ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ಕೋರ್ಟ್ ಸ್ಫೋಟ: ತಮಿಳುನಾಡಲ್ಲಿ 3 ಉಗ್ರರ ಬಂಧನ

ಮೈಸೂರು ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮದುರೈನಲ್ಲಿ ಬಂಧನಕ್ಕೊಳಗಾದ ಮೂವರು ಮೂಲ ಭೂತವಾದಿ ಸಂಘಟನೆ ಅಥವಾ ಅಲ್ ಉಮ್ಮಾ ಉಗ್ರ ಸಂಘಟನೆ ಸೇರಿದವರು ಎನ್ನಲಾಗಿದೆ. ಬಂಧಿತರನ್ನು ಹೆಚ್ಚಿನ ವಿಚಾರಣೆಗಾಗಿ ಮೈಸೂರಿಗೆ ಕರೆದೊಯ್ಯಲಾಗಿದೆ.

By ವಿಕಾಸ್ ನಂಜಪ್ಪ
|
Google Oneindia Kannada News

ಮದುರೈ, ನವೆಂಬರ್ 28: ಮೈಸೂರು ಸೇರಿದಂತೆ ಹಲವಾರು ಕೋರ್ಟ್ ಆವರಣಗಳಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಶಂಕಿತ ಉಗ್ರರನ್ನು ಮದುರೈನಲ್ಲಿ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಹಾಗೂ ತಮಿಳುನಾಡು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಬಂಧಿತರನ್ನು ಕರೀಮ್, ಅಯೂಬ್ ಹಾಗೂ ಅಬ್ಬಾಸ್ ಅಲಿ ಎಂದು ಗುರುತಿಸಲಾಗಿದೆ. ಮೂಲ ಭೂತವಾದಿ ಸಂಘಟನೆ ಅಥವಾ ಅಲ್ ಉಮ್ಮಾ ಉಗ್ರ ಸಂಘಟನೆ ಸೇರಿದವರು ಎನ್ನಲಾಗಿದೆ. ಬಂಧಿತರನ್ನು ಹೆಚ್ಚಿನ ವಿಚಾರಣೆಗಾಗಿ ಮೈಸೂರಿಗೆ ಕರೆದೊಯ್ಯಲಾಗಿದೆ.[ಮೈಸೂರು ಕೋರ್ಟ್ ಸ್ಫೋಟ : ಮಲಯಾಳಂ ಪತ್ರಿಕೆಯಲ್ಲಿತ್ತು ಸ್ಫೋಟಕ]

Mysuru blast- 3 from terror group Base Movement arrested in Madurai

ಚಿತ್ತೂರು ಹಾಗೂ ಕೊಲ್ಲಂ ಕೋರ್ಟ್ ಆವರಣಗಳಲ್ಲೂ ಸ್ಫೋಟ ನಡೆದಿತ್ತು. ಚಿತ್ತೂರು ಸ್ಫೋಟದ ನಂತರ ಬೇಸ್ ಮೂವ್ ಮೆಂಟ್ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿತ್ತು. [ಮೈಸೂರು: ಕೋರ್ಟಿನ ಬಳಿ 'ಕುಕ್ಕರ್ ಬಾಂಬ್' ಇಟ್ಟವರು ಯಾರು?]

ಎನ್ ಐಎ ತನಿಖೆಯಿಂದ ಇದು Base Movement ಸಂಘಟನೆಯ ಕೃತ್ಯ ಎಂದು ತಕ್ಷಣಕ್ಕೆ ತಿಳಿದು ಬಂದಿದ್ದು, ಘಟನಾ ಸ್ಥಳದಲ್ಲಿ ಸಿಕ್ಕ ಪತ್ರದಲ್ಲಿ ಭಾರತದ ಭೂಪಟ, ಮೃತ ಉಗ್ರ ಒಸಾಮಾ ಬಿನ್ ಲಾಡೆನ್ ಚಿತ್ರವಿದೆ. ಪತ್ರದ ಕೆಳಗೆ Base Movement ಸಹಿ ಇತ್ತು.[ಕೇರಳದ ಮಲ್ಲಪ್ಪುರಂನಲ್ಲಿ ಸ್ಫೋಟ, ಎನ್ ಐಎನಿಂದ ತನಿಖೆ]

ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿ ಬಳಿ ಸ್ಫೋಟಕ್ಕೂ ಇದೇ ಸಂಘಟನೆ ಕಾರಣ. ಆದರೆ, ಆ ಘಟನೆ ನಂತರ ಸಂಘಟನೆಯ ಹೆಸರು ಬದಲಾಯಿಸಿಕೊಳ್ಳಲಾಗಿದ್ದು, ಅಲ್ ಉಮ್ಮಾ ಸಂಘಟನೆಯೇ ಈಗ ಬೇಸ್ ಮೂವ್ ಮೆಂಟ್ ಎಂದಾಗಿದೆ ಎಂಬ ಮಾಹಿತಿ ಸಿಕ್ಕಿದೆ.

English summary
Three persons were arrested in Madurai in connection with the Mysuru blasts. The three persons identified as Kareem, Ayub and Abbas Ali are said to be part of the Base Movement outfit or the erstwhile al-Ummah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X