ಆರ್.ಕೆ ನಗರ ಉಪಚುನಾವಣೆ: ಮತಎಣಿಕೆ ಕೇಂದ್ರದಲ್ಲಿ ಮಾರಾಮಾರಿ
ಚೆನ್ನೈ, ಡಿಸೆಂಬರ್ 24: ಆರ್.ಕೆ. ನಗರ ಉಪಚುನಾವಣೆಯ ಮತಎಣಿಕೆ ಇಂದು ನಡೆಯುತ್ತಿದೆ. ಈ ವೇಳೆ ಮೊದಲ ಹಂತದ ಮತಎಣಿಕೆ ಮುಗಿದ ನಂತರ ಮತಎಣಿಕೆ ಕೇಂದ್ರದಲ್ಲಿ ಮಾರಾಮಾರಿ ನಡೆದ ವರದಿಯಾಗಿದೆ.
ಮರೀನಾ ಬೀಚ್ ನಲ್ಲಿರುವ ಕ್ವೀನ್ ಮೇರಿ ಕಾಲೇಜಿನಲ್ಲಿ ಮತಎಣಿಕೆ ನಡೆಯುತ್ತಿದ್ದು, ಇಲ್ಲಿ ಎಐಎಡಿಎಂಕೆ ಮತ್ತು ಪಕ್ಷೇತರ ಅಭ್ಯರ್ಥಿ ಟಿಟಿವಿ ದಿನಕರನ್ ಬೆಂಬಲಿಗರ ಮಧ್ಯೆ ಮಾರಾಮಾರಿ ನಡೆದಿದೆ. ಇದರಿಂದ ಸುಮಾರು 15 ನಿಮಿಷಗಳ ಕಾಲ ಮತ ಎಣಿಕೆ ಸ್ಥಗಿತಗೊಂಡಿತ್ತು.

ಈ ಬಗ್ಗೆ ಹೇಳಿಕೆ ನೀಡಿರುವ ಚೆನ್ನೈ ಜಿಲ್ಲಾ ಚುನಾವಣಾ ಅಧಿಕಾರಿ," ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಇದೀಗ ಎರಡನೇ ಹಂತದ ಮತದಾನ ಆರಂಭವಾಗಿದೆ," ಎಂದಿದ್ದಾರೆ.












Click it and Unblock the Notifications