ರಜನಿ ವೆಬ್‌ಸೈಟ್ ಲಾಂಚ್ ದಿನವೇ 'ಡಿಎಂಕೆ' ವೆಬ್‌ಸೈಟ್ ಹ್ಯಾಕ್

Subscribe to Oneindia Kannada

ಚೆನ್ನೈ, ಜನವರಿ 1: ಇಂದು ರಜನಿಕಾಂತ್ ತಮ್ಮ ಅಭಿಮಾನಿಗಳಿಗಾಗಿ ವೆಬ್‌ಸೈಟ್ ಮತ್ತು ಆ್ಯಪ್ ಲಾಂಚ್ ಮಾಡಿದ್ದಾರೆ. ಇದೇ ದಿನ ಡಿಎಂಕೆಯ ವೆಬ್‌ಸೈಟ್ ಹ್ಯಾಕ್ ಆಗಿ ಕೆಲಕಾಲ ಆತಂಕ ನಿರ್ಮಾಣವಾಗಿತ್ತು.

ದ್ರಾವಿಡ ಮುನ್ನೇತ್ರಂ ಕಳಗಂ (ಡಿಎಂಕೆ) ಮುಖವಾಣಿ 'ಮುರಸೋಳಿ' ವೆಬ್‌ಸೈಟ್ ನ್ನು ಯಾರೋ ಇಂದು ಅಪರಿಚಿತರು ಹ್ಯಾಕ್ ಮಾಡಿದ್ದರು.

'Hacked By F4rhaN' ಎಂಬ ಮೆಸೇಜ್ ಇಂದು www.murasoli.in ವೆಬ್‌ಸೈಟ್ ನಲ್ಲಿ ಕಾಣಿಸಿಕೊಂಡಿತ್ತು. ಆದರೆ ತಕ್ಷಣ ಪಕ್ಷದ ಐಟಿ ವಿಭಾಗ ವೆಬ್‌ಸೈಟ್ ನ್ನು ರೀಸ್ಟೋರ್ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಡಿಎಂಕೆ ಮೂಲಗಳು ತಿಳಿಸಿವೆ.

'Murasoli' website briefly hacked, restored

ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಮುರಸೋಳಿ ಭಿತ್ತಿಪತ್ರವನ್ನು ಡಿಎಂಕೆ ಅಧ್ಯಕ್ಷ ಎಂ ಕರುಣಾನಿಧಿ 1942ರಲ್ಲಿ ಆರಂಭಿಸಿದ್ದರು. ಕಳೆದ ವರ್ಷ ಇದೇ ಮುರಸೋಳಿ ಪತ್ರಿಕೆಯ ವಜ್ರಮಹೋತ್ಸವ ನಡೆದಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The website of the DMK's mouthpiece 'Murasoli' was briefly hacked today. Messages 'Hacked By F4rhaN' and "Admin Please make a secure website' were found on www.murasoli.in, party sources said.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