ಮೋದಿ, ಅಮಿತ್ ಶಾ ಕಾಲಿಗೆರಗುವ ಮುಖ್ಯಮಂತ್ರಿ ತಮಿಳುನಾಡಿಗೆ ಬೇಕಿಲ್ಲ: ರಾಹುಲ್ ಗಾಂಧಿ
ಚೆನ್ನೈ, ಮಾರ್ಚ್ 28: ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಕಾಲಿಗೆರಗುವ ಮುಖ್ಯಮಂತ್ರಿ ತಮಿಳುನಾಡಿಗೆ ಬೇಕಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಭ್ರಷ್ಟಾಚಾರ ಪ್ರಕರಣಗಳಿಂದ ಹೆದರಿರುವ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಕಾಲಿಗೆ ಬೀಳುತ್ತಿದ್ದಾರೆ. ತಮಿಳುನಾಡಿನ ಜನತೆಗೆ ತಲೆಬಾಗುವ ಬದಲು ಬಿಜೆಪಿಯ ನಾಯಕರಿಗೆ ತಲೆ ಬಾಗುತ್ತಿದ್ದಾರೆ.
ತಮಿಳುನಾಡಿಗೆ ಇಂತಹ ಮುಖ್ಯಮಂತ್ರಿ ಅಗತ್ಯವಿಲ್ಲ ಎಂದು ಚೆನ್ನೈನಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ತಮಿಳುನಾಡಿನ ಜನಪ್ರತಿಯಾಗಿ ಮುಖ್ಯಮಂತ್ರಿಯಾಗಿರುವ ಪಳನಿಸ್ವಾಮಿ ಅಮಿ್ತ ಶಾ ಕಾಲಿಗೆ ಬೀಳುತ್ತಿರುವ ಚಿತ್ರವನ್ನು ನಾನು ನೋಡಿದೆ, ಇದು ಬಿಜೆಪಿಯ ಸಂಸ್ಕೃತಿಯಾಗಿದೆ.

ಬಿಜೆಪಿಯಲ್ಲಿ ಕಾಲಿಗೆ ಎರಗುವುದು ಅನಿವಾರ್ಯ, ಇಂಥಹ ವ್ಯವಸ್ಥೆಯ ವಿರುದ್ಧ ಹೋರಾಡಲೆಂದೇ ನಾನು ತಮಿಳುನಾಡಿಗೆ ಬಂದಿದ್ದೇನೆ. ತಮಿಳುನಾಡು ಮುಖ್ಯಮಂತ್ರಿ ಕಾರ್ಯವನ್ನು ಒಪ್ಪಲಾಗುವುದಿಲ್ಲ. ಇದು ನನಗೆ ಕೋಪ ತರಿಸಿದೆ ಎಂದು ಹೇಳಿದ್ದಾರೆ.
ತಮಿಳರೊಂದಿಗೆ ಸಮಾನತೆಯ ಸಂಬಂಧವನ್ನು ನಾನು ಬಯಸುತ್ತೇನೆ, ನಾನು ತಮಿಳುನಾಡು ಭಾರತವೆಂದರೆ ಭಾರತವೂ ತಮಿಳುನಾಡು ಎಂದು ಒಪ್ಪಬೇಕಾಗುತ್ತದೆ. ನನಗೆ ಭಾರತದಲ್ಲಿ ತಮಿಳುನಾಡು ತಲೆಬಾಗುವುದು ಒಪ್ಪಲಾಗದು ಇದು ಬೇರೆಯ ಸಂಕೇತವನ್ನು ನೀಡುತ್ತದೆ ಎಂದು ಹೇಳಿದರು.
ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ದರದ ಮೇಲೆ 17/18 ಪೈಸೆ ಕಡಿಮೆ ಮಾಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಭಾನುವಾರ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಚುನಾವಣೆ ಕಾರಣದಿಂದ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಪ್ರತೀ ಲೀಟರ್ ದರದಲ್ಲಿ 17/18 ಪೈಸೆ ಕಡಿಮೆ ಮಾಡಿದೆ. ಈ ಪ್ರಮಾಣದ ಉಳಿತಾಯದೊಂದಿಗೆ ನೀವು ಏನು ಮಾಡುತ್ತೀರಿ? ಎಂದು ವ್ಯಂಗ್ಯವಾಡಿದ್ದಾರೆ.
ಈ ಹಿಂದೆ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದ್ದ ರಾಹುಲ್ ಗಾಂಧಿ, ಕೇಂದ್ರದ ಎನ್‌ಡಿಎ ನೇತೃತ್ವದ ಬಿಜೆಪಿ ಸರ್ಕಾರದ ಆರ್ಥಿಕ ನೀತಿಯಿಂದಾಗಿ ದೇಶದಲ್ಲಿ ನಿರುದ್ಯೋಗ, ಬಡತನ ಹೆಚ್ಚಾಗಿದೆ ಎಂದು ಹೇಳಿದ್ದರು.












Click it and Unblock the Notifications