ಮೂರು ತಿಂಗಳಲ್ಲಿ ಎಡಪ್ಪಾಡಿ ಪಳನಿಸ್ವಾಮಿ ಸರಕಾರ ಪತನ: ದಿನಕರನ್

Subscribe to Oneindia Kannada

ಮದುರೈ, ಡಿಸೆಂಬರ್ 24: ಆರ್.ಕೆ. ನಗರ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಪಕ್ಷೇತರ ಅಭ್ಯರ್ಥಿ ಟಿಟಿವಿ ದಿನಕರನ್ ಇನ್ನು ಮೂರು ತಿಂಗಳೊಳಗೆ ತಮಿಳುನಾಡು ಸರಕಾರ ಪತನವಾಗಲಿದೆ ಎಂದು ಅಬ್ಬರಿಸಿದ್ದಾರೆ.

ಆರ್.ಕೆ ನಗರ ಉಪಚುನಾವಣೆ, ಟಿಟಿವಿ ದಿನಕರನ್ ಗೆ ಭರ್ಜರಿ ಜಯ

ಚುನಾವಣಾ ಫಲಿತಾಂಶ ಜನರ ಆಲೋಚನೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಅವರು ಬಣ್ಣಿಸಿದ್ದು, ಎಡಪ್ಪಾಡಿ ಕೆ ಪಳನಿಸ್ವಾಮಿ ಸರಕಾರಕ್ಕೆ ಇನ್ನು ಮೂರೇ ತಿಂಗಳು ಎಂದಿದ್ದಾರೆ."ನಾವು ನಿಜವಾದ ಎಐಎಡಿಎಂಕೆಯವರು. ಆರ್.ಕೆ ನಗರದ ಜನರು ಅಮ್ಮಾ ಉತ್ತರಾಧಿಕಾರಿಯನ್ನು ಚುನಾವಣೆಯಲ್ಲಿ ಆಯ್ಕೆ ಮಾಡಿದ್ದಾರೆ," ಎಂದು ಅವರು ಮದುರೈ ವಿಮಾನ ನಿಲ್ದಾಣದಲ್ಲಿ ಹೇಳಿದ್ದಾರೆ.

Palaniswami government would fall in three months: Dhinakaran

"ಪಕ್ಷದ ಹೆಸರು ಮತ್ತು ಚಿನ್ಹೆ ಚುನಾವಣೆಯಲ್ಲಿ ಪಕ್ಷದ ಗೆಲುವನ್ನು ನಿರ್ಧರಿಸುವುದಿಲ್ಲ. ಮುಖ್ಯವಾಗಿ ಬೇಕಾಗಿರುವುದು ಅಭ್ಯರ್ಥಿಗಳು," ಎಂದು ಟಿಟಿವಿ ದಿನಕರನ್ ಹೇಳಿದ್ದಾರೆ.

ಆರ್.ಕೆ ನಗರ ಉಪಚುನಾವಣೆ: ಮತಎಣಿಕೆ ಕೇಂದ್ರದಲ್ಲಿ ಮಾರಾಮಾರಿ

ಇನ್ನು ತಮಿಳು ಸಿನಿಮಾಗಳಲ್ಲಿ ಬರುವ ಪ್ರಖ್ಯಾತ ವಿಲನ್ ಗಳಾದ ನಂಬಿಯಾರ್ ಮತ್ತು ವೀರಪ್ಪನ್ ಗೆ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಒ. ಪನ್ನೀರ್ ಸೆಲ್ವಂರನ್ನು ಹೋಲಿಸಿದ ಟಿಟಿವಿ ದಿನಕರನ್, "ಎಂ.ಎನ್ ನಂಬಿಯಾರ್ ಅಥವಾ ವೀರಪ್ಪನ್ ಚುನಾವಣೆಗೆ ನಿಂತರೆ ಯಾರಾದರು ಮತ ಹಾಕುತ್ತಾರಾ? ಸದ್ಯ ಇದೇ ಪರಿಸ್ಥಿತಿ ಇದೆ," ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
TTV Dhinakaran said the Edappadi K Palaniswami government in Tamil Nadu would fall in three months.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