ರಾಜೀವ್ ಗಾಂಧಿ ಹಂತಕನಿಂದ ದಯಾ ಮರಣಕ್ಕೆ ಅರ್ಜಿ
ಚೆನ್ನೈ, ಜೂನ್ 21: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿಗಳ ಪೈಕಿ ರಾಬರ್ಟ್ ಪಯಸ್ ದಯಾ ಮರಣ ಕೋರಿ ತಮಿಳುನಾಡು ಸರಕಾರಕ್ಕೆ ಅರ್ಜಿ ಸಲ್ಲಿಸಿದಾನೆ. ಇಡೀ ಜೀವನ ಜೈಲಿನಲ್ಲಿ ಕಳೆಯುವ ಬದಲಿಗೆ ದಯಾ ಮರಣ ನೀಡಿ ಎಂದು ಮೂರು ಪುಟಗಳ ಪತ್ರದಲ್ಲಿ ಆತ ಬರೆದಿದ್ದಾನೆ.
ಮೂರು ವರ್ಷದ ಹಿಂದೆ ಆಗಿನ ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಅವರು ನಮ್ಮ ಬಿಡುಗಡೆಗಾಗಿ ಪ್ರಯತ್ನ ಮಾಡಿದ್ದರು. ಆದರೆ ನನಗೆ ಈಗ ಅರ್ಥ ಆಗುತ್ತಿದೆ; ನನ್ನ ಇಡೀ ಜೀವನ ಜೈಲಿನಲ್ಲಿ ಕಳೆಯಲಿ ಎಂಬುದು ಸರಕಾರದ ಅಪೇಕ್ಷೆ. ಇದರಿಂದ ನನಗೆ ಮಾತ್ರ ಅಲ್ಲ, ನನ್ನ ಕುಟುಂಬದ ಮೇಲೂ ಪರಿಣಾಮ ಬೀರುತ್ತಿದೆ" ಎಂದಿದ್ದಾನೆ.

ಅಷ್ಟೇ ಅಲ್ಲ, ನನಗೆ ದಯಾ ಮರಣ ನೀಡಿ ಎಂದು ಕೇಳಿಕೊಂಡಿದ್ದಾನೆ. ಮುಖ್ಯ ನ್ಯಾಯಮೂರ್ತಿ ಜೆ ಎಸ್ ಖೇಹರ್ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡಿದ್ದ ಸಾಂವಿಧಾನಿಕ ಪೀಠವು ತಮಿಳುನಾಡು ಸಲ್ಲಿಸಿದ್ದ ರಾಜೀವ್ ಗಾಂಧಿ ಹಂತಕರ ಶಿಕ್ಷೆ ಮರುಪರಿಶೀಲನೆ ಅರ್ಜಿಯನ್ನು ಕಳೆದ ಫೆಬ್ರವರಿಯಲ್ಲಿ ತಿರಸ್ಕರಿಸಿತ್ತು.












Click it and Unblock the Notifications