ಜನರ ಬಗ್ಗೆ ಚಿಂತಿಸದ ಪ್ರಧಾನಿ ಒಬ್ಬ ಸ್ಯಾಡಿಸ್ಟ್: ಎಂಕೆ ಸ್ಟಾಲಿನ್

Recommended Video

      ನರೇಂದ್ರ ಮೋದಿಯನ್ನ ತರಾಟೆಗೆ ತೆಗೆದುಕೊಂಡ ತಮಿಳುನಾಡು ಮುಖ್ಯಸ್ಥ ಎಂ ಕೆ ಸ್ಟಾಲಿನ್ | Oneindia Kannada

      ವಿಲ್ಲುಪುರಂ (ತಮಿಳುನಾಡು) ಡಿಸೆಂಬರ್ 24: ತಮಿಳುನಾಡಿನ ಜನರನ್ನು ಕಡೆಗಣಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಒಬ್ಬ ಸ್ಯಾಡಿಸ್ಟ್ ಎಂದು ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಹೇಳಿದ್ದಾರೆ.

      ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿಯಾದರೆ ಸ್ಥಿರ ಸರ್ಕಾರವನ್ನು ನೀಡಬಲ್ಲರು ಎಂದು ಸ್ಟಾಲಿನ್ ಪುನರುಚ್ಚರಿಸಿದ್ದಾರೆ.

      ಪ್ರಧಾನಿ ಅಭ್ಯರ್ಥಿ ಸ್ಥಾನಕ್ಕೆ ರಾಹುಲ್ ಗಾಂಧಿ ಅವರ ಹೆಸರನ್ನು ಸೂಚಿಸುತ್ತೇನೆ ಎಂದು ಕಳೆದ ವಾರ ಹೇಳಿಕೆ ನೀಡಿದ್ದ ಎಂಕೆ ಸ್ಟಾಲಿನ್, ಮಹಾಮೈತ್ರಿಕೂಟದ ಇತರೆ ನಾಯಕರ ಅಸಮಾಧಾನಕ್ಕೆ ಕಾರಣರಾಗಿದ್ದರು.

      ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಸೇರಿದಂತೆ ಮಹಾಮೈತ್ರಿಕೂಟದ ಭಾಗವಾಗುತ್ತಿರುವ ಪ್ರಮುಖ ವಿರೋಧ ಪಕ್ಷಗಳ ವಿವಿಧ ನಾಯಕರು ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ.

      ದೆಹಲಿಯಲ್ಲಿ ಮುಂದಿನ ವರ್ಷದಿಂದ ನೂತನ ಪ್ರಧಾನಿಯನ್ನು ನೋಡಲು ಬಯಸುತ್ತೇನೆ. ಹೀಗಾಗಿ ತಮಿಳುನಾಡಿನಿಂದ ರಾಹುಲ್ ಗಾಂಧಿ ಅವರ ಹೆಸರನ್ನು ಸೂಚಿಸುತ್ತೇನೆ ಎಂದು ಸ್ಟಾಲಿನ್ ಹೇಳಿಕೆ ನೀಡಿದ್ದರು.

      ಇದು ಉಳಿದ ಪ್ರಧಾನಿ ಆಕಾಂಕ್ಷಿಗಳ ಕೋಪಕ್ಕೆ ಕಾರಣವಾದರೂ, ಯಾವ ನಾಯಕರೂ ಅದರ ವಿರುದ್ಧ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಆದರೆ, ಪರೋಕ್ಷವಾಗಿ ರಾಹುಲ್ ಗಾಂಧಿ ಅವರ ಹೆಸರನ್ನು ತಾವು ಸೂಚಿಸುವುದಿಲ್ಲ ಎನ್ನುವ ಮೂಲಕ ಪ್ರಧಾನಿ ಹುದ್ದೆಯ ಮೇಲೆ ತಾವು ಕಣ್ಣಿಟ್ಟಿರುವುದನ್ನು ಸಾಬೀತುಪಡಿಸಿದ್ದರು.

