ವೈರಲ್ ವಿಡಿಯೋ: ಅಶ್ವಿನ್ ದಂಪತಿ ಕಾರಿನಲ್ಲಿ ಬೆಂಕಿಗೆ ಆಹುತಿ

Posted By:
Subscribe to Oneindia Kannada

ಚೆನ್ನೈ, ಮಾರ್ಚ್ 18: ವೃತ್ತಿಪರ ಕಾರು ರೇಸರ್ ಅಶ್ವಿನ್ ಸುಂದರ್ ಹಾಗೂ ಅವರ ಪತ್ನಿ ನಿವೇದಿತಾ ದುರಂತ ಸಾವಿನ ಸೂತಕ ಸಾಮಾಜಿಕ ಜಾಲ ತಾಣಗಳಿಗೂ ಆವರಿಸಿದೆ. ಸಾರ್ವಜನಿಕರು, ಸೆಲೆಬ್ರಿಟಿಗಳು, ಕ್ರೀಡಾಭಿಮಾನಿಗಳು ಈ ದುರಂತ ಅಂತ್ಯಕ್ಕೆ ಕಂಬನಿ ಮಿಡಿದಿದ್ದಾರೆ.

ಅಶ್ವಿನ್ ಸುಂದರ್ ಹಾಗೂ ಅವರ ಪತ್ನಿ ನಿವೇದಿತಾ ಅವರಿದ್ದ ಐಷಾರಾಮಿ ಬಿಎಂಡಬ್ಲ್ಯೂ ಕಾರು ಮರಕ್ಕೆ ಡಿಕ್ಕಿ ಹೊಡೆದ ಬಳಿಕ ಬೆಂಕಿ ಹೊತ್ತಿಕೊಂಡಿದ್ದು ಎಲ್ಲರನ್ನು ಹೆಚ್ಚು ಆತಂಕಗೊಳಿಸಿದೆ. ಐಷಾರಾಮಿ ಕಾರಿನ ಕಥೆಯೇ ಹೀಗಾದರೆ ಹೇಗೆ? ರೇಸ್ ಕಾರ್ ಓಡಿಸುವ ಅಶ್ವಿನ್ ಅವರ ಹಿಡಿತಕ್ಕೆ ಸಿಗದಂತೆ ಕಾರು ನಿಯಂತ್ರಣ ತಪ್ಪಿದಾದರೂ ಹೇಗೆ?[ರೇಸರ್ ಅಶ್ವಿನ್ ಸುಂದರ್ ಕಾರು ಅಪಘಾತ, ಬೆಂಕಿಗೆ ಆಹುತಿ]

ಚೆನ್ನೈನ ಸಂತೋಮೆ ರಸ್ತೆಯಲ್ಲಿ ಶನಿವಾರ ಮುಂಜಾನೆ 1.30ರ ಸುಮಾರಿಗೆ ಅಶ್ವಿನ್ ಹಾಗೂ ನಿವೇದಿತಾ ಅವರಿದ್ದ ಕಾರು ರಸ್ತೆ ಬದಿಯಲ್ಲಿದ್ದ ಮರಕ್ಕೆ ಜೋರಾಗಿ ಅಪ್ಪಳಿಸಿದೆ.

ಮರ ಹಾಗೂ ಗೋಡೆಯೊಂದರ ಮಧ್ಯೆ ಸಿಲುಕಿದ್ದ ಕಾರಿನಿಂದ ಹೊರ ಬರಲು ಇಬ್ಬರು ಯತ್ನಿಸಿ ವಿಫಲರಾಗಿದ್ದಾರೆ. ಈ ಸಂದರ್ಭದಲ್ಲಿ ಬಿಎಂಡಬ್ಲ್ಯೂ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಈ ದೃಶ್ಯ ನೋಡಿದ ಸಾರ್ವಜನಿಕರು ಸಹಾಯ ಹಸ್ತ ಚಾಚುವಷ್ಟರಲ್ಲೇ ಎಲ್ಲವೂ ಸುಟ್ಟು ಭಸ್ಮವಾಗಿದೆ. ಘಟನೆಯ ವಿಡಿಯೋ ಇಲ್ಲಿದೆ ನೋಡಿ...

ಮನೆ ಬದಲಿಗೆ ಮಸಣಕ್ಕೆ

ಮನೆ ಬದಲಿಗೆ ಮಸಣಕ್ಕೆ

ಅಶ್ವಿನ್ ಹಾಗೂ ನಿವೇದಿತಾ ಅವರು ಸ್ನೇಹಿತರೊಬ್ಬರ ಮನೆಯಲ್ಲಿ ಪಾರ್ಟಿ ಮುಗಿಸಿಕೊಂಡು ತಡರಾತ್ರಿ ತಮ್ಮ ಮನೆಗೆ ಹಿಂತಿರುಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಪ್ರತ್ಯಕ್ಷ ದರ್ಶಿ ಗಳ ಪ್ರಕಾರ ಯಾವ ಕಾರು, ಯಾರಿದ್ದಾರೆ ಎಂಬುದು ತಿಳಿಯುವಷ್ಟರಲ್ಲಿ ಬೆಂಕಿ ಪ್ರಜ್ವಲಿಸತೊಡಗಿತು. ಕಾರಿನೊಳಗೆ ಇಬ್ಬರು ನರಳಿ, ಸುಟ್ಟು ಹೋಗುತ್ತಿರುವುದು ಮಾತ್ರ ಗೊತ್ತಾಗುತ್ತಿತ್ತು. ನೆರವಿಗಾಗಿ ಪೊಲೀಸ್, ಅಗ್ನಿಶಾಮಕದಳಕ್ಕೆ ಕರೆ ಮಾಡಲಾಯಿತು

