ಹಠಾತ್ ತಿರುವು: ಚಿನ್ನಮ್ಮ ವಿರುದ್ಧ ತಿರುಗಿಬಿದ್ದ 35 ಶಾಸಕರು!

Posted By:
Subscribe to Oneindia Kannada

ಚೆನ್ನೈ, ಫೆಬ್ರವರಿ 9: ಗುರುವಾರ ಸಂಜೆಯಷ್ಟೇ, ರಾಜ್ಯಪಾಲರನ್ನು ಭೇಟಿಯಾಗಿ ತಮ್ಮ ಬೆಂಬಲಕ್ಕೆ ನಿಂತಿರುವ 130 ಶಾಸಕರು ಸಹಿಯುಳ್ಳ ಪತ್ರವನ್ನು ಅವರಿಗೆ ನೀಡಿ ಸರ್ಕಾರ ರಚಿಸಲು ಅವಕಾಶ ನೀಡಬೇಕೆಂದು ಕೋರಿದ್ದ ಎಐಡಿಎಂಕೆ ಮಹಾ ಕಾರ್ಯದರ್ಶಿ ಶಶಿಕಲಾ ಅವರ ಅದೃಷ್ಟ ಒಂದು ಗಂಟೆ ಕಳೆಯುವಷ್ಟರಲ್ಲೇ ತಿರುಗುಮುರುಗಾಗಿದೆ.[ಕೇಂದ್ರಕ್ಕೆ ವರದಿ ಸಲ್ಲಿಸಿದ ತಮಿಳುನಾಡು ಗವರ್ನರ್]

ಕುದುರೆ ವ್ಯಾಪರಕ್ಕೊಳಗಾಗಬಾರದೆಂದು ಮುನ್ನಚ್ಚರಿಕೆ ಕ್ರಮವಾಗಿ ಸುಮಾರು 120ಕ್ಕೂ ಹೆಚ್ಚು ಶಾಸಕರನ್ನು ರೆಸಾರ್ಟ್ ಒಂದರಲ್ಲಿ ಕೂಡಿಟ್ಟಿದ್ದ ಶಶಿಕಲಾ, ಆ ಶಾಸಕರಲ್ಲಿ ಸುಮಾರು 35 ಮಂದಿ ತಿರುಗಿಬಿದ್ದಿದ್ದಾರೆ. ತಮ್ಮನ್ನು ಬಲವಂತವಾಗಿ ಕರೆಯಿಸಿ ಇಲ್ಲಿ ಕೂಡಿಟ್ಟಿರುವುದಾಗಿ ತಿರುಗಿಬಿದ್ದಿರುವ ಆ ಮೂವತ್ತೈದು ಶಾಸಕರು, ಪನ್ನೀರ್ ಸೆಲ್ವಂ ಬಣಕ್ಕೇ ತಮ್ಮ ಬೆಂಬಲವೆಂದು ಘೋಷಿಸಿದ್ದಾರೆ.[ರಾಜ್ಯಪಾಲರ ಮುಂದೆ ಸರ್ಕಾರ ರಚಿಸುವ ಪ್ರಸ್ತಾವನೆಯಿಟ್ಟ ಶಶಿಕಲಾ]

Over 35 MLAs revolt against Sasikala

ಇದರಿಂದ, ಶಶಿಕಲಾ ಅವರ ಸರ್ಕಾರ ರಚಿಸುವ ಪ್ರಸ್ತಾವನೆಗೆ ಹಾಗೂ ಆ ಮೂಲಕ ಮುಖ್ಯಮಂತ್ರಿ ಸ್ಥಾನಕ್ಕೇರುವ ಆಸೆಗೆ ಭಂಗ ಬಂದಂತಾಗಿದೆ. ಹೀಗೆ, ಗಂಟೆಗೊಂಡು ಹೊಸ ತಿರುವು ಕಾಣುತ್ತಿರುವ ತಮಿಳುನಾಡಿನ ರಾಜಕೀಯ ಮುಂದೆ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.[ರಾಜ್ಯಪಾಲರ ಭೇಟಿ ನಂತರ ಧರ್ಮಕ್ಕೆ ಗೆಲುವೆಂದ ಪನ್ನೀರ್ ಸೆಲ್ವಂ]

ಏತನ್ಮಧ್ಯೆ, ಎಐಡಿಎಂಕೆಯ ಕಟ್ಟಾ ವಿರೋಧಿ ಪಕ್ಷವಾದ ಡಿಎಂಕೆ ಪಕ್ಷವು ಪನ್ನೀರ್ ಸೆಲ್ವಂ ಅವರು ಸದನದಲ್ಲಿ ತಮ್ಮ ಬಹುಮತ ಸಾಬೀತುಪಡಿಸುವ ಸಂದರ್ಭ ಬಂದೊದಗಿದರೆ, ತಮ್ಮ ಪಕ್ಷವು ಪನ್ನೀರ್ ಅವರನ್ನೇ ಬೆಂಬಲಿಸುತ್ತದೆ ಎಂದು ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Over 35 MLAs of AIDMK revolt against Sasikala who is trying to become Chief Minster of Tamilnadu. This is a major set back to her in the CM seat race against late J. Jayalalitha loyalist Panner Selvam who is also prime aspirant for CM post.
Please Wait while comments are loading...