ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದ್ಯಾರ್ರೀ ಜಯಲಲಿತಾರ ಹೊಸ ಮಗ, ಆಕೆ ಎಲ್ಲ ಆಸ್ತಿಯ ವಾರಸುದಾರ!

|
Google Oneindia Kannada News

ಚೆನ್ನೈ, ಮಾರ್ಚ್ 15: ನಾನು "ಅಮ್ಮನ ಮಗ" ಅಂತ ಹೇಳಿಕೊಂಡು ತಮಿಳುನಾಡಿನಲ್ಲಿ ಹೊಸ ಪಾತ್ರವೊಂದು ಹುಟ್ಟಿಕೊಂಡಿದೆ. ನಾನು ಜಯಲಲಿತಾ ಅವರ ಮಗ. ನನ್ನ ಬಗ್ಗೆ ಇಡೀ ಜಗತ್ತಿಗೆ ತಿಳಿಸ್ತೀನಿ ಅಂತ ಅಮ್ಮ ಹೇಳಿದ್ದಕ್ಕೆ ಅವರ ಆಪ್ತೆ ಶಶಿಕಲಾನೇ ಮೆಟ್ಟಿಲ ಮೇಲಿಂದ ತಳ್ಳಿಬಿಟ್ಟರು ಎಂಬುದು ಆತನ ದೂರು.

ಈರೋಡ್ ನ ಕೃಷ್ಣಮೂರ್ತಿ ತಮಿಳುನಾಡಿನ ಮುಖ್ಯ ಕಾರ್ಯದರ್ಶಿ ಅವರ ಹತಿರವೇ ದೂರು ದಾಖಲಿಸಿದ್ದು, ಜಯಲಲಿತಾ ಆಸ್ತಿಗೆಲ್ಲ ತಾನೇ ವಾರಸ್ದಾರ ಎಂದು ಹೇಳಿಕೊಂಡಿದ್ದಾರೆ. 2016ರಲ್ಲಿ ಜಯಲಲಿತಾ ಅವರು ತೀರಿಕೊಳ್ಳುವ ಎರಡು ತಿಂಗಳ ಹಿಂದೆ, ಪೋಯಸ್ ಗಾರ್ಡನ್ ನಲ್ಲಿ ನಾಲ್ಕು ದಿನ ಇದ್ದೆ ಎಂದು ಹೇಳಿಕೊಂಡಿದ್ದಾನೆ.[ಶಶಿಕಲಾ ಗ್ಯಾಂಗ್ ನಿಂದ ನಿರಂತರ ಬೆದರಿಕೆ : ದೀಪಾ ಜಯಕುಮಾರ್]

Mystery Man Turns Up Claiming He Is Jayalalithaa's Son And Heir

"'ಅಮ್ಮ' ಇಡೀ ಜಗತ್ತಿಗೆ ನನ್ನನ್ನು ಪರಿಚಯಿಸಬೇಕು ಅಂತಿದ್ರು. ಈ ಬಗ್ಗೆ ಗೊತ್ತಾಗಿ ಶಶಿಕಲಾ ಹಾಗೂ ಅಮ್ಮನ ಮಧ್ಯೆ ವಾಗ್ಚಾದ ಆಯಿತು" ಎಂದು ಆತ ಹೇಳಿಕೊಂಡಿದ್ದಾನೆ. ಜಯಲಲಿತಾ ಸಾವು ಹಾಗೂ ಆಕೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಗೆಗಿನ ವಿವರ ಮತ್ತು ಅಪೋಲೋ ಆಸ್ಪತ್ರೆಯ ದಾಖಲೆಗಳನ್ನು ನವದೆಹಲಿಯಲ್ಲಿ ಬಿಡುಗಡೆ ಮಾಡಲು ತಮಿಳುನಾಡು ಸರಕಾರ ನಿರ್ಧರಿಸಿದೆ.

ಅಪೋಲೋ ಆಸ್ಪತ್ರೆಯಲ್ಲಿ ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಡಿಸೆಂಬರ್ 5ರಂದು ನಿಧನರಾಗಿದ್ದರು. ಅದಕ್ಕೂ ಮುನ್ನ ಎಪ್ಪತ್ತೈದು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದರು. ಸೆಪ್ಟೆಂಬರ್ 22ರಂದು ಆಕೆ ಆಸ್ಪತ್ರೆಗೆ ಸೇರುವ ವೇಳೆಗೆ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ಎಂದು ಐಎಎನ್ ಎಸ್ ವರದಿ ಮಾಡಿದೆ.[ಜಯಾ ಸಾವಿನ ಬಗ್ಗೆ ತಮಿಳುನಾಡು ಸರಕಾರ ಸುಳ್ಳು ಹೇಳಿದೆಯಾ?]

Mystery Man Turns Up Claiming He Is Jayalalithaa's Son And Heir

ಮಾಜಿ ಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ ಬಣದವರು ಜಯಲಲಿತಾ ಸಾವಿನಲ್ಲಿ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದ್ದಾರೆ. ಜಯಲಲಿತಾ ಅವರನ್ನು ಮನೆಯಲ್ಲೇ ಮೆಟ್ಟಿಲಿಂದ ತಳ್ಳಲಾಗಿದೆ. ಅವರ ಸಾವಿನ ಬಗ್ಗೆ ತನಿಖೆಯಾಗಬೇಕು ಎಂದು ಎಐಎಡಿಎಂಕೆ ನಾಯಕ ಪಿಎಚ್ ಪಾಂಡಿಯನ್ ಒತ್ತಾಯಿಸಿದ್ದಾರೆ.[ಜಯಲಲಿತಾ ಸಾವಿನ ರಹಸ್ಯ, ಪಾಂಡಿಯನ್ ಬಿಚ್ಚಿಟ್ಟ ಸ್ಫೋಟಕ ಮಾಹಿತಿ]

ತಾನು ಜಯಲಲಿತಾ ಅವರ ಮಗ ಎಂದು ಹೇಳಿಕೊಳ್ಳುತ್ತಿರುವ ಕೃಷ್ಣಮೂರ್ತಿ, ತನ್ನನ್ನು ದತ್ತು ತೆಗೆದುಕೊಂಡ ತಂದೆ-ತಾಯಿ ಜತೆಗೆ ಅಮ್ಮನ ಸ್ನೇಹಿತೆ ವನಿತಾಮಣಿ ಮನೆಯಲ್ಲಿ ವಾಸವಿದ್ದಾನೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

English summary
The intrigue in Tamil Nadu politics just went up a notch as an alleged "secret son" of late chief minister J. Jayalalithaa turned up, claiming that his "mother" was pushed down the stairs by her close aide VK Sasikala following an argument about revealing his real identity to the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X