ದೇಶ ತಳಮಟ್ಟದ ನಾಯಕನನ್ನು ಕಳೆದುಕೊಂಡಿದೆ : ಮೋದಿ ಸಂತಾಪ

Recommended Video

      ಕರುಣಾನಿಧಿ ಸಾವಿಗೆ ಸಂತಾಪ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿ | Oneindia Kannada

      ಚೆನ್ನೈ, ಆಗಸ್ಟ್ 07 : ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಡಿಸಿದರು. ಕರುಣಾನಿಧಿ ಅವರು ಇಂದು ಸಂಜೆ ವಿಧಿವಶರಾದರು.

      ನರೇಂದ್ರ ಮೋದಿ ಅವರು ಮಂಗಳವಾರ ಸಂಜೆ ಎಂ.ಕರುಣಾನಿಧಿ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ ಟ್ವಿಟ್ ಮಾಡಿದ್ದಾರೆ. ಕರುಣಾನಿಧಿ ಅವರು ದೇಶದ ಹಿರಿಯ ನಾಯಕರಾಗಿದ್ದರು ಎಂದು ಮೋದಿ ಟ್ವಿಟ್‌ನಲ್ಲಿ ತಿಳಿಸಿದ್ದಾರೆ.

      PM Narendra Modi condoles death of Karunanidhi

      ಕರುಣಾನಿಧಿ ಅವರು ತಮ್ಮ ಜೀವನವನ್ನು ಬಡವರ ಅಭಿವೃದ್ಧಿಗಾಗಿ ಜೀವನನ್ನು ಮೀಸಲಾಗಿಟ್ಟಿದ್ದರು. ತಳ ಮಟ್ಟದ ನಾಯಕರನ್ನು ನಾವು ಇಂದು ಕಳೆದುಕೊಂಡಿದ್ದೇವೆ ಎಂದು ಮೋದಿ ಟ್ವಿಟರ್‌ನಲ್ಲಿ ಹೇಳಿದ್ದಾರೆ.

      ಕರುಣಾನಿಧಿ ಅವರ ಜೊತೆ ಹಲವು ಬಾರಿ ಮಾತನಾಡುವ ಅವಕಾಶ ಸಿಕ್ಕಿತ್ತು. ಸಾಮಾಜಿಕ ನ್ಯಾಯದ ವಿಚಾರದಲ್ಲಿ ಅವರಿಗೆ ಅಪಾರವಾದ ಕಾಳಜಿ ಇತ್ತು. ತುರ್ತು ಪರಿಸ್ಥಿತಿಯನ್ನು ಅವರು ವಿರೋಧಿಸಿದ್ದನ್ನು ಇಂದಿಗೂ ನೆನಪಿಸಿಕೊಳ್ಳಬೇಕು ಎಂದು ನರೇಂದ್ರ ಮೋದಿ ನೆನಪು ಮಾಡಿಕೊಂಡರು.

      ಎಂ.ಕರುಣಾನಿಧಿ ಅವರ ಕುಟುಂಬ ಮತ್ತು ಡಿಎಂಕೆಯ ಕಾರ್ಯಕರ್ತರ ಜೊತೆ ನಾವಿದ್ದೇವೆ. ಕರುಣಾನಿಧಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮೋದಿ ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+