ರೇಸರ್ ಅಶ್ವಿನ್ ಸುಂದರ್ ಕಾರು ಅಪಘಾತ, ಬೆಂಕಿಗೆ ಆಹುತಿ

Posted By:
Subscribe to Oneindia Kannada

ಚೆನ್ನೈ, ಮಾರ್ಚ್ 18: ವೃತ್ತಿಪರ ಕಾರು ರೇಸರ್ ಅಶ್ವಿನ್ ಸುಂದರ್ ದುರಂತ ಸಾವನ್ನಪ್ಪಿದ್ದಾರೆ. ಅಶ್ವಿನ್ ಸುಂದರ್ ಹಾಗೂ ಅವರ ಪತ್ನಿ ನಿವೇದಿತಾ ಅವರಿದ್ದ ಕಾರು ಮರಕ್ಕೆ ಡಿಕ್ಕಿ ಹೊಡೆದು, ಬೆಂಕಿ ಹೊತ್ತಿಕೊಂಡಿದ್ದು, ಇಬ್ಬರು ಕಾರಿನಲ್ಲೇ ದಹನವಾಗಿರುವ ಘಟನೆ ಶನಿವಾರ ಮುಂಜಾನೆ ಚೆನ್ನೈನ ಮರೀನಾ ಪ್ರದೇಶದಲ್ಲಿ ನಡೆದಿದೆ.

ಚೆನ್ನೈನ ಸಂತೋಮೆ ರಸ್ತೆಯಲ್ಲಿ ಶನಿವಾರ ಬೆಳಗ್ಗೆ ಅಶ್ವಿನ್ ಹಾಗೂ ನಿವೇದಿತಾ ಅವರಿದ್ದ ಕಾರು ರಸ್ತೆ ಬದಿಯಲ್ಲಿದ್ದ ಮರಕ್ಕೆ ಜೋರಾಗಿ ಅಪ್ಪಳಿಸಿದೆ. ಮರ ಹಾಗೂ ಗೋಡೆಯೊಂದರ ಮಧ್ಯೆ ಸಿಲುಕಿದ್ದ ಕಾರಿನಿಂದ ಹೊರ ಬರಲು ಇಬ್ಬರು ಯತ್ನಿಸಿ ವಿಫಲರಾಗಿದ್ದಾರೆ. ಈ ಸಂದರ್ಭದಲ್ಲಿ ಬಿಎಂಡಬ್ಲ್ಯೂ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. [ವೈರಲ್ ವಿಡಿಯೋ: ಅಶ್ವಿನ್ ದಂಪತಿ ಕಾರಿನಲ್ಲಿ ಬೆಂಕಿಗೆ ಆಹುತಿ]

ಈ ದೃಶ್ಯ ನೀಡಿದ ದಾರಿಹೋಕರು ತಕ್ಷಣವೇ ಪೊಲೀಸ್ ಹಾಗೂ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ತಿಳಿಸಿದ್ದಾರೆ. ಆದರೆ, ಸಾರ್ವಜನಿಕರು ಹಾಗೂ ಸಿಬ್ಬಂದಿ ನೆರವಿಗೆ ಬರುವಷ್ಟರಲ್ಲೇ ಇಬ್ಬರು ಬೆಂಕಿಗೆ ಆಹುತಿಯಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a tragic incident professional car racer Ashwin Sundar and his wife Nivedhitha were charred to death after their BMW car rammed a roadside tree in Chennai. The incident took place on the Santhome High Road in Chennai in the early hours of Saturday.
Please Wait while comments are loading...