ಕಳಂಕಿತ ಕಾರ್ತಿ ಚಿದಂಬರಂ ಸ್ಪರ್ಧೆಗೆ ಕಾಂಗ್ರೆಸ್ ಪಕ್ಷದಲ್ಲೇ ವಿರೋಧ
ಚೆನ್ನೈ, ಮಾರ್ಚ್ 25: ತಮಿಳುನಾಡಿನ ಶಿವಗಂಗಾ ಕ್ಷೇತ್ರದಿಂದ ಕಾರ್ತಿ ಚಿದಂಬರಂ ಅವರನ್ನು ಕಣಕ್ಕಿಳಿಸಿರುವುದು ಪಕ್ಷದಲ್ಲಿ ಅಸಮಾಧಾನ ಭುಗಿಲೇಳಲು ಕಾರಣವಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಐಎನ್‌ಎಕ್ಸ್ ಮೀಡಿಯಾ ಹಗರಣದಲ್ಲಿ ಆರೋಪಿಯಾಗಿರುವ ಕಾರ್ತಿ ಚಿದಂಬರಂಗೆ ಟಿಕೆಟ್ ನೀಡಿರುವುದು ವಿರೋಧಿಗಳ ಟೀಕೆಗೆ ಗುರಿಯಾಗಿರುವ ಬೆನ್ನಲ್ಲೇ, ಪಕ್ಷದಲ್ಲಿ ಕಾರ್ತಿ ಸ್ಪರ್ಧೆಗೆ ಆಕ್ಷೇಪ ವ್ಯಕ್ತವಾಗಿದೆ.
ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಕೇಂದ್ರ ಸಚಿವ ಇ.ಎಂ. ಸುದರ್ಶನ ನಚಿಯಪ್ಪನ್, ಕಾರ್ತಿ ಉಮೇದುವಾರಿಕೆಗೆ ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. 1999ರಲ್ಲಿ ತಮಿಳ್ ಮಾನಿಲಾ ಕಾಂಗ್ರೆಸ್‌ನಲ್ಲಿದ್ದ ನಾಚಿಯಪ್ಪನ್, ಆಗ ಕಾರ್ತಿಯ ತಂದೆ, ಮಾಜಿ ಸಚಿವ ಪಿ. ಚಿದಂಬರಂ ಅವರನ್ನು ಸೋಲಿಸಿದ್ದರು.

2014ರ ಚುನಾವಣೆಯಲ್ಲಿ ಕಾರ್ತಿ ಚಿದಂಬರಂ ಸೋಲು ಅನುಭವಿಸಿದ್ದರು. ಐಎನ್‌ಎಕ್ಸ್ ಮೀಡಿಯಾದ ಅಕ್ರಮ ಹಣ ವರ್ಗಾವಣೆ ಪ್ರಕರಣ ಸೇರಿದಂತೆ ಅನೇಕ ಕ್ರಿಮಿನಲ್ ಪ್ರಕರಣಗಳು ಅವರ ಮೇಲಿದೆ.
ಮರ್ಸಿಡೆಸ್ ಬೆಂಜ್ ಕಾರಲ್ಲಿ ಕಮ್ಯುನಿಸ್ಟ್ ಬಾವುಟ!
ಕಾರ್ತಿ ಚಿದಂಬರಂ ಅವರು ಪ್ರಚಾರಕ್ಕೆ ತೆರಳುವ ಮರ್ಸಿಡಿಸ್ ಬೆಂಜ್ ಕಾರಿನ ಮೇಲೆ ಎಲ್ಲ ಮೈತ್ರಿ ಪಕ್ಷಗಳ ಬಾವುಟಗಳನ್ನು ಅಳವಡಿಸಿದ್ದಾರೆ. ಈ ಚಿತ್ರವನ್ನು ಟ್ವಿಟ್ಟರ್‌ನಲ್ಲಿ ಹಾಕಿಕೊಂಡಿದ್ದರೆ. ಇದಕ್ಕೆ ತೀವ್ರ ಟೀಕೆ ವ್ಯಕ್ತವಾಗಿದೆ.
ಶ್ರಮಿಕ ವರ್ಗವನ್ನು ಪ್ರತಿನಿಧಿಸುವ ಕಮ್ಯುನಿಸ್ಟ್ ಪಕ್ಷಗಳ ಬಾವುಟವನ್ನು ಸಹ ಐಷಾರಾಮಿ ಮರ್ಸಿಡಿಸ್‌ನಲ್ಲಿ ಅಳವಡಿಸಿರುವುದನ್ನು ಕುಹಕವಾಡಿದ್ದಾರೆ.
Corrupt dynast Karti flaunting a Communist party flag on a Mercedes Benz car. He has also displayed fanatic Tamil Muslim Munnetra Kazagam's flag also shows his 'secular' credentials.
— Chowkidar Tejasvi Surya (@Tejasvi_Surya) 25 March 2019
One picture showcases all ills of today's politics.
Explains why @narendramodi is inevitable! pic.twitter.com/VIBvcu1H4L
ಭ್ರಷ್ಟ ವಂಶದ ಕಾರ್ತಿ ಮರ್ಸಿಡಿಸ್ ಬೆಂಜ್ ಕಾರ್‌ನಲ್ಲಿ ಕಮ್ಯುನಿಸ್ಟ್ ಪಕ್ಷದ ಬಾವುಟವನ್ನು ಹಾರಿಸುತ್ತಿದ್ದಾರೆ. ಅವರು ಮತಾಂಧ ತಮಿಳ್ ಮುಸ್ಲಿಂ ಮುನ್ನೇತ್ರ ಕಳಗಂನ ಬಾವುಟವನ್ನೂ ಹಾರಿಸಿದ್ದಾರೆ. ಇದು ಅವರ 'ಜಾತ್ಯತೀತತೆ'ಯನ್ನು ಪ್ರದರ್ಶಿಸುತ್ತದೆ. ಇಂದಿನ ರಾಜಕೀಯದ ಕೆಡಕುತನವನ್ನು ಈ ಒಂದು ಫೋಟೊ ತೋರಿಸುತ್ತದೆ ಎಂದು ಬಿಜೆಪಿ ಯುವ ಘಟಕದ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಸೂರ್ಯ ಹೇಳಿದ್ದಾರೆ.












Click it and Unblock the Notifications