• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಮಲಾ ಹ್ಯಾರಿಸ್‌ಗೆ ಶುಭಕೋರಿ ತಮಿಳುನಾಡಿನಲ್ಲಿ ಪೋಸ್ಟರ್

|
Google Oneindia Kannada News

ಚೆನ್ನೈ, ಆಗಸ್ಟ್ 17: ಅಮೆರಿಕ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್‌ಗೆ ಶುಭಕೋರಿ ತಮಿಳುನಾಡಿನಲ್ಲಿ ಈಗಾಗಲೇ ಪೋಸ್ಟರ್‌ಗಳು ತಲೆ ಎತ್ತಿವೆ.

ಕಮಲಾ ಹ್ಯಾರಿಸ್ ಜಯಶಾಲಿಯಾಗಲಿ ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ.ಕಮಲಾ ಅವರು ಚೆನ್ನೈ ದಿನಗಳ ನೆನಪು ಹಂಚಿಕೊಂಡಿದ್ದರು. ಚೆನ್ನೈನಲ್ಲಿ ಅಜ್ಜನೊಂದಿಗೆ ಸುದೀರ್ಘ ನಡಿಗೆ, ಅವರಿಗೆ ಮತ್ತು ಸೋದರಿ ಮಾಯಾಗೆ ಅತ್ಯುತ್ತಮ ಇಡ್ಲಿಯ ಪ್ರೀತಿ ತುಂಬುವ ತಾಯಿಯ ಪ್ರಯತ್ನಗಳನ್ನು ಕಮಲಾ ಮೆಲುಕು ಹಾಕಿದ್ದರು.

ಕಮಲಾ ಹ್ಯಾರಿಸ್‌ಗಿಂತಲೂ ಹೆಚ್ಚು ಭಾರತೀಯರು ನನ್ನ ಬೆಂಬಲಕ್ಕಿದ್ದಾರೆ: ಡೊನಾಲ್ಡ್ ಟ್ರಂಪ್ಕಮಲಾ ಹ್ಯಾರಿಸ್‌ಗಿಂತಲೂ ಹೆಚ್ಚು ಭಾರತೀಯರು ನನ್ನ ಬೆಂಬಲಕ್ಕಿದ್ದಾರೆ: ಡೊನಾಲ್ಡ್ ಟ್ರಂಪ್

ಮದ್ರಾಸ್‌ನಲ್ಲಿ ತಮ್ಮ ಅಜ್ಜನೊಂದಿಗೆ ಬೆಳಗ್ಗೆ ದೂರವಾದರೂ ನಡೆಯುತ್ತಾ, ಮಾತನಾಡುತ್ತಾ ಸಾಗುತ್ತಿದ್ದ ನೆನಪಿನೊಂದಿಗೆ, ಅವರು ಭಾರತದ ಸ್ವಾತಂತ್ರ್ಯ ಹೋರಾಟದ ನಾಯಕರ ಬಗ್ಗೆ ತಿಳಿಸುತ್ತಿದ್ದುದನ್ನು ನೆನಪಿಸಿಕೊಂಡಿದ್ದರು.

ಅಮೆರಿಕ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಜೋ ಬಿಡೆನ್ ಇತ್ತೀಚಗಷ್ಟೇ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಕ್ಯಾಲಿಫೋರ್ನಿಯಾ ಸೆನೆಟರ್ ಆಗಿರುವ ಕಮಲಾ ಹ್ಯಾರಿಸ್ ಅವರನ್ನು ಆಯ್ಕೆ ಮಾಡಿದ್ದಾರೆ. ಕಮಲಾ ಉಪಾಧ್ಯಕ್ಷೆಯಾಗಿ ಆಯ್ಕೆಯಾದರೆ , ಆ ಸ್ಥಾನಕ್ಕೇರಿದ ಕಪ್ಪು ವರ್ಣೀಯ ಹಾಗೂ ಭಾರತ-ಅಮೆರಿಕನ್ ಮಹಿಳೆಯಾಗಲಿದ್ದಾರೆ.

ಕಮಲಾ ಸೋದರ ಸೊಸೆ ಫೋಟೊ ಒಂದನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದಾರೆ. ಅದರಲ್ಲಿ ಪಿವಿ ಗೋಪಾಲನ್‌ ಮತ್ತು ಕಮಲಾ ಹ್ಯಾರಿಸ್ ಇದ್ದಾರೆ.

English summary
US Democratic vice-presidential candidate Kamala Harris' poster has been put up in Tamil Nadu calling her "victorious".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X