ಆರ್.ಕೆ ನಗರ ಉಪಚುನಾವಣೆಯದ್ದು ಖರೀದಿಸಿದ ಗೆಲುವು : ಕಮಲ್ ಹಾಸನ್ ಆಕ್ರೋಶ

Subscribe to Oneindia Kannada

ಚೆನ್ನೈ, ಜನವರಿ 4: ಆರ್.ಕೆ ನಗರ ಉಪಚುನಾವಣೆಯಲ್ಲಿ ಟಿಟಿವಿ ದಿನಕರನ್ ಗೆಲುವಿನ ಹಿಂದೆ ಹಣ ಬಲ ಕೆಲಸ ಮಾಡಿದೆ ಎಂದು ತಮಿಳು ನಟ ಕಮಲ್ ಹಾಸನ್ ಆರೋಪಿಸಿದ್ದಾರೆ.

ತಮಿಳು ನಿಯತಕಾಲಿಕೆ 'ಆನಂದ ವಿಕಟನ್'ಗೆ ಬರೆದಿರುವ ಅಂಕಣದಲ್ಲಿ ಅವರು, ಆರ್.ಕೆ ನಗರ ಉಚುನಾವಣೆಯನ್ನು ಭಾರತದ ಗಣರಾಜ್ಯಕ್ಕೆ ಅಂಟಿದ ಕಪ್ಪು ಚುಕ್ಕೆ ಎಂದು ಟೀಕಿಸಿದ್ದಾರೆ.

ಆದರೆ ಇದಕ್ಕೆ ತಿರುಗೇಟು ನೀಡಿರುವ ದಿನಕರನ್ ನಟನಿಗೆ ನನ್ನ ಗೆಲುವನ್ನು ಅರಗಿಸಿಕೊಳ್ಳಲಾಗುತ್ತಿಲ್ಲಎಂದಿದ್ದಾರೆ.

RK Nagar bypoll win was a "purchased" one: Kamal Haasan

ಡಿಸೆಂಬರ್ 21ರಂದು ನಡೆದಿದ್ದ ಆರ್.ಕೆ ನಗರ ಉಪಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಟಿಟಿವಿ ದಿನಕರನ್ 40ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಶಾಲಿಯಾಗಿದ್ದರು.

ಈ ಬಗ್ಗೆ ತಮ್ಮ ಅಂಕಣದಲ್ಲಿ ಉಲ್ಲೇಖಿಸಿರುವ ಕಮಲ್ ಹಾಸನ್, ಟಿಟಿವಿ ದಿನಕರನ್ ಹೆಸರು ಹೇಳದೇ ವಾಗ್ದಾಳಿ ನಡೆಸಿದ್ದಾರೆ.
"ಆರ್.ಕೆ ನಗರ ಉಪಚುನಾವಣೆ ತಮಿಳುನಾಡು ರಾಜಕೀಯದಲ್ಲೊಂದು ಕಪ್ಪುಚುಕ್ಕೆ. ಭಾರತದ ಪ್ರಜಾಪ್ರಭುತ್ವಕ್ಕೆ ಅಂಟಿದ ದೊಡ್ಡ ಕಪ್ಪು ಚುಕ್ಕೆ. ಈ ಖರೀದಿಸಿದ ಗೆಲುವನ್ನು ನಾನು ಹಗರಣ ಎಂದೂ ಕರೆಯುವುದಿಲ್ಲ.. ಇದು ಹಾಡಹಗಲೇ ನಡೆದ ಕ್ರೈಂ," ಎಂದು ಕಿಡಿಕಾರಿದ್ದಾರೆ.

ಪಕ್ಷೇತರ ಮತ್ತು ಆಡಳಿತದಲ್ಲಿರುವವರು ಮತಗಳಿಗೆ ಬೆಲೆ ನಿಗದಿಪಡಿಸಿದ್ದರು ಎಂದು ಕಮಲ್ ಹಾಸನ್ ಅಂಕಣದಲ್ಲಿ ಆರೋಪಿಸಿದ್ದಾರೆ. ದುಡ್ಡಿಗಾಗಿ ಜನರು ಮತ ಹಾಕಿದ್ದಾರೆ ಎಂದು ಹೇಳಿರುವ ಕಮಲ್ ಹಾಸನ್, "ನೀವು ಮಾರಾಟಗೊಂಡಿದ್ದೀರಿ" ಎಂದು ಜನರನ್ನು ಝಾಡಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ದಿನಕರನ್, ಕಮಲ್ ಆರೋಪಗಳು ಆರ್.ಕೆ ನಗರ ಜನರಿಗೆ ಮಾಡಿರುವ ಅವಮಾನ ಎಂದು ಆಕ್ಷೇಪಿಸಿದ್ದಾರೆ. ಮತ್ತು ತಾವು ಮತದಾರರಿಗೆ ಹಣದ ಆಮಿಷ ಒಡ್ಡಿಲ್ಲ ಎಂದಿದ್ದಾರೆ. ಕಮಲ್ ಹಾಸನ ಒಪ್ಪಿಕೊಳ್ಳುತ್ತಾರೋ ಬಿಡುತ್ತಾರೋ ಆದರೆ ಜನರು ಮಾತ್ರ ನನಗೆ ಮತ ಹಾಕಿದ್ದಾರೆ ಎಂದು ಅವರು ತಿರುಗೇಟು ನೀಡಿದ್ದಾರೆ.

ಕಮಲ್ ಹಾಸನ್ ತೀರ್ಪು ನೀಡಲು ನ್ಯಾಯಾಧೀಶರೋ, ಅಥವಾ ದೇವರೋ ಎಂದು ಪ್ರಶ್ನಿಸಿರುವ ದಿನಕರನ್, ತಾಕತ್ತಿದ್ದರೆ ಚುನಾವಣೆಗೆ ಇಳಿದು ಅವರು ವಾಸ್ತವ ಪರೀಕ್ಷೆ ಮಾಡಿಕೊಳ್ಳಬೇಕಿತ್ತು ಎಂದು ಪ್ರತ್ಯುತ್ತರ ನೀಡಿದ್ದಾರೆ. ಜತೆಗೆ ಇಂಥ ವ್ಯಕ್ತಿಗಳು ರಾಜಕೀಯದಲ್ಲಿ ಉಳಿಯಲು ಸಾಧ್ಯವಿದೆಯೇ? ಎಂದೂ ಪ್ರಶ್ನಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Actor Kamal Haasan today alleged that money power was behind TTV Dhinakaran's win in the December 21 RK Nagar bypoll, drawing sharp rebuke from the sidelined AIADMK leader who accused the star of maligning voters.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