ಹಂತಕರ ಬಿಡುಗಡೆಗೊಳಿಸಿ ಧನ್ಯೋಸ್ಮಿಯೆಂದ ಅಮ್ಮ ಜಯಾ
ಚೆನ್ನೈ, ಫೆ.19: ದೇಶದ ಮಾಜಿ ಪ್ರಧಾನಿಯನ್ನೇ ಹತ್ಯೆ ಮಾಡಿದ್ದ 7 ಪಾತಕಿಗಳನ್ನು ರಾಜಕೀಯ ಲಾಭಕ್ಕಾಗಿ ಜೈಲಿಂದ ಬಿಡುಗಡೆ ಮಾಡುತ್ತಿರುವುದು ವ್ಯಾಪಕ ಟೀಕೆ/ ಚರ್ಚೆಗೆ ಒಳಗಾಗಿದೆ. ಅದಕ್ಕೂ ಮುನ್ನ, ಖುದ್ದು ಸುಪ್ರೀಂಕೋರ್ಟೇ ರಾಜೀವ್ ಗಾಂಧಿ ಹಂತಕರಿಗೆ ಜೀವದಾನ ನೀಡಿ, ನೇಣಿನ ಕುಣಿಕೆಯಿಂದ ಇಳಿಸಿರುವುದರ ವಿರುದ್ಧವೂ ಭಾರಿ ಅಸಮಾಧಾನ ವ್ಯಕ್ತವಾಗಿದೆ.
ರಾಜೀವ್ ಗಾಂಧಿ ಹಂತಕರನ್ನು ಸುಪ್ರೀಂಕೋರ್ಟ್ ನಿನ್ನೆಯಷ್ಟೇ ನೇಣಿನ ಕುಣಿಕೆಯಿಂದ ಇಳಿಸುತ್ತಿದ್ದಂತೆ ಅದರ ರಾಜಕೀಯ ಲಾಭ ಪಡೆಯಲು ತಮಿಳುನಾಡಿನಲ್ಲಿ ಇಡೀ ರಾತ್ರಿ ನಿದ್ದೆಗೆಟ್ಟು ಚಿಂತನೆ ನಡೆಸಲಾಗಿದೆ. ತಕ್ಷಣ ಪಾತಕಿಗಳನ್ನು ಜೈಲಿಂದ ಬಿಡುಗಡೆ ಮಾಡಿ ಎಂದು ಮೊದಲು ಡಿಎಂಕೆ ಕೇಳಿದೆ. ಅದು ಪ್ರಧಾನಿ ಕನಸು ಕಾಣುತ್ತಿರುವ ಮುಖ್ಯಮಂತ್ರಿ ಜಯಲಲಿತಾರ ನಿದ್ದೆಗೆಡಿಸಿದಂತಿದೆ. ಹಾಗಾಗಿ ...

ರಾಜೀವ್ ಹಂತಕರನ್ನು ಬಿಟ್ಟು ಧನ್ಯೋಸ್ಮಿ ಎಂದ ಜಯಾ
ಅಮ್ಮಾ 'ಮೆಸ್': ಇಂದು ಬೆಳಗಾಗುತ್ತಿದ್ದಂತೆ ತುರ್ತು ಸಂಪುಟ ಸಭೆ ನಡೆಸಿದ ಜಯಲಲಿತಾ ತಕ್ಷಣವೇ ಪಾತಕಿಗಳನ್ನು ಬಿಟ್ಟುಬಿಡಲು ನಿರ್ಧರಿಸಿದೆ. ಸುಪ್ರೀಂಕೋರ್ಟಿನ ಆದೇಶ ಪ್ರತಿಯೂ ಇನ್ನೂ ತಮಿಳುನಾಡು ಸರಕಾರದ ಕೈ ಸೇರಿದಂತೆಯೂ ಇಲ್ಲ. ಅಷ್ಟು ವೇಗವಾಗಿ ಜಯಾ ರಾಜಕೀಯ ಮೆದುಳು ಕೆಲಸ ಮಾಡಿದೆ.

