ಖಂಡಿತಾ ನನ್ನ ಬಣ್ಣ ಕೇಸರಿಯಲ್ಲ: ಕಮಲ್ ಹಾಸನ್

Posted By: ವಿಕಾಸ್
Subscribe to Oneindia Kannada

ಚೆನ್ನೈ, ಸೆಪ್ಟೆಂಬರ್ 1: 'ನನ್ನ ಬಣ್ಣ ಖಂಡಿತಾ ಕೇಸರಿಯಲ್ಲ' ಎನ್ನುವ ಮೂಲಕ ನಟ ಕಮಲ್ ಹಾಸನ್ ತಾವು ಬಿಜೆಪಿ ಸೇರುವುದಿಲ್ಲ ಎಂದು ಶುಕ್ರವಾರ ಸ್ಪಷ್ಟ ಪಡಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಹಿರಿಯ ನಟ ಕಮಲ್ ಹಾಸನ್ ರಾಜಕೀಯ ಪ್ರವೇಶದ ಬಗ್ಗೆ ಸುದ್ದಿ ಹರಿದಾಡುತ್ತಿದ್ದು, ಆ ಬಗ್ಗೆ ಸುಳಿವು ಎಂಬಂತೆ ಕಮಲ್ ಈ ಮಾತನಾಡಿದ್ದಾರೆ.

ಎಐಎಡಿಎಂಕೆ ಬಣಗಳ ವಿಲೀನದ ಬಗ್ಗೆ ನಟ ಕಮಲ್ ಹೇಳಿದ್ದೇನು?

ಕಳೆದ ಕೆಲವು ತಿಂಗಳಿಂದಲೇ ಕಮಲ್ ಹಲವು ರಾಜಕೀಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅದರಲ್ಲೂ ಅಧಿಕಾರಾರೂಢ ಎಐಎಡಿಎಂಕೆ ಸರಕಾರದ ವಿರುದ್ಧ ಮಾತನಾಡುತ್ತಿದ್ದಾರೆ. ಈ ಕಾರಣಕ್ಕೆ ಕಮಲ್ ತಮಿಳುನಾಡು ರಾಜಕೀಯ ಪ್ರವೇಶ ಮಾಡುತ್ತಾರೆ ಎಂಬ ನಿರೀಕ್ಷೆ ಮಾಡುವಂತಾಯಿತು.

Kamal Haasan

"ನನ್ನ ಬಣ್ಣವನ್ನು ಕಳೆದ ನಲವತ್ತು ವರ್ಷದಿಂದ ನೋಡುತ್ತಿದ್ದೀರಿ, ಅದು ಖಂಡಿತಾ ಕೇಸರಿಯಲ್ಲ. ನಾನು ಮಧ್ಯದಲ್ಲಿ ಇರುವುದಕ್ಕೆ ಬಯಸುತ್ತೇನೆ. ಯಾವುದೇ ಒಂದು ಪಕ್ಕ ಇರಲು ಬಯಸುವುದಿಲ್ಲ" ಎಂದು ರಾಜಕೀಯ ಸೇರುವ ವಿಚಾರವಾಗಿ ಕಮಲ್ ಹಾಸನ್ ಮಾಧ್ಯಮದವರ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ಎರಡೂ ಬಣಗಳ ವಿಲೀನದ ಬಳಿಕ ಎನ್.ಡಿ.ಎ ತೆಕ್ಕೆಗೆ ಎಐಎಡಿಎಂಕೆ?

ಇತ್ತೀಚೆಗೆ ನಡೆದ ಡಿಎಂಕೆ ಕಾರ್ಯಕ್ರಮವೊಂದರಲ್ಲಿ ಕಮಲ್ ಹಾಸನ್ ವೇದಿಕೆ ಮೇಲೆ ಇದ್ದರು. ಆದ್ದರಿಂದ ಅವರು ಡಿಎಂಕೆ ಸೇರಬಹುದು ಎಂಬ ಮಾತುಗಳು ಕೂಡ ಚಾಲ್ತಿಯಲ್ಲಿವೆ.
ಒನ್ಇಂಡಿಯಾನ್ಯೂಸ್

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
With talks doing rounds that Kamal Haasan may join politics, the veteran actor on Friday almost ruled out siding with the BJP by saying 'saffron is not my colour'.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