ರಜನಿಕಾಂತ್ ಜತೆ ಮೈತ್ರಿಗೆ ಷರತ್ತು ಮುಂದಿಟ್ಟ ಕಮಲ್ ಹಾಸನ್
ಚೆನ್ನೈ, ಫೆಬ್ರವರಿ 11: ತಮಿಳುನಾಡು ಸಿನಿಮಾ ರಂಗದ ಸೂಪರ್ ಸ್ಟಾರ್ ಗಳಾದ ರಜನೀಕಾಂತ್ ಮತ್ತು ಕಮಲ್ ಹಾಸನ್ ರಾಜಕೀಯ ನಡೆಗಳು ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿವೆ.
ಸಕ್ರಿಯ ರಾಜಕಾರಣಕ್ಕೆ ಕಾಲಿಡುವುದಾಗಿ ಈಗಾಗಲೇ ರಜನೀಕಾಂತ್ ಮತ್ತು ಕಮಲ್ ಹಾಸನ್ ಘೋಷಿಸಿದ್ದಾರೆ. ಆದರೆ ಇವರಿಬ್ಬರ ಜತೆಯಾಗಿ ಹೆಜ್ಜೆಹಾಕುತ್ತಾರಾ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಈ ಹಿಂದೆ ಪ್ರತಿಕ್ರಿಯೆ ನೀಡಿದ್ದ ರಜನೀಕಾಂತ್, 'ಕಮಲ್ ಹಾಸನ್ ಜತೆಗಿನ ಮೈತ್ರಿಗೆ ಕಾಲವೇ ಉತ್ತರಿಸಬೇಕು' ಎಂದು ಹೇಳಿಕೆ ನೀಡಿದ್ದರು.

ಇದೀಗ ಪ್ರತಿಕ್ರಿಯೆ ನೀಡಿರುವ ಕಮಲ್ ಹಾಸನ್ ಮೈತ್ರಿಗೆ ಮುಂದಾಗುವ ಮುನ್ನ ಷರತ್ತೊಂದನ್ನು ಮುಂದಿಟ್ಟಿದ್ದಾರೆ.
"ರಜನಿ ರಾಜಕೀಯದಲ್ಲಿ ಕೇಸರಿಯ ಒಂದು ವರ್ಣವಿದೆ. ಅದು ಬದಲಾಗದಿದ್ದರೆ ನಂತರ ನಾನು ಅವರೊಂದಿಗೆ ಮೈತ್ರಿ ಸಾಧ್ಯವಿಲ್ಲ. ನಾವು ಉತ್ತಮ ಸ್ನೇಹಿತರು, ಆದರೆ ರಾಜಕೀಯ ಬೇರೆ," ಎಂದು ಕಮಲ್ ಹೇಳಿದ್ದಾರೆ.
ಈ ಮೂಲಕ ರಜನೀಕಾಂತ್ ಬಲಪಂಥೀಯ ಧೋರಣೆಯನ್ನು ಬಿಟ್ಟರೆ ಅವರ ಜತೆ ಮೈತ್ರಿಗೆ ಸಿದ್ಧ ಎಂಬ ಸಂದೇಶವನ್ನು ಕಮಲ್ ನೀಡಿದ್ದಾರೆ.












Click it and Unblock the Notifications