ಪನ್ನೀರ್ ಸೆಲ್ವಂ ಮನೆಯಲ್ಲಿ ಮುಗಿಲು ಮುಟ್ಟಿದ ಸಂಭ್ರಮಾಚರಣೆ

Subscribe to Oneindia Kannada

ಚೆನ್ನೈ, ಫೆಬ್ರವರಿ 14: ಶಶಿಕಲಾ ನಟರಾಜನ್ ಶಿಕ್ಷೆಗೆ ಗುರಿಯಾಗುತ್ತಿದ್ದಂತೆ ಮುಖ್ಯಮಂತ್ರಿ ರೇಸಿನಲ್ಲಿದ್ದ ಒ ಪನ್ನೀರ್ ಸೆಲ್ವಂ ಮನೆಯಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಪನ್ನೀರ್ ಸೆಲ್ವಂ ನಿವಾಸದತ್ತ ಧಾವಿಸುತ್ತಿದ್ದಾರೆ.

ಇಂದು ಸುಪ್ರಿಂ ಕೋರ್ಟ್ ತೀರ್ಪು ನೋಡಲೆಂದೇ ಪನ್ನೀರ್ ಸೆಲ್ವಂ ನಿವಾಸದ ಆವರಣದಲ್ಲಿ ಬೃಹತ್ ಪರದೆ ಹಾಕಲಾಗಿತ್ತು. ನೂರಾರು ಅಭಿಮಾನಿಗಳು, ಪನ್ನೀರ್ ಸೆಲ್ವಂ ಆಪ್ತರು ತೀರ್ಪಿನ ಬ್ರೇಕಿಂಗ್ ಗಳನ್ನು ನೇರ ಪ್ರಸಾರದಲ್ಲಿ ವೀಕ್ಷಿಸುತ್ತಲೇ ಇದ್ದರು.[ಕಾನೂನಿನ ಕಣ್ಣಿನಿಂದ ಭ್ರಷ್ಟರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ-ಬಿವಿ ಆಚಾರ್ಯ]

O Pannerselvam 's supporters celebrate Sasikala 's conviction

ಯಾವಾಗ ತೀರ್ಪಿನಲ್ಲಿ ಶಶಿಕಲಾ ನಟರಾಜನ್ ಜೈಲು ಪಾಲಾಗಲಿದ್ದಾರೆ ಎಂದು ಸುದ್ದಿ ಬಂತೋ ಅಭಿಮಾನಿಗಳು ಸಂಭ್ರಮದಿಂದ ಕುಣಿದು ಕುಪ್ಪಳಿಸಿದರು. ಸದ್ಯ ಮುಖ್ಯಮಂತ್ರಿ ರೇಸಿನಲ್ಲಿ ಒ ಪನ್ನೀರ್ ಸೆಲ್ವಂ ಮಾತ್ರ ಬಾಕಿ ಉಳಿದಿದ್ದು ತಮ್ಮ ನಾಯಕ ಮುಖ್ಯಮಂತ್ರಿಯಾಗುವುದನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ.[ಶಶಿಕಲಾಗೆ ಶಿಕ್ಷೆ ಪ್ರಕಟಿಸಿದ ನ್ಯಾಯಮೂರ್ತಿಗಳು ಹೇಳಿದ್ದೇನು?]

ಸಾವಿರಾರು ಜನ ಪನ್ನೀರ್ ಸೆಲ್ವಂ ನಿವಾದತ್ತ ಧಾವಿಸುತ್ತಿದ್ದು ಜನ ಜಂಗುಳಿಯೇ ಮನೆ ಮುಂದೆ ನೆರೆದಿದೆ. ಪನ್ನಿರ್ ಸೆಲ್ವಂಗೆ ಜೈಕಾರ, ಘೋಷಣೆಗಳನ್ನು ಅಭಿಮಾನಿಗಳು ಕೂಗುತ್ತಿದ್ದಾರೆ.

ಇದೀಗ ಶಾಸಕರು ಒಬ್ಬೊಬ್ಬರಾಗಿ ಶಶಿಕಲಾ ಬಣದಿಂದ ಪನ್ನೀರ್ ಸೆಲ್ವಂ ಬಣಕ್ಕೆ ಹಾರುತ್ತಿದ್ದು ತೀರ್ಪು ಬರುತ್ತಿದ್ದಂತೆ ಇಬ್ಬರು ಸೇರ್ಪಡೆಯಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
O Panneerselvam’s supporters celebrating VK Sasikala’s conviction and also number of supporters gathered outside his residence after the disproportionate assets case verdict that convicted V K Sasikal.
Please Wait while comments are loading...