ಬಿಎಂಡಬ್ಲ್ಯೂ ಕಾರು ಧಗಧಗ

ಬಿಎಂಡಬ್ಲ್ಯೂ ಕಾರು ಧಗಧಗ

ಘಟನೆ ನಡೆದಾಗ ಸುಂದರ್ ಅವರು ಕಾರು ಚಲಾಯಿಸುತ್ತಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿರುವ ನಿವೇದಿತಾ ಪಕ್ಕದಲ್ಲಿ ಕುಳಿತ್ತಿದ್ದರು. ಕಾರು ಅಪಘಾತಕ್ಕೀಡಾದ ಸಂದರ್ಭದಲ್ಲೇ ದಾರಿಹೋಕರು ಚೆನ್ನೈ ಸಿಟಿ ಪೊಲೀಸ್ ಕಂಟ್ರೋಲ್ ರೂಮಿಗೆ ಕರೆ ಮಾಡಿದ್ದಾರೆ. ಅದ್ಯಾರ್ ಟ್ರಾಫಿಕ್ ವಿಂಗ್ ತಕ್ಷಣವೇ ಘಟನಾ ಸ್ಥಳಕ್ಕೆ ಬಂದಿದೆ. ಮೈಲಾಪುರ್ ನಿಂದ ಅಗ್ನಿಶಾಮಕದಳ ಸಿಬ್ಬಂದಿ ಧಾವಿಸಿ ಬಂದು ಅರ್ಧಗಂಟೆಗಳ ಕಾಲ ತೆಗೆದುಕೊಂಡು ಬೆಂಕಿ ನಂದಿಸಿದ್ದಾರೆ.

ಗುರುತು ಪತ್ತೆ ಕಷ್ಟವಾಯಿತು

ಗುರುತು ಪತ್ತೆ ಕಷ್ಟವಾಯಿತು

ಕಾರಿನಲ್ಲಿ ಸುಟ್ಟು ಕರಕಲಾದ ದಂಪತಿಗಳು ಯಾರು ಎಂದು ಪೊಲೀಸರಿಗೆ ಗುರುತಿಸಲು ಕಷ್ಟವಾಯಿತು. ನಂತರ ಕಾರಿನ ನೋಂದಣಿ ಸಂಖ್ಯೆ ಫಲಕ ಸಿಕ್ಕಿದ್ದರಿಂದ ಗುರುತು ಹಿಡಿಯಲು ಸಾಧ್ಯವಾಯಿತು. ಪೊರೂರು ಸಮೀಪದ ಅಲಪಕ್ಕಾಮ್ ನ ನಿವಾಸಿಗಳಾದ ಅಶ್ವಿನ್ ಸುಂದರ್ ಹಾಗೂ ನಿವೇದಿತಾ ಎಂದು ಪೊಲೀಸರು ಗುರುತು ಪತ್ತೆ ಹಚ್ಚಿ ನಂತರ ಮಾಧ್ಯಮಗಳಿಗೆ ವಿಷಯ ತಿಳಿಸಿದರು. ಸುಟ್ಟು ಕರಕಲಾದ ಬಿಎಂಡಬ್ಲ್ಯೂ ಕಾರಿನ ಚಿತ್ರ ನೋಡಿ

ಎಫ್-4 ವಿಭಾಗದ ಕಾರು ರೇಸ್

ಎಫ್-4 ವಿಭಾಗದ ಕಾರು ರೇಸ್

ಅಶ್ವಿನ್ 2012 ಮತ್ತು 2013ರಲ್ಲಿ ಎಫ್-4 ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದರು. ಎಂ ಆರ್ ಎಫ್ ಕಾರು ರೇಸಿನ ವಿವಿಧ ವಿಭಾಗಗಳಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದರು.

ದುರಂತದ ವಿಡಿಯೋ ನೋಡಿ

ಅಶ್ವಿನ್ ಸುಂದರ್, ಡಾ. ನಿವೇದಿತಾ ಅವರಿದ್ದ ಕಾರು ಮರ ಹಾಗೂ ಗೋಡೆಯ ಮಧ್ಯೆ ಸಿಲುಕಿ ಬೆಂಕಿಗೆ ಆಹುತಿಯಾಗುತ್ತಿರುವ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ.

ಸುರಕ್ಷಿತಾ ನಿಯಮಗಳಿಲ್ಲವೇ

ಐಷಾರಾಮಿ ಕಾರು ಬಿಎಂಡಬ್ಲ್ಯೂ 4 ನಲ್ಲಿ ಇಂಥ ದುರಂತ ಸಂಭವಿಸಿದೆ ಎಂದರೆ ಮಿಕ್ಕ ಕಾರುಗಳ ಗತಿ ಏನು? ಸುರಕ್ಷಾ ಕ್ರಮಗಳು ಹೇಗೆ?

ಅನೇಕರಿಂದ ಸಂತಾಪ

ರೇಸರ್ ಅಶ್ವಿನ್ ಸುಂದರ್ ದಂಪತಿ ಸಾವಿನ ಬಗ್ಗೆ ಅನೇಕರಿಂದ ಸಂತಾಪ ವ್ಯಕ್ತವಾಗಿದೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
In a tragic incident, professional car racer Ashwin Sundar and his wife Nivedhitha were charred to death after their BMW car rammed a roadside tree in Chennai. Social media was shocked and reacted in disbelief about the incident.
Please Wait while comments are loading...