      ಸ್ಥಿರ ಸರ್ಕಾರ ನೀಡಬಲ್ಲರು

      ಸ್ಥಿರ ಸರ್ಕಾರ ನೀಡಬಲ್ಲರು

      ರಾಹುಲ್ ಗಾಂಧಿ ಸ್ಥಿರ ಸರ್ಕಾರ ನೀಡಬಲ್ಲರು ಎಂದು ನಾನು ಹೇಳಿಕೆ ನೀಡಿದ್ದೇನೆ. ಪ್ರಧಾನಿ ಹುದ್ದೆಗೆ ರಾಹುಲ್ ಗಾಂಧಿ ಅವರ ಹೆಸರನ್ನು ಪ್ರಸ್ತಾಪಿಸಿದ್ದಕ್ಕೆ ಕೆಲವರು ಪ್ರಶ್ನಿಸಿದ್ದಾರೆ. ಅದರಲ್ಲಿ ತಪ್ಪೇನಿದೆ ಎಂದು ಸ್ಟಾಲಿನ್ ಅವರು ಭಾನುವಾರ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಈ ಮೂಲಕ ಒಂದು ವಾರದ ಹಿಂದೆ ತಾವು ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

      ಪ್ರಧಾನಿ ಒಬ್ಬ ಸ್ಯಾಡಿಸ್ಟ್

      ಪ್ರಧಾನಿ ನರೇಂದ್ರ ಮೋದಿ ಅವರೊಬ್ಬ ಸ್ಯಾಡಿಸ್ಟ್ ಎಂದು ಹೇಳಿಕೆ ನೀಡಿದ್ದ ಸ್ಟಾಲಿನ್, ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ.

      ತಮಿಳುನಾಡಿನ ಜನರ ಬಗ್ಗೆ ಸ್ವಲ್ಪವೂ ಚಿಂತಿಸದೆ ಇದ್ದರೆ ಪ್ರಧಾನಿಯನ್ನು ಸ್ಯಾಡಿಸ್ಟ್ ಎಂದೇ ಕರೆಯುತ್ತೇನೆ. ಮತ್ತು ಇದು ವೈಯಕ್ತಿಕ ಹೇಳಿಕೆಯಲ್ಲ. ಪ್ರಧಾನಿಯಾಗಿ ಅವರು ಒಬ್ಬ ಸ್ಯಾಡಿಸ್ಟ್. ಇದನ್ನು ಮತ್ತೆ ಮತ್ತೆ ಹೇಳುತ್ತಿದ್ದೇನೆ. ಹೀಗಾಗಿ ನಮಗೆ ಬದಲಾವಣೆ ಬೇಕು.

      ಹೊಸ ಭಾರತದ ನಿರ್ಮಾಣ

      ಹೊಸ ಭಾರತದ ನಿರ್ಮಾಣ

      2018ರಲ್ಲಿ ತಲೈವರ್ ಕರುಣಾನಿಧಿ ಅವರ ಪ್ರತಿಮೆಯ ಸಂದರ್ಭದಲ್ಲಿ ನಾವು ದೆಹಲಿಯಲ್ಲಿ ಹೊಸ ಪ್ರಧಾನಿಯನ್ನು ಸ್ಥಾಪಿಸುತ್ತೇವೆ. ನಾವು ಹೊಸ ಭಾರತವನ್ನು ನಿರ್ಮಿಸುತ್ತೇನೆ. ತಲೈವರ್ ಕಲೈನಾರ್ ಅವರ ಮಗನಾಗಿ ತಮಿಳುನಾಡಿನಿಂದ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ನಾನು ಪ್ರಸ್ತಾಪಿಸುತ್ತೇನೆ ಎಂದು ಸ್ಟಾಲಿನ್ ಹೇಳಿದ್ದರು.

      ಒಂದಾದರೂ ಸಂದೇಶ ನೀಡಿದ್ದಾರೆಯೇ?

      ಒಂದಾದರೂ ಸಂದೇಶ ನೀಡಿದ್ದಾರೆಯೇ?

      ಗಜ ಚಂಡಮಾರುತದಿಂದ ಭಾರಿ ನಷ್ಟವಾಗಿದೆ. 65 ಮಂದಿ ಮೃತಪಟ್ಟಿದ್ದಾರೆ. ಈ ವಿಕೋಪದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಒಂದಾದರೂ ಸಂತಾಪ ಸಂದೇಶ ಬಂದಿದೆಯೇ? ಸಂಕಷ್ಟಕ್ಕೆ ಒಳಗಾದ ಜನರನ್ನು ಭೇಟಿ ಮಾಡಲು ಅವರಿಗೆ ಸಮಯವಿಲ್ಲ. ಅವರಿಗೆ ವಿದೇಶ ಪ್ರವಾಸ ಮಾಡುವುದಕ್ಕೇ ಸಮಯ ಸಿಗುತ್ತಿಲ್ಲ ಎಂದು ಸ್ಟಾಲಿನ್ ಲೇವಡಿ ಮಾಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+