ಶಾಸಕರನ್ನೇ ಕಿಡ್ನಾಪ್ ಮಾಡಿದ್ರಂತೆ ಶಶಿಕಲಾ, ದಾಖಲಾಯ್ತು ಎಫ್ಐಆರ್
ಚೆನ್ನೈ, ಫೆಬ್ರವರಿ 15: ನನ್ನನ್ನು ಶಶಿಕಲಾ ಗ್ಯಾಂಗ್ ಕಿಡ್ನಾಪ್ ಮಾಡಿತ್ತು ಅಂತ ಹೇಳಿ ತಮಿಳುನಾಡು ಎಐಎಡಿಎಂಕೆ ಶಾಸಕರೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
ಮಧುರೈ ದಕ್ಷಿಣ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕ ಎಸ್. ಶರವಣನ್ ವಿ. ಕೆ ಶಶಿಕಲಾ ಮತ್ತು ಎಡಪ್ಪಡಿ ಕೆ. ಪಳನಿಸ್ವಾಮಿ ಮೇಲೆ ಕಿಡ್ನಾಪ್ ಕೇಸು ದಾಖಲಿಸಿದ್ದಾರೆ. ಕುವತ್ತೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎಫ್ಐಆರ್ ದಾಖಲಾಗಿದೆ.[ಜಯಲಲಿತಾ 100 ಕೋಟಿ ದಂಡವನ್ನು ಕೊರ್ಟ್ ಹೀಗೆ ವಸೂಲಿ ಮಾಡುತ್ತೆ!]

ವಿಶೇಷ ಅಂದರೆ ಇದೇ ಎಸ್. ಎಸ್ ಶರವಣನ್ ಕಳೆದ ಸೋಮವಾರ ಗೋಲ್ಡನ್ ಬೇ ರೆಸಾರ್ಟಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ರೆಸಾರ್ಟಿನ ಗೋಡೆ ಹಾರಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಶರವಣನ್ ಸಿಕ್ಕಿ ಬಿದ್ದು ಮತ್ತೆ ರೆಸಾರ್ಟ್ ಸೇರಿದ್ದರು.[ಚಿನ್ನಮ್ಮ ಮುಂದಿರುವ ಅಂತಿಮ 4 ಆಯ್ಕೆಗಳಿವು..]
ದೂರಿನಲ್ಲಿ ನನ್ನನ್ನು ಶಶಿಕಲಾ ಮತ್ತು ಪಳನಿಸ್ವಾಮಿ ಜೋಡಿ ಕಿಡ್ನಾಪ್ ಮಾಡಿ ಗೋಲ್ಡನ್ ಬೇ ರೆಸಾರ್ಟಿನಲ್ಲಿ ಬಂಧಿಸಿಟ್ಟಿದ್ದರು ಎಂದು ಶರವಣ್ ಹೇಳಿದ್ದಾರೆ. ಇದೇ ರೆಸಾರ್ಟಿನಲ್ಲಿ ಶಶಿಕಲಾ ತಮ್ಮ ಬೆಂಬಲಿಗ ಸಚಿವರನ್ನು ಹಿಡಿದಿಟ್ಟಿದ್ದರು.












Click it and Unblock the Notifications