ಜಲ್ಲಿಕಟ್ಟು ಬೆಂಬಲಿಸಿ ಚೆನ್ನೈನ ಮರೀನಾ ಬೀಚ್ ನಲ್ಲಿ ಭಾರೀ ಪ್ರತಿಭಟನೆ

By: ಅನುಷಾರವಿ
Subscribe to Oneindia Kannada

ಚೆನ್ನೈ, ಜನವರಿ 17: ಮದುರೈನ ಅಲಂಗನಲ್ಲೂರಿನಲ್ಲಿ ಮಂಗಳವಾರ ಬೆಳಗ್ಗೆ ನೂರಾರು ಮಂದಿಯನ್ನು ಬಂಧಿಸಿರುವ ಕ್ರಮವನ್ನು ಚೆನ್ನೈನ ಮರೀನಾ ಬೀಚ್ ನಲ್ಲಿ ಐದು ಸಾವಿರಕ್ಕೂ ಹೆಚ್ಚು ಮಂದಿ ಸೇರಿ ಖಂಡಿಸಿದರು. ಸಾಂಪ್ರದಾಯಿಕ ಕ್ರೀಡೆಯನ್ನು ಬೆಂಬಲಿಸಿ, ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಬಂಧಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿದರು.

ಅಪಾರ ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾನಿರತರು ಮೊಬೈಲ್ ಫೋನ್ ಲೈಟ್ ಗಳನ್ನು ಹೊತ್ತಿಸಿ, ಗಮನ ಸೆಳೆದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾನಿರತರನ್ನು ಸಂಭಾಳಿಸಲು ಪೊಲೀಸರು ಹೈರಾಣಾದರು. ಸಾಮಾಜಿಕ ಜಾಲತಾಣಗಳಲ್ಲಿ ಜಲ್ಲಿಕಟ್ಟು ಕ್ರೀಡೆಗೆ ಬೆಂಬಲ ಸೂಚಿಸುವಂತೆ ಕರೆ ನೀಡಲಾಗಿತ್ತು. ಆ ಮೂಲಕವೇ ಚೆನ್ನೈ ಪ್ರತಿಭಟನೆಯಲ್ಲಿ ಜನರು ಪಾಲ್ಗೊಂಡಿದ್ದರು.[ಜಲ್ಲಿಕಟ್ಟು ವಿವಾದ: ತ್ರಿಶಾಗೆ ಜೀವಭಯ, ಪೊಲೀಸರಿಗೆ ಮೊರೆ]

Chennai Marina beach

ಜಲ್ಲಿಕಟ್ಟು ನಿಷೇಧ ಮಾಡಿರುವುದು ಹಳ್ಳಿಗಳಲ್ಲಿ ಮಾತ್ರವಲ್ಲ, ನಗರ ಪ್ರದೇಶಗಳಲ್ಲೂ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಸಾಬೀತು ಪಡಿಸಲು ಈ ಪ್ರತಿಭಟನೆ ನಡೆಯಿತು. ಇನ್ನು ಪ್ರತಿಭಟನೆಯ ಪೋಸ್ಟರ್ ಗಳು ಆನ್ ಲೈನ್ ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಬಹಳ ಪೋಸ್ಟರ್ ಗಳಲ್ಲಿ, ಜಲ್ಲಿಕಟ್ಟು ಬೆಂಬಲಿಸಿ ಬುಧವಾರ ಕಾಲೇಜುಗಳಿಗೆ ತೆರಳದಂತೆ ಮನವಿ ಮಾಡಲಾಗಿದೆ.[ಜಲ್ಲಿಕಟ್ಟು: ಮದುರೈನ ಅಲಂಗನಲ್ಲೂರಿನಲ್ಲಿ 500 ಜನರ ಬಂಧನ]

Marina beach

ನಿಷೇಧವಾದ ಜಲ್ಲಿಕಟ್ಟು ಕ್ರೀಡೆಯನ್ನು ಅಧಿಕಾರಿಗಳು ತಡೆಯಲು ಯತ್ನಿಸಿರುವುದಕ್ಕೆ ಈ ಪ್ರತಿಭಟನೆ ಮಾಡಲಾಗಿದೆ. ಮಂಗಳವಾರ ಸಹ ಮದುರೈನಲ್ಲಿ ಜಲ್ಲಿಕಟ್ಟು ನಡೆದಿದ್ದು, ಪೊಲೀಸರು ಸೇರಿದಂತೆ ಸಾರ್ವಜನಿಕರಿಗೆ ಗಾಯಗಳಾಗಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Condemning the arrests of hundreds in Alanganallur of Madurai on Tuesday morning, thousands of people gathered at Marina Beach of Chennai. Youngsters and seniors alike, close to 5000 people, gathered to condemn the crackdown on 'peaceful' protestors at Madurai in support of the 'traditional sport'.
Please Wait while comments are loading...