ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದ್ಯದಂಗಡಿ ಮುಚ್ಚಲು ಮದ್ರಾಸ್ ಹೈ ಕೋರ್ಟ್ ಆದೇಶ

|
Google Oneindia Kannada News

ಚೆನ್ನೈ, ಮೇ 8: ತಮಿಳುನಾಡಿನಲ್ಲಿ ಸರ್ಕಾರಿ ಸ್ವಾಮ್ಯದ ಎಲ್ಲ TASMAC ಮದ್ಯದಂಗಡಿಗಳನ್ನು ಮುಚ್ಚುವಂತೆ ಮದ್ರಾಸ್ ಹೈ ಕೋರ್ಟ್ ಆದೇಶ ನೀಡಿದೆ.

ಮದ್ಯದಂಗಡಿ ತೆರೆದಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಹೈ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಈ ಅರ್ಜಿ ವಿಚಾರಣೆ ಮಾಡಿದ್ದ ಮದ್ರಾಸ್ ಹೈ ಕೋರ್ಟ್ TASMAC ಮದ್ಯದಂಗಡಿಗಳನ್ನು ಬಂದ್ ಮಾಡುವಂತೆ ಸೂಚಿಸಿದೆ.

ಆಲ್ಕೋಹಾಲ್ ಹೋಂ ಡೆಲಿವರಿ ಬಗ್ಗೆ ಪರಿಗಣಿಸಿ: ಸುಪ್ರೀಂಕೋರ್ಟ್ ಆಲ್ಕೋಹಾಲ್ ಹೋಂ ಡೆಲಿವರಿ ಬಗ್ಗೆ ಪರಿಗಣಿಸಿ: ಸುಪ್ರೀಂಕೋರ್ಟ್

ಆದರೆ, ಆನ್‌ಲೈನ್‌ನಲ್ಲಿ ಮದ್ಯ ಮಾರಾಟ ಮಾಡಲು ಕೋರ್ಟ್ ಅನುಮತಿ ನೀಡಿದೆ. ಇನ್ನು ಮದ್ಯದಂಗಡಿಗಳ ಬಳಿ ಜನಸಂದಣಿಯನ್ನು ನಿಯಂತ್ರಿಸುವ ಉದ್ದೇಶದಿಂದ ಆನ್‌ಲೈನ್‌ನಲ್ಲಿ ಮದ್ಯ ಮಾರಾಟ ಮಾಡುವುದರ ಬಗ್ಗೆ ಸರ್ಕಾರಗಳು ಚಿಂತಿಸಲಿ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ.

Madras High Court orders close all liquor shops in Tamil Nadu

ತಮಿಳುನಾಡಿನಲ್ಲಿ ಶುಕ್ರವಾರ ಒಂದೇ ದಿನ 600 ಹೊಸ ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿದೆ. ಈ ಪೈಕಿ ಸುಮಾರು 399 ಕೇಸ್‌ಗಳು ರಾಜಧಾನಿ ಚೆನ್ನೈನಲ್ಲಿ ವರದಿಯಾಗಿದೆ. ಸೋಂಕಿನಿಂದ ಮೂವರು ಸಾವನ್ನಪ್ಪಿದ್ದಾರೆ ಎಂದು ವರದಿ ಹೇಳಿದೆ.

ಇನ್ನು ರಾಜ್ಯದಲ್ಲಿ ಈವರೆಗೂ 6,009 ಕೊರೊನಾ ವೈರಸ್‌ ಪ್ರಕರಣಗಳು ದಾಖಲಾಗಿದೆ. ಈ ಪೈಕಿ 4361 ಪ್ರಕರಣಗಳು ಸಕ್ರಿಯವಾಗಿದೆ. ಒಟ್ಟು 40 ಜನರು ತಮಿಳುನಾಡಿನಲ್ಲಿ ಸಾವನ್ನಪ್ಪಿದ್ದಾರೆ.

English summary
Madras High Court orders closure of all state-run TASMAC liquor shops in Tamil Nadu, permits only online sale of liquor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X