ಚಿತ್ರಗಳಲ್ಲಿ ಮೋದಿ ಜತೆಯಲ್ಲಿ ಸೂಪರ್ ಸ್ಟಾರ್ ರಜನಿ

ಚೆನ್ನೈ, ಏ.14: ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಪೂರ್ವ ನಿಗದಿಯಂತೆ ಭಾನುವಾರ ಸಂಜೆ ಭೇಟಿ ಮಾಡಿದ್ದಾರೆ. ಈ ಬಗ್ಗೆ ಮೋದಿ ಅವರು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.ತಮಿಳು ಹೊಸ ವರ್ಷಾಚರಣೆಗೆ ಶುಭ ಹಾರೈಸಲು ಮೋದಿ ಅವರು ರಜನಿಕಾಂತ್ ಅವರನ್ನು ಭೇಟಿಯಾಗಿದ್ದರು ಎಂದು ಒಂದು ಸಾಲಿನಲ್ಲಿ ಭೇಟಿಯ ಕುತೂಹಲವನ್ನು ತಣಿಸಬಹುದು.

ಆದರೆ, ಸಾವಿರಾರು ಅಭಿಮಾನಿಗಳು, ರಾಜಕೀಯ ಪಂಡಿತರು, ವಿವಿಧ ಪಕ್ಷಗಳ ಕುತೂಹಲಕ್ಕೆ ಕಾರಣವಾದ ಈ ಇಬ್ಬರು ಜನಪ್ರಿಯ ನಾಯಕರ ಭೇಟಿಯ ಹಿಂದಿನ ಉದ್ದೇಶ, ನಡೆದ ಮಾತುಕತೆ ಇನ್ನೂ ನಿಗೂಢ. ಸದ್ಯಕ್ಕೆ ಇಬ್ಬರು ದಿಗ್ಗಜರ ಭೇಟಿಯ ಚಿತ್ರಗಳು ಇಲ್ಲಿವೆ.

ಮನೆಗೆ ಬಂದ ಅತಿಥಿಯನ್ನು ಆತ್ಮೀಯವಾಗಿ ಸ್ವಾಗತಿಸಿದ ಶಿವಾಜಿರಾವ್ ಗಾಯಕ್ವಾಡ್ ಅಲಿಯಾಸ್ ರಜನಿಕಾಂತ್ ಅವರು ಮೋದಿ ಅವರಿಗೆ ಶಾಲು ಹೊದೆಸಿ ಸನ್ಮಾನಿಸಿದ್ದಾರೆ. ಇದೇ ಚಿತ್ರವನ್ನು ಮೋದಿ ಅವರು ಟ್ವೀಟ್ ಮಾಡಿದ್ದರು. ಟ್ವೀಟ್(@narendramodi) ಸದ್ಯಕ್ಕೆ 4,427 ರೀಟ್ವೀಟ್ಸ್, 3,511 ಫೇವರೀಟ್ ಟ್ವೀಟ್ ಆಗಿ ಕಾಣಿಸಿಕೊಂಡಿದೆ. [ರಜನಿಕಾಂತ್ ಭೇಟಿ ಮಾಡಿದ ನರೇಂದ್ರ ಮೋದಿ]

ರಜನಿ ಅವರ ಗೆಳೆಯರಾದ ಅಂಬರೀಷ್, ಶತ್ರುಘ್ನ ಸಿನ್ಹಾ, ಮೋಹನ್ ಬಾಬು ಸೇರಿದಂತೆ ಅನೇಕ ಆಪ್ತರು ರಾಜಕೀಯದಲ್ಲಿದ್ದರೂ ರಜನಿ ಮಾತ್ರ ಆದಷ್ಟು ರಾಜಕೀಯ ಪಕ್ಷಗಳಿಂದ ದೂರವೇ ಉಳಿದಿದ್ದಾರೆ.

