ಭಾಷಾ ಹೋರಾಟ ಅತ್ಯಂತ ಉಗ್ರವಾಗಿರುತ್ತದೆ: ಶಾ ಗೆ ಕಮಲ್ ಹಾಸನ್ ಎಚ್ಚರಿಕೆ

Recommended Video

      ಭಾಷಾ ಹೋರಾಟ ಅತ್ಯಂತ ಉಗ್ರವಾಗಿರುತ್ತದೆ: ಶಾ ಗೆ ಕಮಲ್ ಹಾಸನ್ ಎಚ್ಚರಿಕೆ | Oneindia Kannada

      ಚೆನ್ನೈ, ಸೆಪ್ಟೆಂಬರ್ 16: 'ವಿವಿಧತೆಯಲ್ಲಿ ಏಕತೆ ಎಂಬ ಪ್ರಮಾಣವನ್ನು ನಾವು ಭಾರತ ಸ್ವಾತಂತ್ರ್ಯ ದೇಶವಾದಾಗ ಮಾಡಿದ್ದೆವು, ಅದನ್ನು ಯಾವ ಶಾ, ಸುಲ್ತಾನನೂ ಬದಲಾಯಿಸಲು ಸಾಧ್ಯವಿಲ್ಲ' ಎಂದು ನಟ, ಮಕ್ಕಳ ನೀತಿ ಮೈಯಂ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಹೇಳಿದ್ದಾರೆ.

      'ಒಂದು ದೇಶ, ಒಂದು ಭಾಷೆ' ಎಂಬ ಅಮಿತ್ ಶಾ ಹೇಳಿಕೆ ವಿರುದ್ಧ ಪ್ರತಿಭಟನಾ ರೂಪಕವಾಗಿ ಇಂದು ವಿಡಿಯೋ ಒಂದನ್ನು ಬಿಡುಗಡೆ ಮಾಡಿರುವ ಕಮಲ್ ಹಾಸನ್, ಹಿಂದಿ ಹೇರಿಕೆಯನ್ನು ಕಠುವಾಗಿ ಖಂಡಿಸಿದ್ದಾರೆ.

      ಜಲ್ಲಿಕಟ್ಟು ಹೋರಾಟ ಒಂದು ಉದಾಹರಣೆಯಷ್ಟು, ಭಾಷೆಯ ವಿಷಯಕ್ಕೆ ಬಂದರೆ ನಮ್ಮ ಹೋರಾಟ ಅದಕ್ಕಿಂತಲೂ ಉಗ್ರವಾಗಿರುತ್ತದೆ ಎಂದು ಕೇಂದ್ರಕ್ಕೆ ಎಚ್ಚರಿಕೆಯನ್ನು ಕಮಲ್ ಹಾಸನ್ ನೀಡಿದ್ದಾರೆ.

      Kamal Haasan Warns Amit Shah Against Hindi Imposition

      ನಾವು ಎಲ್ಲ ಭಾಷೆಗಳನ್ನೂ ಪ್ರೀತಿಸುವವರು, ಆದರೆ ನಮ್ಮ ಮಾತೃಭಾಷೆ ನಮ್ಮದೇ ಅದಕ್ಕೆ ಹೆಚ್ಚಿನ ಗೌರವ ಯಾಗಾವಲೂ ಇರುತ್ತದೆ ಎಂದ ಅವರು, ಬಂಗಾಳಿ ಭಾಷೆಯ ರಾಷ್ಟ್ರಗೀತೆಯನ್ನು ಎಲ್ಲರೂ ಗೌರವದಿಂದ ಹಾಡುತ್ತಿದ್ದೇವೆ, ಮತ್ತು ಹಾಡುತ್ತೇವೆ ಕೂಡ, ಇದಕ್ಕೆ ಕಾರಣ ರಾಷ್ಟ್ರಗೀತೆ ಬರೆದ ಕವಿ, ದೇಶದ ಎಲ್ಲ ಭಾಷೆಗೆ ಪ್ರದೇಶಕ್ಕೆ ಸಮಾನ ಗೌರವ ಕೊಡುತ್ತಿದ್ದರು ಹಾಗಾಗಿ ಎಂದು ಎಂದು ಕಮಲ್ ಹಾಸನ್ ಹೇಳಿದ್ದಾರೆ.

      ಹಿಂದಿ ಹೇರಿಕೆ ವಿರುದ್ಧ ದಕ್ಷಿಣದ ರಾಜ್ಯಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ, ಕುಮಾರಸ್ವಾಮಿ ಮತ್ತು ಸ್ವತಃ ಯಡಿಯೂರಪ್ಪ ಸಹ ಹಿಂದಿ ಹೇರಿಕೆ ವಿರುದ್ಧ ದನಿ ಎತ್ತಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+