ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡು; ಎಐಎಡಿಎಂಕೆ ಶಾಸಕರ ಚಾಲಕನೂ ಕೋಟ್ಯಧಿಪತಿ!

|
Google Oneindia Kannada News

ಚೆನ್ನೈ, ಮಾರ್ಚ್ 29: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಇನ್ನು ಕೆಲವು ದಿನಗಳಿರುವಾಗಲೇ ಎಐಎಡಿಎಂಕೆ ಶಾಸಕರೊಬ್ಬರ ಚಾಲಕನ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು, ಒಂದು ಕೋಟಿ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಸೋಮವಾರ ಬೆಳಿಗ್ಗೆ ಎಐಎಡಿಎಂಕೆ ಶಾಸಕ ಆರ್ ಚಂದ್ರಶೇಖರ್ ಅವರ ಬಳಿ ಕೆಲಸ ಮಾಡುವ ಜೆಸಿಬಿ ಚಾಲಕ ಅಲಗಾರಸಾಮಿ ಮನೆ ಮೇಲೆ ಐಟಿ ಅಧಿಕಾರಿಗಳ ವಿಶೇಷ ತನಿಖಾ ತಂಡ ದಾಳಿ ನಡೆಸಿದ್ದು, ಯಾವುದೇ ದಾಖಲೆಯಿಲ್ಲದ ಒಂದು ಕೋಟಿ ರೂಪಾಯಿ ವಶಪಡಿಸಿಕೊಂಡಿದೆ. 500 ರೂಪಾಯಿ ನೋಟುಗಳ ಸುಮಾರು ಒಂದು ಕೋಟಿ ರೂ ಪತ್ತೆಯಾಗಿರುವುದಾಗಿ ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ತಮಿಳುನಾಡು; ಕೋಟಿ ರೂ ವಶಪಡಿಸಿಕೊಂಡ ಬೆನ್ನಲ್ಲೇ ಡಿಸಿ, ಎಸ್‌ಪಿ ವರ್ಗಾವಣೆತಮಿಳುನಾಡು; ಕೋಟಿ ರೂ ವಶಪಡಿಸಿಕೊಂಡ ಬೆನ್ನಲ್ಲೇ ಡಿಸಿ, ಎಸ್‌ಪಿ ವರ್ಗಾವಣೆ

ಕಳೆದ ಒಂಬತ್ತು ವರ್ಷಗಳಿಂದಲೂ ಅಲಗಾರಸಾಮಿ ಚಂದ್ರಶೇಖರ್ ಅವರ ಬಳಿ ಕೆಲಸ ಮಾಡುತ್ತಿದ್ದಾರೆ. ಶಾಸಕರ ಇನ್ನಿಬ್ಬರು ಸಹಚರರ ಮನೆ ಮೇಲೂ ದಾಳಿ ನಡೆಸಲಾಗಿದೆ. ಕೋವಿಲ್ಪಿಟ್ಟಿ ಗ್ರಾಮದ ತಂಗಪಾಂಡಿ ಹಾಗೂ ಮುರುಗಾನಂದಂನಲ್ಲಿ ದಾಳಿ ನಡೆಸಲಾಗಿದೆ.

One Crore Cash Recovered From AIADMK MLA Driver House In Tamil Nadu

ಎಐಎಡಿಎಂಕೆ ಶಾಸಕ ಚಂದ್ರಶೇಖರ್ ತಮಿಳುನಾಡಿನ ಮನಪ್ಪರೈ ಕ್ಷೇತ್ರ ಪ್ರತಿನಿಧಿಸಿದ್ದಾರೆ. 2008ರಲ್ಲಿ ಸ್ಪರ್ಧಿಸಿದ್ದ ಚಂದ್ರಶೇಖರ್ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿಯೂ ಕಣದಲ್ಲಿದ್ದಾರೆ.

ಚುನಾವಣೆ ದಿನಾಂಕ ಘೋಷಣೆಯಾದ ನಂತರ ತಮಿಳುನಾಡಿನ ಹಲವೆಡೆ ದೊಡ್ಡ ಮಟ್ಟದಲ್ಲಿ ಅನಧಿಕೃತ ಹಣ ಪತ್ತೆಯಾಗುತ್ತಿದೆ. ಆದಾಯ ತೆರಿಗೆ ಹಾಗೂ ಇಡಿ ಅಧಿಕಾರಿಗಳು ಈಚೆಗಷ್ಟೆ ಕಮಲ ಹಾಸನ್ ಪಕ್ಷದ ಮಕ್ಕಳನೀದಿಮಯ್ಯಂ ಟ್ರೆಶರಿ ನಿವಾಸ ಹಾಗೂ ಕಚೇರಿಯಲ್ಲಿ 11.5 ಕೋಟಿ ವಶಪಡಿಸಿಕೊಂಡಿದ್ದರು.

English summary
Rs 1 Crore unaccounted cash recovered from the residence of Alagarsamy, the JCB driver of AIADMK MLA R Chandrasekar, in an Income Tax raid earlier today in tamil nadu
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X