ಮೋದಿ ಹುಟ್ಟುಹಬ್ಬದ ಸಂಭ್ರಮ, ನವಜಾತ ಶಿಶುಗಳಿಗೆ ಸಿಕ್ತು ಗಿಫ್ಟ್

Recommended Video

      ನರೇಂದ್ರ ಮೋದಿ ಹುಟ್ಟು ಹಬ್ಬದ ಸಂಭ್ರಮ ನವಜಾತ ಶಿಶುಗಳಿಗೆ ಬಂಪರ್ ಗಿಪ್ಟ್ | Oneindia Kannada

      ಚೆನ್ನೈ, ಸೆಪ್ಟೆಂಬರ್ 17: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬವನ್ನು ದೇಶದ ಎಲ್ಲಾ ಬಿಜೆಪಿ ಘಟಕಗಳಲ್ಲಿ ವಿಶೇಷವಾಗಿ ಆಚರಿಸಲಾಗುತ್ತಿದೆ. ಕರ್ನಾಟಕ ಸಮ್ಮಿಶ್ರ ಸರ್ಕಾರದ ಪತನವಾಗುವ ನಿರೀಕ್ಷೆಯಲ್ಲಿ ಕರ್ನಾತಕ ಬಿಜೆಪಿ ಕಾದು ಕುಳಿತಿದೆ. ಮೋದಿ ಅವರ ಆಪ್ತ ವಲಯದ ಕೇಂದ್ರ ಸಚಿವ ಅನಂತ್ ಕುಮಾರ್ ಅವರು ಅನಾರೋಗ್ಯ ಪೀಡಿತರಾಗಿದ್ದು, ಯುಎಸ್ ನಿಂದ ತಜ್ಞ ವೈದ್ಯರ ನೆರವು ಪಡೆದುಕೊಳ್ಳುತ್ತಿದ್ದಾರೆ.

      ಈ ನಡುವೆ ಪಕ್ಕದ ರಾಜ್ಯ ತಮಿಳುನಾಡಿನಲ್ಲಿ ಮೋದಿ ಅವರ 68ನೇ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲಾಗಿದೆ. ತಮಿಳುನಾಡಿನ ಬಿಜೆಪಿ ಅಧ್ಯಕ್ಷೆ , ಪ್ರಸೂತಿ ತಜ್ಞೆ ಡಾ. ತಮಿಳಿಸೈ ಸೌಂದರ್ಯರಾಜನ್ ಅವರು ಇಂದು ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ನವಜಾತ ಶಿಶುಗಳಿಗೆ ಚಿನ್ನದ ರಿಂಗ್ ಹಾಗೂ ಸಿಹಿ ತಿನಿಸು ಹಂಚಿದ್ದಾರೆ.

      ವಿಶ್ವದ ಪ್ರಭಾವಿ ಹಾಗೂ ಜನಪ್ರಿಯ ನಾಯಕರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು ಎಂದು ತಮಿಳುನಾಡು ಬಿಜೆಪಿಯಿಂದ ಟ್ವೀಟ್ ಮಾಡಲಾಗಿದೆ.

      PM Modis 68th birthday: TN BJP gifts gold rings to babies born today

      ತಮಿಳುನಾಡಿನಲ್ಲಿ ಪಕ್ಷದ ನಾಯಕರ ಹುಟ್ಟುಹಬ್ಬದಂದು ಭರ್ಜರಿ ಉಡುಗೊರೆಗಳನ್ನು ನೀಡುವುದು ಸಾಮಾನ್ಯ ಸಂಗತಿ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಹುಟ್ಟುಹಬ್ಬಕ್ಕೆ ಎಐಎಡಿಎಂಕೆ ಪಕ್ಷದಿಂದ ಅಂದು ಜನಿಸಿದ ಏಳು ಕಂದಮ್ಮಗಳಿಗೆ ಚಿನ್ನದ ಉಂಗುರ ನೀಡಲಾಗಿತ್ತು.

      ಪ್ರಧಾನಿ ಮೋದಿ ಅವರು ತಮ್ಮ ನೆಚ್ಚಿನ ಕಾಶಿ ವಿಶ್ವನಾಥನ ಸನ್ನಿಧಿಗೆ ತೆರಳಲಿದ್ದು, ವಾರಣಾಸಿಯಲ್ಲಿ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಜತೆಗೆ 'ಚಲೋ ಜೀತ್ ಹೈ' ಎಂಬ ಚಿತ್ರವನ್ನು ವೀಕ್ಷಿಸುತ್ತಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+