ಜಯಾ ಸರ್ಕಾರದ ವಿರುದ್ಧ ದನಿ ಎತ್ತಿದ ಕೋವನ್ ಗೆ ಮುಕ್ತಿ ಸಿಕ್ಕಿಲ್ಲ!
ಚೆನ್ನೈ, ನ.03: ತಮಿಳುನಾಡು ಸರ್ಕಾರಿ ಸ್ವಾಮ್ಯದ ಮದ್ಯದ ಮಳಿಗೆ(TASMAC) ಗಳನ್ನು ಮುಚ್ಚುವಂತೆ ಆಗ್ರಹಿಸಿ ಚಳವಳಿ ನಡೆಸುತ್ತಿದ್ದ ಜಾನಪದ ಗಾಯಕ ಕೋವನ್‌ರನ್ನು ಬಂಧಿಸಿರುವುದು ಎಲ್ಲರಿಗೂ ಗೊತ್ತಿರಬಹುದು. ಕೋವನ್ ರನ್ನು ದ್ವೇಷದಿಂದ ಅಕ್ರಮವಾಗಿ ಬಂಧಿಸಲಾಗಿದೆ ಎಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ತಿರಸ್ಕರಿಸಿದೆ.
ಪೀಪಲ್ಸ್ ಆರ್ಟ್ ಹಾಗೂ ಲಿಟೆರರಿ ಅಸೋಸಿಯೇಷನ್ಸ್ ನ ಸದಸ್ಯರಾದ ಶಿವದಾಸ್ ಅಲಿಯಾಸ್ ಕೋವನ್ ರನ್ನು ಪೊಲೀಸರು ಅಕ್ರಮವಾಗಿ ಬಂಧಿಸಿದ್ದಾರೆ. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದು ಮದ್ರಾಸ್ ಹೈಕೋರ್ಟಿನಲ್ಲಿ ಹೇಬಿಯಸ್ ಕಾರ್ಪಸ್ ಪಿಟೀಷನ್ ಹಾಕಲಾಗಿತ್ತು.
ಕೋವನ್ ಅವರ ಗೆಳೆಯ ವಿ ವೆಂಕಟೇಶನ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿದ ಜಸ್ಟೀಸ್ ಆರ್ ಸುಧಾಕರ್ ಹಾಗೂ ಜಸ್ಟೀಸ್ ಪಿಎನ್ ಪ್ರಕಾಶ್ ಅವರು ಅರ್ಜಿಯನ್ನು ತಳ್ಳಿ ಹಾಕಿ, ಎಫ್ ಐಆರ್ ಸರಿಯಾಗಿದೆ ಎಂದಿದ್ದಾರೆ.

ತಮಿಳುನಾಡು ಸರಕಾರದ ಕ್ರಮವನ್ನು ಸಿಪಿಐ ಕೂಡಾ ಟೀಕಿಸಿ, ಶೀಘ್ರ ಬಿಡುಗಡೆಗೆ ಆಗ್ರಹಿಸಿದೆ.ತಮಿಳುನಾಡು ಸರಕಾರದ ಕ್ರಮವು ಅಭಿವ್ಯಕ್ತಿ ಸ್ವಾತಂತ್ರದ ವಿರುದ್ಧವಾಗಿದೆ, ಇದು ಖಂಡನೀಯ'' ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಆರ್.ಮುತ್ತರಸನ್ ಹೇಳಿದ್ದಾರೆ.
Kovan's arrest an attack on freedom of expression : People's power #FightforKovan pic.twitter.com/mGd5MhZ4pw
— Shabbir Ahmed (@Ahmedshabbir20) November 2, 2015 ಜನಪರ ಎಂದು ಹೇಳಿಕೊಳ್ಳುವ ಸರಕಾರವು ಕೋವನ್‌ರಂಥಕಲಾವಿದರ ನಡೆಯನ್ನು ಸ್ವಾಗತಿಸಬೇಕು. ಜಾನಪದ ಗಾಯಕನ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಕೈಬಿಟ್ಟು ಶೀಘ್ರವಾಗಿ ಬಿಡುಗಡೆಗೊಳಿಸಬೇಕು ಎಂದು ಎಂದಿರುವ ಮುತ್ತರಸನ್ ಆಗ್ರಹಿಸಿದ್ದಾರೆ.
ದೇಶದ್ರೋಹ, ಮುಖ್ಯಮಂತ್ರಿ ವಿರುದ್ಧ ಆಕ್ಷೇಪಕಾರಿ ಅಂಶಗಳನ್ನು ಅಪ್‌ಲೋಡ್ ಮಾಡಿರುವುದು ಹಾಗೂ ಸಾರ್ವಜನಿಕ ಶಾಂತಿಗೆ ಭಂಗ ತಂದ ಆರೋಪದಲ್ಲಿ 'ಮಕ್ಕಳ್ ಕಲೈ ಇಳಕ್ಕಿಯ ಕಳಗಂ'ನ ಗಾಯಕ 54 ವರ್ಷದ ಕೋವನ್‌ರನ್ನು ತಮಿಳುನಾಡು ಪೊಲೀಸರು ಅಕ್ಟೋಬರ್ 30ರಂದು ಬಂಧಿಸಿದ್ದರು. ಈ ಸುದ್ದಿಗೆ ಸಂಬಂಧಿಸಿದ ವಿಡಿಯೋ ಇಲ್ಲಿದೆ.












Click it and Unblock the Notifications