ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆನ್ನೈನಲ್ಲಿ ನಿಲ್ಲದ ಮಳೆ, ವಿಮಾನ ಹಾರಾಟ ಆರಂಭ

|
Google Oneindia Kannada News

ಚೆನ್ನೈ, ಡಿಸೆಂಬರ್. 06: ಚೆನ್ನೈ ಮತ್ತು ಪುದುಚೇರಿ ಮತ್ತು ತಮಿಳು ನಾಡಿನ ಕರಾವಳಿ ಪ್ರದೇಶಗಳಲ್ಲಿ ಶನಿವಾರ ಬೆಳಗ್ಗೆಯಿಂದ ಮತ್ತೆ ಮಳೆ ಸುರಿಯುತ್ತಿದೆ. ಇದು ಪರಿಹಾರ ಕಾರ್ಯಾಚರಣೆಗೆ ಅಡ್ಡಿ ಮಾಡಿದೆ. ವಿದ್ಯುತ್‌ ವ್ಯತ್ಯಯವಾಗಿದ್ದು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಪ್ರವಾಹದಿಂದ ತತ್ತರಿಸಿ ಹೋಗಿದ್ದ ಚೆನ್ನೈ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದ್ದ ವೇಳೆ ಮತ್ತೆ ಮಳೆ ಶುರುವಾಗಿದೆ. ಆದರೆ ಶನಿವಾರ ಚೆನ್ನೈ ವಿಮಾನ ನಿಲ್ದಾಣದಲ್ಲಿ ಕೆಲ ವಿಮಾನಗಳು ಸಂಚಾರ ಆರಂಭಿಸಿವೆ. ಪರಿಹಾರ ಸಾಮಗ್ರಿ ಹೊತ್ತ ವಿಮಾನಗಳ ಹಾರಾಟಕ್ಕೆ ಮಾತ್ರ ಅವಕಾಶ ನೀಡಲಾಯಿತು.[ಚೆನ್ನೈ ಸಂತ್ರಸ್ತರ ನೆರವಿಗೆ ಕೆಎಸ್ಆರ್‌ಟಿಸಿ ವಿಶೇಷ ಬಸ್]

rain

ಭಾನುವಾರ ಪ್ರಯಾಣಿಕರ ವಿಮಾನ ಹಾರಾಟಕ್ಕೂ ಅವಕಾಶ ನೀಡಲಾಗುವುದು. ದೆಹಲಿಯಿಂದ ಚೆನ್ನೈ ಗೆ ವಿಮಾನ ಯಾನ ಆರಂಭಗೊಳ್ಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.[ಚೆನ್ನೈ ಮಹಾ ಪ್ರವಾಹಕ್ಕೂ ಜಗ್ಗದ-ಕುಗ್ಗದ ಬಸ್!]

ವಿಮಾಣ ನಿಲ್ದಾಣದ ಕೆಳ ಅಂತಸ್ತು ಜಲಾವೃತವಾಗಿರುವ ಕಾರಣ ಕಮರ್ಷಿಯಲ್ ವಿಮಾನಗಳ ಸಂಚಾರಕ್ಕೆ ಇನ್ನೂ ಅನುಮತಿ ಕೊಟ್ಟಿಲ್ಲ. 2-3 ದಿನಗಳ ಬಳಿಕ ವಿಮಾನ ಹಾರಾಟ ಸಂಪೂರ್ಣವಾಗಿ ಆರಂಭವಾಗಲಿದೆ ಎಂದು ವಿಮಾನಯಾನ ಇಲಾಖೆ ಸಚಿವಾಲಯ ಮಾಹಿತಿ ನೀಡಿದೆ.

English summary
The airport authorities here have received requests from national carrier Air India to operate flights today after the AAI announced day-time operations of passenger flights from the airport. "Air India has informed us that it will operate a chartered flight to Port Blair and one flight to and fro Chennai today," sources told PTI this morning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X