ರಾಜಕೀಯಕ್ಕೆ ಕಮಲ್ ಎಂಟ್ರಿ, ಹೊಸ ಪಕ್ಷ ಸ್ಥಾಪನೆ

ಮಧುರೈ, ಫೆಬ್ರವರಿ 21: ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್ ಅವರು ಬುಧವಾರ ರಾತ್ರಿ ತಮ್ಮ ರಾಜಕೀಯ ವೃತ್ತಿ ಆರಂಭಿಸಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಅಪಾರ ಜನಸ್ತೋಮದ ನಡುವೆ ಹೊಸ ಪಕ್ಷವನ್ನು ಘೋಷಿಸಿದ್ದಾರೆ. ಕಮಲ್ ಅವರ ಪಕ್ಷದ ಹೆಸರು- 'ಮಕ್ಕಳ್ ನೀತಿ ಮಯ್ಯಂ'.

Kamal Haasan launches new party 'Makkal Neethi Maiyyam'

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಸೋಮನಾಥ್ ಭಾರ್ತಿ ಅವರ ಸಮ್ಮುಖದಲ್ಲಿ ಹೊಸ ಪಕ್ಷವನ್ನು ಘೋಷಿಸಿದರು. ನಾನು ಇಲ್ಲಿಗೆ ಭಾಷಣ ಮಾಡಲು ಬಂದಿಲ್ಲ.

ನಿಮ್ಮೆಲ್ಲರ ಸಲಹೆಯಂತೆ ಭ್ರಷ್ಟ ರಾಜಕೀಯ ವ್ಯವಸ್ಥೆಯನ್ನು ಸರಿಪಡಿಸಲು ಮುಂದಾಗುತ್ತೇನೆ ಎಂದು ಕಮಲ್ ಹೇಳಿದರು. ಕಮಲ್ ಹಾಸನ್ ಅವರು ಇಂದು ತಮ್ಮ ರಾಜಕೀಯ ವೃತ್ತಿ ಆರಂಭಿಸಿದ್ದು, ಬೆಳಗ್ಗೆ ರಾಮನಾಥಪುರಂಗೆ ಭೇಟಿ ನೀಡಿ, ಮಾಜಿ ರಾಷ್ಟ್ರಪತಿ, ದಿವಂಗತ ಎಪಿಜೆ ಅಬ್ದುಲ್ ಕಲಾಂ ನಿವಾಸಕ್ಕೆ ಭೇಟಿ ನೀಡಿ, ಕುಟುಂಬಸ್ಥರೊಡನೆ ಮಾತುಕತೆ ನಡೆಸಿದರು.

ಭ್ರಷ್ಟಾಚಾರದ ವಿರುದ್ಧ ಹೋರಾಡಲು ಮತ್ತು ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಹಾಗೂ ಜನರ ಪರವಾಗಿ ಕೆಲಸ ಮಾಡಲು ತಾವು ರಾಜಕೀಯಕ್ಕೆ ಬಂದಿರುವುದಾಗಿ ಕಮಲ್ ಹಾಸನ್ ಘೋಷಿಸಿದ್ದಾರೆ.

'ನಾನು ಸೋತರೆ ಸಿಡಿದೇಳುತ್ತೇನೆ. ನಾನು ನಿರ್ಧರಿಸಿದರೆ ನಾನೇ ಮುಖ್ಯಮಂತ್ರಿ. ಬನ್ನಿ, ಮೂರ್ಖರ ವಿರುದ್ಧ ಹೋರಾಡುವವನೇ ನಿಜವಾದ ನಾಯಕ'. ಇದಕ್ಕೂ ಮುನ್ನ ಸ್ವಲ್ಪ ಹೊತ್ತಿನಲ್ಲಿ ಒಂದು ಪ್ರಕಟಣೆ ನೀಡುತ್ತೇನೆ. ಸ್ವಲ್ಪ ತಾಳ್ಮೆಯಿಂದಿರಿ' ಎಂದು ಕಳೆದ ವರ್ಷ ಟ್ವೀಟ್ ಮಾಡುವ ಮೂಲಕ ರಾಜಕೀಯ ಪ್ರವೇಶದ ಸೂಚನೆ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+