ರಾಜಕೀಯದಲ್ಲಿ ರಜನಿ ಜತೆಗೆ ಕೆಲಸ ಮಾಡಲು ಖುಷಿ: ಕಮಲ್

Posted By:
Subscribe to Oneindia Kannada
   Kamal Haasan says i will join hands with rajinikanth if he joins politics | Oneindia Kannada

   ಚೆನ್ನೈ, ಸೆಪ್ಟೆಂಬರ್ 15: ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನೀಕಾಂತ್ ಅವರು ರಾಜಕೀಯಕ್ಕೆ ಬಂದರೆ, ಅವರ ಜತೆಗೆ ಸಮಾಜ ಸೇವೆ ಮಾಡಲು ನಾನು ಸಿದ್ಧ ಎಂದು ನಟ ಕಮಲ ಹಾಸನ್ ತಿಳಿಸಿದ್ದಾರೆ.

   ಚೆನ್ನೈನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ನನಗೂ ರಜನೀ ಅವರಿಗೆ ಚಿತ್ರರಂಗದಲ್ಲಿ ಪೈಪೋಟಿಯಿದೆ ನಿಜ. ಆದರೆ, ಸಮಯ ಬಂದರೆ ನಮ್ಮ ನಡುವಿನ ವಿಚಾರಗಳನ್ನು ನಾವು ಚರ್ಚಿಸಲು ನಾವು ಹಿಂಜರಿಯೆವು'' ಎಂದು ಅವರು ತಿಳಿಸಿದರು.

   Kamal Haasan Says Would Work With Rajinikanth If He Ever Joins Politics

   ''ರಜನೀಕಾಂತ್ ಅವರು ರಾಜಕೀಯಕ್ಕೆ ಬರುವುದು ಖಚಿತವಾದರೆ ನನ್ನಲ್ಲೂ ರಾಜಕೀಯಕ್ಕೆ ಬರುವ ಉತ್ಸಾಹ ಹೆಚ್ಚುತ್ತದೆ. ಆದರೆ, ಚಿತ್ರರಂಗದಲ್ಲಿರುವ ಪೈಪೋಟಿ ರಾಜಕೀಯ ರಂಗದಲ್ಲಿ ಇರುವುದಿಲ್ಲ. ನಾವಿಬ್ಬರೂ ಒಟ್ಟಿಗೇ ಸಮಾಜ ಸೇವೆಗೆ ನಿಲ್ಲುತ್ತೇವೆ'' ಎಂದು ಅವರು ತಿಳಿಸಿದ್ದಾರೆ.

   ಕಮಲ ಹಾಸನ್ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಹೇಳಿಕೊಂಡಿದ್ದರು. ಕಳೆದ ತಿಂಗಳು ನಡೆದಿದ್ದ ಡಿಎಂಕೆಯ ಬೃಹತ್ ಸಮಾರಂಭವೊಂದರಲ್ಲಿ ಅವರು ವೇದಿಕೆಯಲ್ಲಿ ಕೂತಿದ್ದು ಹಾಗೂ ಇದೇ ತಿಂಗಳ ಮೊದಲ ವಾರದಲ್ಲಿ ಅವರು ತಿರುವನಂತಪುರದಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮನೆಯಲ್ಲಿ ಆತಿಥ್ಯ ಸ್ವೀಕರಿಸಿದ್ದು ಅವರು ರಾಜಕೀಯಕ್ಕೆ ಧುಮುಕುವ ಊಹಾಪೋಹಗಳಿಗೆ ರೆಕ್ಕೆ ಕಟ್ಟಿದ್ದವು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Actor Kamal Haasan has said he would be willing to work with Rajinikanth if the superstar ever decides to enter politics. The actor had earlier this week confirmed that he was considering launching his own political party.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