ಇದೊಂದು ಸೌಹಾರ್ದ ಭೇಟಿ ಎಂದ ರಜನಿ

ಇದೊಂದು ಸೌಹಾರ್ದ ಭೇಟಿ ಎಂದ ರಜನಿ

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ನನ್ನ ಸ್ನೇಹಿತರು ಇದೊಂದು ಸೌಹಾರ್ದಯುತ ಭೇಟಿ ಎಂದು ರಜನಿ ಕಾಂತ್ ಘೋಷಣೆ

ನಮ್ಮಿಬ್ಬರ ಭೇಟಿಗೆ ರಾಜಕೀಯ ಲೇಪ ಬೇಡ

ನಮ್ಮಿಬ್ಬರ ಭೇಟಿಗೆ ರಾಜಕೀಯ ಲೇಪ ಬೇಡ

ಮೋದಿ ಭೇಟಿಗೂ ಮುನ್ನ ಬಿಜೆಪಿಯಲ್ಲಿ ಮನವಿ ಮಾಡಿಕೊಂಡಿದ್ದ ರಜನಿಕಾಂತ್ ಅವರು ಯಾವುದೇ ಕಾರಣಕ್ಕೂ ನಮ್ಮಿಬ್ಬರ ಭೇಟಿಗೆ ರಾಜಕೀಯ ಬಣ್ಣ ಬರಬಾರದು ಹಾಗೂ ಪ್ರಚಾರಕ್ಕಾಗಿ ಇದನ್ನು ಬಳಸಬಾರದು ಎಂದು ಷರತ್ತು ವಿಧಿಸಿದ್ದರು.

ರಜನಿ ಮನವಿ ಪುರಸ್ಕರಿಸಿದ ಬಿಜೆಪಿ

ರಜನಿ ಮನವಿ ಪುರಸ್ಕರಿಸಿದ ಬಿಜೆಪಿ

ಮೋದಿ ಭೇಟಿಗೂ ಮುನ್ನ ರಜನಿ ಮಾಡಿಕೊಂಡ ಮನವಿಯಂತೆ ನಡೆದುಕೊಳ್ಳುವುದಾಗಿ ತಮಿಳುನಾಡಿನ ಬಿಜೆಪಿ ಘಟಕದ ಮುಖ್ಯಸ್ಥ ಪ್ರಧಾನ ಕಾರ್ಯದರ್ಶಿ ಮುರಳಿಧರ್ ರಾವ್ ಭರವಸೆ ನೀಡಿದ್ದರು.

ಶುಭ ಹಾರೈಕೆ ಹೇಳಲು ಬಂದಿದ್ದೇನೆ: ಮೋದಿ

ಶುಭ ಹಾರೈಕೆ ಹೇಳಲು ಬಂದಿದ್ದೇನೆ: ಮೋದಿ

ಕರ್ನಾಟಕದಲ್ಲಿ ಭಾರತ್ ವಿಜಯ್ ಯಾತ್ರೆ ಸಮಾವೇಶ ಮುಗಿಸಿದ ನಂತರ ಮೋದಿ ಅವರು ಚೆನ್ನೈನ ಪೊಯೀಸ್ ಗಾರ್ಡನ್ ನಲ್ಲಿರುವ ರಜನಿಕಾಂತ್ ಅವರ ನಿವಾಸಕ್ಕೆ ತೆರಳಿ ರಜನಿ ಹಾಗೂ ಅವರ ಕುಟುಂಬಕ್ಕೆ 'ತಮಿಳರ ಹೊಸವರ್ಷದ' ಶುಭ ಹಾರೈಕೆ ಸಲ್ಲಿಸಿದರು.

ರಜನಿ ಭೇಟಿ ನಂತರ ಮೋದಿ ಟ್ವೀಟ್

ರಜನಿ ಭೇಟಿ ನಂತರ ಮೋದಿ ಟ್ವೀಟ್

ರಜನಿ ಭೇಟಿ ನಂತರ ಮೋದಿ ಟ್ವೀಟ್ ಮಾಡಿ ಇಬ್ಬರು ಜತೆಗಿರುವ ಚಿತ್ರ ಪ್ರಕಟಿಸಿದ್ದರು.

