ಪಿಟೀಲು ವಾದಕ ಟಿ.ಎನ್. ಕೃಷ್ಣನ್ ನಿಧನಕ್ಕೆ ಮೋದಿ ಸಂತಾಪ
ಚೆನ್ನೈ, ನ.3: ಖ್ಯಾತ ಪಿಟೀಲು ವಾದಕ ಟಿ.ಎನ್. ಕೃಷ್ಣನ್ (92) ಅವರ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿ, ಟ್ವೀಟ್ ಮಾಡಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಟಿ.ಎನ್. ಕೃಷ್ಣನ್ ಅವರು ತಮ್ಮ ನಿವಾಸದಲ್ಲಿಂದು ಕೊನೆಯುಸಿರೆಳೆದಿದ್ದಾರೆ. ಇವರ ಪುತ್ರರು ವಿಜಿ ಕೃಷ್ಣನ್ ನಟರಾಜನ್, ಶ್ರೀರಾಮ್ ಕೃಷ್ಣನ್ ಇಬ್ಬರು ಪಿಟೀಲು ವಾದಕರಾಗಿದ್ದಾರೆ. ಕೃಷ್ಣನ್ ಸೋದರಿ ಎನ್ ರಾಜಂ ಅವರು ಪಿಟೀಲು ವಾದಕರಾಗಿದ್ದಾರೆ.
ಲಾಲ್ಗುಡಿ ಜಯರಾಮನ್, ಎಂಎಸ್ ಗೋಪಾಲಕೃಷ್ಣನ್ ಜೊತೆಗೆ ಟಿ.ಎನ್ ಕೃಷ್ಣನ್ ಅವರು ಪಿಟೀಲು ವಾದನದಲ್ಲಿ ದಿಗ್ಗಜರೆನಿಸಿಕೊಂಡಿದ್ದಾರೆ.
ನಾರಾಯಣ ಐಯರ್ ಹಾಗೂ ಅಮ್ಮಿನಿ ಅಮ್ಮಲ್ ಅವರ ಪುತ್ರರಾಗಿ ಕೇರಳದ ಕೊಚ್ಚಿಯ ತ್ರಿಪುಣಿಥುರಾದಲ್ಲಿ 1928ರ ಅಕ್ಟೋಬರ್ 6ರಂದು ಕೃಷ್ಣನ್ ಜನಿಸಿದರು. ಅಲೆಪ್ಪಿಯ ಕೆ ಪಾರ್ಥಸಾರಥಿ ಅವರ ಬಳಿ ಮೊದಲಿಗೆ ಸಂಗೀತ ಪಾಠ ಕಲಿತರು. ಅರಿಯಾಕುಡಿ ರಾಮಾನುಜ ಅಯ್ಯಂಗಾರ್ ನಂತರ ಸೆಮ್ಮಂಗುಡಿ ಶ್ರೀನಿವಾಸ್ ಅಯ್ಯರ್ ಬಳಿ ಶಿಷ್ಯರಾಗಿದ್ದರು. ಅಯ್ಯದೊರೈ ಮನೆಯಲ್ಲಿ ಆಶ್ರಯ ಪಡೆದಿದ್ದರು.

ದೆಹಲಿ ವಿಶ್ವವಿದ್ಯಾಲಯ ಸ್ಕೂಲ್ ಆಫ್ ಮ್ಯೂಸಿಕ್ ನಲ್ಲಿ ಡೀನ್ ಹಾಗೂ ಚೆನ್ನೈನ ಮ್ಯೂಸಿಕ್ ಕಾಲೇಜ್ ನಲ್ಲಿ ಪ್ರೊಫೆಸರ್ ಆಗಿದ್ದರು.
1974ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಫೆಲೋಶಿಪ್, ಸಂಗೀತ ಕಲಾನಿಧಿ, ಸಂಗೀತಾ ಕಲಾಶಿಖಾಮಣಿ ಪ್ರಶಸ್ತಿಗೆ ಭಾಜನರಾಗಿದ್ದರು.
ಭಾರತ ಸರ್ಕಾರದಿಂದ ಪದ್ಮಶ್ರೀ ಹಾಗೂ ಪದ್ಮಭೂಷಣ ನೀಡಿ ಗೌರವಿಸಲಾಗಿದೆ.
The demise of noted violinist Shri TN Krishnan leaves a big void in the world of music. His works beautifully encapsulated a wide range of emotions and strands of our culture. He was also an outstanding mentor to young musicians. Condolences to his family and admirers. Om Shanti.
— Narendra Modi (@narendramodi) November 3, 2020
'' ಖ್ಯಾತ ಪಿಟೀಲು ವಾದಕ ಶ್ರೀ ಟಿ.ಎಸ್. ಕೃಷ್ಣನ್ ಅವರ ನಿಧನವು ಸಂಗೀತ ಲೋಕದಲ್ಲಿ ದೊಡ್ಡ ನಷ್ಟವನ್ನುಂಟು ಮಾಡಿದೆ. ಅವರು ತಮ್ಮ ವಾದನದ ಮೂಲಕವೇ ನಮ್ಮ ಸಂಸ್ಕೃತಿಯ ವ್ಯಾಪಕವಾದ ಭಾವನೆಗಳನ್ನು ಮತ್ತು ಎಳೆಗಳನ್ನು ಸುಂದರವಾಗಿ ಬಿಡಿಸಿದ್ದರು. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಅವರ ಸಾವಿನ ನೋವು ತಡೆಯುವ ಶಕ್ತಿ ದೊರೆಯಲಿ'' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.












Click it and Unblock the Notifications