ಕಾವೇರಿ ಹೊರ ಹರಿವು ಹೆಚ್ಚಳ: ಹೊಗೆನಕಲ್ ಜಲಪಾತ ಪ್ರವೇಶ ನಿರ್ಬಂಧ

Recommended Video

      Karnataka Flood: ಕಾವೇರಿ ಹೊರ ಹರಿವು ಹೆಚ್ಚಳ: ಹೊಗೆನಕಲ್ ಜಲಪಾತ ಪ್ರವೇಶ ನಿರ್ಬಂಧ

      ಚೆನ್ನೈ, ಆಗಸ್ಟ್ 10: ಕಾವೇರಿ ಹೊರ ಹರಿವು ಹೆಚ್ಚಾಗಿರುವುದರಿಂದ ಹೊಗೆನಕಲ್ ಜಲಪಾತಕ್ಕೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

      ಮಂಡ್ಯ, ಚಾಮರಾಜನಗರ ಇನ್ನಿತರೆ ಪ್ರದೇಶಗಳಲ್ಲಿ ಮಳೆಯಾಗದಿದ್ದರೂ ಕೂಡ, ಕಾವೇರಿ ಜಲಾಶಯ ಭರ್ತಿಯಾಗಿರುವುದರಿಂದ ಹೊರ ಹರಿವು ಕೂಡ ಹೆಚ್ಚಳವಾಗಿದೆ. ಅಪಾಯ ಇರುವ ಕಾರಣ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.

      ಅಪಾಯದ ಮಟ್ಟ ಮೀರಿ ನೀರು ಬರುತ್ತಿರುವುದರಿಂದ ಪ್ರವಾಸಿಗರು ನದಿಗೆ ಇಳಿಯುವುದಕ್ಕೆ ಹಾಗೂ ತೆಪ್ಪ ಸವಾರಿ ನಡೆಸುವುದಕ್ಕೆ ನಿಷೇಧಿಸಲಾಗಿದೆ. ಜಲಪಾತದ ಸುತ್ತಮುತ್ತಲಿನ ಗ್ರಾಮಗಳಾದ ಜಮ್ಮಕುಟ್ಟಿ, ಆಲಂಬಾಂಡಿ ಮಾರಿಕೋಟೈ, ಗೋಫಿನಾಥಂ, ಆತೂರು, ಕೋಟೊಯೂರು, ವಿವಿಧ ಗ್ರಾಮಗಳಲ್ಲಿನ ಜನರು ನದಿ ದಡಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ.

      Out Flow Of Water From cauveri No Entry For Hogenakkal Falls

      ಅಲ್ಲದೆ ಸ್ಥಳದಲ್ಲಿ ಈಗಾಗಲೇ 50ಕ್ಕೂ ಹೆಚ್ಚು ನುರಿತ ಈಜುಗಾರರ ನಿಯೋಜಿಸಲಾಗಿದ್ದು, ಯಾವುದೇ ಅವಘಡಗಳಾಗದಂತೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸಿಕೊಂಡಿದೆ. ಕಾವೇರಿ ನದಿ ಪಾತ್ರದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕಬಿನಿ ಜಲಾಶಯದ ಹೊರ ಹರಿವು ಹೆಚ್ಚಾಗಿದೆ.

      ಈ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ ಇನ್ನೂ ಒಂದು ವಾರಗಳ ಕಾಲ ಮಳೆ ಮುಂದುವರೆಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

      ಉತ್ತರ ಕನ್ನಡ, ಉತ್ತರ ಕರ್ನಾಟಕ, ಶಿವಮೊಗ್ಗ, ಕೊಡಗು ಮುಂತಾದ ಕಡೆಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಸಾಕಷ್ಟು ಮನೆಗಳು, ಜಮೀನುಗಳು ಜಲಾವೃತವಾಗಿದೆ. ಜರು ಸಂಕಷ್ಟದಲ್ಲಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+