ಪಾತಕಿಗಳಿಗೆ ಗಲ್ಲು ಶಿಕ್ಷೆಯಾಗುವಂತೆ ಮುತುವರ್ಜಿ ವಹಿಸಿದ್ದರೆ
ಇದೇ ವೇಗದಲ್ಲಿ ಪಾತಕಿಗಳಿಗೆ ಗಲ್ಲು ಶಿಕ್ಷೆಯಾಗುವಂತೆ ಸರಕಾರ ಮುತುವರ್ಜಿ ವಹಿಸಿದ್ದರೆ ಈ ವೇಳೆಗಾಗಲೇ ಪಾತಕಿಗಳು ಶಿಕ್ಷೆ ಅನುಭವಿಸಿಯಾಗುತ್ತಿತ್ತು. ಇದರಿಂದ ಸುಪ್ರೀಂಕೋರ್ಟ್ ಅಸಹಾಯಕವಾಗಿ ನ್ಯಾಯ ವಿಳಂಬದ ಸಬೂಬು ಹೇಳುವ ದುಃಸ್ಥಿತಿಯಲ್ಲಿ ಇರುತ್ತಿರಲಿಲ್ಲ.

17 ಮಂದಿಯ ಕುಟುಂಬಸ್ಥರು ಏನನ್ನಬಹುದು
ಹೌದು, ರಾಜೀವ್ ಗಾಂಧಿ ಜತೆಜತೆಗೆ ಅಂದು ಅಸುನೀಗಿದ ಅಮಾಯಕ 17 ಮಂದಿಯ ಕುಟುಂಬಸ್ಥರು ಈ ರಾಜಕೀಯ ದೊಂಬರಾಟವನ್ನು ಕಂಡು ಏನನ್ನಬಹುದು.

ಗಲ್ಲು ಶಿಕ್ಷೆಗೇ ಗಲ್ಲುಶಿಕ್ಷೆ
ಇನ್ನೂ ದೌರ್ಭಾಗ್ಯದ ಸಂಗತಿಯೆಂದರೆ ದೇಶದಲ್ಲಿ ಗಲ್ಲು ಶಿಕ್ಷೆ ಎಂಬುದು ಸ್ವಯಂ ಗಲ್ಲುಶಿಕ್ಷೆಗೆ ಗುರಿಯಾಗಿದೆ. ಇನ್ನು ಈ ದೇಶದಲ್ಲಿ ಗಲ್ಲು ಶಿಕ್ಷೆ ಇರದು. ಏಕೆಂದರೆ ಗಲ್ಲುಶಿಕ್ಷೆಗೆ ಗುರಿಯಾಗುವವರು ಜಾಣತನದಿಂದ ನ್ಯಾಯ ಪ್ರಕ್ರಿಯೆನ್ನು ವಿಳಂಬಗೊಳಿಸುತ್ತಾ ಸಾಗಿದರೆ ಸಾಕು... ನ್ಯಾಯದಾನ ವಿಳಂಬವಾಯಿತೆಂದು ನೆಪವೊಡ್ಡಿ ಕುಣಿಕೆಯಿಂದ ಪಾರಾಗಬಹುದು.

ಏಳು ಮಂದಿಗೆ ವೀರೋಚಿತ ಸ್ವಾಗತ ಪ್ರಾಪ್ತಿ
ತಮಿಳುನಾಡಿನಲ್ಲಿ ಈಗಿನ ಪರಿಸ್ಥಿಯನ್ನು ಅವಲೋಕಿಸಿದರೆ ವೆಲ್ಲೂರು ಜೈಲಿನಲ್ಲಿರುವ ಏಳು ಮಂದಿ ಜೈಲಿಂದ ಹೊರಬರುವಾಗ ವೀರೋಚಿತ ಸ್ವಾಗತ ಪ್ರಾಪ್ತಿಯಾಗುವ ಲಕ್ಷಣಗಳು ಕಂಡುಬರುತ್ತಿವೆ. ಪ್ರಾಣ ಹೋಗಿದ್ದು ಪ್ರಧಾನಿಯದ್ದೇ ಆದರೂ ಪಾತಕಿಗಳನ್ನು ನೇಣಿಗೇರಿಸಿದರೆ ತಮಿಳುನಾಡಿನ ಜನತೆ ಎಲ್ಲಿ ಬೇಜಾರು ಮಾಡಿಕೊಂಡುಬಿಡುತ್ತಾರೋ ಎಂದು ಇದುವರೆಗಿನ ಕೇಂದ್ರ ಸರಕಾರಗಳು ಜಾಣ್ಮೆಯಿಂದ ವಿಳಂಬ ಧೋರಣೆಯನ್ನೇ ಅನುಸರಿಸುತ್ತಾ ಬಂದವು.