ಇಬ್ಬರಲ್ಲೂ ಆತ್ಮೀಯತೆ ಎದ್ದು ಕಾಣುತ್ತಿತ್ತು

ಇಬ್ಬರಲ್ಲೂ ಆತ್ಮೀಯತೆ ಎದ್ದು ಕಾಣುತ್ತಿತ್ತು

ಮನೆಗೆ ಬಂದ ಅತಿಥಿಯನ್ನು ಆತ್ಮೀಯವಾಗಿ ಸ್ವಾಗತಿಸಿದ ಶಿವಾಜಿರಾವ್ ಗಾಯಕ್ವಾಡ್ ಅಲಿಯಾಸ್ ರಜನಿಕಾಂತ್ ಅವರು ಮೋದಿ ಅವರಿಗೆ ಶಾಲು ಹೊದೆಸಿ ಸನ್ಮಾನಿಸಿದ್ದಾರೆ. ಇದೇ ಚಿತ್ರವನ್ನು ಮೋದಿ ಅವರು ಟ್ವೀಟ್ ಮಾಡಿದ್ದರು

ರಜನಿಕಾಂತ್ ಅವರು ಬಿಜೆಪಿಗೆ ಬೆಂಬಲ?

ರಜನಿಕಾಂತ್ ಅವರು ಬಿಜೆಪಿಗೆ ಬೆಂಬಲ?

ರಜನಿಕಾಂತ್ ಅವರು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದೇ ಆದಲ್ಲಿ ತಮಿಳುನಾಡಿನಲ್ಲಿ ಡಿಎಂಕೆ ಹಾಗೂ ಎಐಎಡಿಎಂಕೆಗೆ ಭಯ ಶುರುವಾಗುವುದು ಗ್ಯಾರಂಟಿ, ನೆಲೆ ಇಲ್ಲದ ಬಿಜೆಪಿ ಹೆಮ್ಮೆರದಂತೆ ತಲೆ ಎತ್ತುವ ಸಾಧ್ಯತೆಯಿದೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿಗೆ ಮತ ಹಾಕಿ ಎಂದಿದ್ದ ರಜನಿ

ಬಿಜೆಪಿಗೆ ಮತ ಹಾಕಿ ಎಂದಿದ್ದ ರಜನಿ

ಈ ಹಿಂದೆ ಬಿಜೆಪಿಗೆ ಮತ ಹಾಕಿ ಎಂದಿದ್ದ ರಜನಿ ವಿರುದ್ಧ ಪಿಎಂಕೆ ಪಕ್ಷ ಕಿಡಿಕಾರಿತ್ತು. ರಜನಿ ಅವರ ಆಗ ಬಾಬಾ ಚಿತ್ರ ಪ್ರದರ್ಶನಕ್ಕೂ ಅಡ್ಡಿ ಉಂಟಾಗಿತ್ತು.

ಜಯಲಲಿತಾ ಸೀಟು ಕಳೆದುಕೊಂಡಿದ್ದರು

ಜಯಲಲಿತಾ ಸೀಟು ಕಳೆದುಕೊಂಡಿದ್ದರು

ಜಯಲಲಿತಾ ಅವರನ್ನು ಗೆಲ್ಲಿಸಿದರೆ ತಮಿಳುನಾಡಿಗೆ ದೊಡ್ಡ ದುರಂತ ಕಾದಿದೆ ಎಂದು ರಜನಿ ಘೋಷಿಸುತ್ತಿದ್ದಂತೆ ಜಯಲಲಿತಾ ಅವರು ಸೀಟುಗಳನ್ನು ಕಳೆದುಕೊಂಡು ಡಿಎಂಕೆಗೆ ಅಧಿಕಾರ ನೀಡಬೇಕಾಗಿ ಬಂದಿತ್ತು. ಆದರೆ, ಮುಂದಿನ ಚುನಾವಣೆಯಲ್ಲಿ ರಜನಿ ಯಾವುದೇ ಪಕ್ಷದ ಪರ ಅಥವಾ ವಿರೋಧ ಹೇಳಿಕೆ ನೀಡಲಿಲ್ಲ.

ರಾಜಕೀಯದಿಂದ ರಜನಿ ಎಂದಿಗೂ ದೂರ ದೂರ

ರಾಜಕೀಯದಿಂದ ರಜನಿ ಎಂದಿಗೂ ದೂರ ದೂರ

ರಾಜಕೀಯವಾಗಿ ಎಲ್ಲಾ ಪಕ್ಷಗಳ ಬಲಾಬಲದ ಬಗ್ಗೆ ಮಾಹಿತಿ ಹೊಂದಿರುವ ರಜನಿ ಅವರು ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸುವುದಾಗಲಿ, ಯಾವುದೇ ಪಕ್ಷದ ಪರ ಪ್ರಚಾರ ಮಾಡುವುದಾಗಿ ಮಾಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+