿದ್ದಾರೆ.

Chennai, Anna Salai Road Cave-in, car

ಟೆಕ್ಸಾಸ್‌ ವಿವಿಯ ಆಸ್ಟಿನ್‌ ನಿಂದ ಎಂಬಿಎ ಪಡೆದಿದ್ದಾರೆ. ಯು.ಎಸ್‌.ನ್ಯಾಷನಲ್‌ ವಾರ್‌ ಕಾಲೇಜಿನಿಂದ 2012 ರಲ್ಲಿ ನ್ಯಾಷನಲ್‌ ಸೆಕ್ಯುರಿಟಿ ಸ್ಟ್ರಾಟಜಿಯಲ್ಲಿ ಮಾಸ್ಟರ್‌ ಇನ್‌ ಸೈನ್ಸ್‌ ಪದವಿ ಪಡೆದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
On August, 7, 2017 Robert Burgess took charge as the Consul General of the United States Consulate General in Chennai, Tamil Nadu.
Please Wait while comments are loading...