bad precedent
ಇದರಿಂದ ಸುಪ್ರೀಂಕೋರ್ಟಿನ ಒಂದು ತೀರ್ಪು ರಾಜಕೀಯ ದುರಂತವಾಗಿ ಪರಿಣಮಿಸಲಿದೆ. ಇದು ಮುಂದೆ ರಾಜಕೀಯ ಅಪಾಯವನ್ನೂ ತಂದೊಡ್ಡಲಿದೆ ಎನ್ನಬಹುದು. ನ್ಯಾಯದಾನ ವಿಳಂಬವಾದರೆ ಅದು ಎಷ್ಟು ಅಪಾಯಕಾರಿಯಾಗಬಲ್ಲದು ಎಂಬುದೂ ಇದರಿಂದ ಇದರಿಂದ ಶೃತಪಡುತ್ತದೆ. ಅದೆಲ್ಲಾ ಇರಲಿ, ಭವಿಷ್ಯದಲ್ಲಿ ಈ ತೀರ್ಪು ಎಂಥಾ bad precedent ಅನ್ನು ಸ್ಥಾಪಿಸಬಹುದು ಎಂಬ ಅರಿವಾದರೂ ಇದೆಯಾ?

ಚುನಾವಣೆ ಎದುರಿಗಿರುವಾಗ ಮತ್ತೂ ದುರಾಸೆ:
ಅಜ್ಮಲ್ ಕಸಬ್, ಅಫ್ಜಲ್ ಗುರುಗಳನ್ನು ನೇಣಿಗೇರಿಸಿ ಅನುಕೂಲಸಿಂಧು ದಿಟ್ಟತನ ತೋರಿದ ಹಾಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ನಿಜಕ್ಕೂ ಹೊಣೆಗೇಡಿತನ ತೋರಿದೆ ಎನ್ನದೆ ಬೇರೆ ವಿಧಿಯಿಲ್ಲ. ಭೀಕರವಾಗಿ ಹತ್ಯಗೀಡಾಗಿದ್ದು ಖುದ್ದು ಕಾಂಗ್ರೆಸ್ ನಾಯಕನೇ. ಆದರೂ ಪಕ್ಷವು ರಾಜಕಾರಣಕ್ಕೆ ತಲೆಬಾಗಿದೆ.
ಅಂದಹಾಗೆ ಚುನಾವಣೆ ಸಂದರ್ಭದಲ್ಲಿ ರಾಜೀವ್ ಹತ್ಯೆಗೆ ಮುಂಚೆ ಪಾತಾಳ ಕಚ್ಚಿದ್ದ ಕಾಂಗ್ರೆಸ್ ರಾಜೀವ್ ಹತ್ಯೆ ನಂತರ ನಡೆದ ಚುನಾವಣೆಯಲ್ಲಿ ಅನುಕಂಪದ ಅಲೆಯೇರಿ ಭಾರಿ ಬಹುಮತದೊಂದಿಗೆ ಅಧಿಕಾರ ಕಬಳಿಸಿತು. ಅಲ್ಲಿಗೆ ರಾಜೀವ್ ಸಾವಿನಿಂದ ಲಾಭ ಮಾಡಿಕೊಂಡಾಗಿದೆ. ಆದರೂ ದುರಾಸೆ ... ಇದೀಗ ಮತ್ತೊಂದು ಚುನಾವಣೆ ಎದುರಿಗಿದೆ. ಇದರಿಂದಲೂ ಒಂದಷ್ಟು ಸ್ಥಾನಗಳನ್ನು ಗೆಬರಿಕೊಳ್ಳುವ ದೂರಾಲೋಚನೆ ರಾಜೀವ್ ಗಾಂಧಿಯ ಕಾಂಗ್ರೆಸ್ ಪಕ್ಷದ್ದಾಗಿದೆ.












Click it and Unblock the Notifications