ಆ್ಯಪ್ ಬಿಡುಗಡೆ ಮಾಡಿ ಪಕ್ಷ ಸ್ಥಾಪನೆಗೆ ಅಡಿಗಲ್ಲು ಹಾಕಿದ ಕಮಲ್

Subscribe to Oneindia Kannada

ಚೆನ್ನೈ, ನವೆಂಬರ್ 7: ಇಂದು ಕಮಲ್ ಹಾಸನ್ ಗೆ 63ನೇ ಹುಟ್ಟುಹಬ್ಬದ ಸಂಭ್ರಮ. ಈ ದಿನದಂದೇ ಕಮಲ್ ಹಾಸನ್ ತಮ್ಮ ಬಹು ನಿರೀಕ್ಷಿತ ರಾಜಕೀಯ ಪಕ್ಷ ಸ್ಥಾಪನೆಗೆ ಮೊದಲ ಅಡಿಗಲ್ಲು ಹಾಕಿದ್ದಾರೆ.

ಕಮಲ್ ಹಾಸನ್ ಹುಟ್ಟುಹಬ್ಬ ಆಚರಣೆ ರದ್ದು, ಮತ್ತೇನ್ಮಾಡ್ತಿದ್ದಾರೆ?

ಜನರ ಜತೆ ಸಂಪರ್ಕ ಸಾಧಿಸಲು ಆ್ಯಪ್ ಬಿಡುಗಡೆ ಮಾಡಿದ್ದು, ರಾಜಕೀಯ ಪಕ್ಷ ಸ್ಥಾಪನೆಯ ಮೊದಲ ಮೆಟ್ಟಿಲು ಎಂದೇ ವಿಶ್ಲೇಷಿಸಲಾಗುತ್ತಿದೆ.

Kamal Haasan launches mobile app to connect with people on his 63rd birthday

ಸಾರ್ವಜನಿಕರ ಜತೆ ಸಂಪರ್ಕ ಸಾಧಿಸಲು ಈ ಮೊಬೈಲ್ ಆ್ಯಪ್ ಒಂದು ವೇದಿಕೆ ಎಂದು ಕಮಲ್ ಹಾಸನ್ ಹೇಳಿದ್ದಾರೆ. "ಇದೊಂದು ವಿಷಲ್ ಬ್ಲೋವರ್ ವೇದಿಕೆ. ಎಲ್ಲೆಲ್ಲಾ ಅನ್ಯಾಯ ನಡೆಯುತ್ತಿದೆಯೋ ಅಲ್ಲೆಲ್ಲಾ ಆ್ಯಪ್ ಬಳಸಬಹುದು. ಈ ಮೂಲಕ ನ್ಯಾಯಕ್ಕಾಗಿ ಹೋರಾಡಲಾಗುವುದು," ಎಂದು ಅವರು ಹೇಳಿದ್ದಾರೆ.

"ಕನಸುಗಳು ಅನ್ವೇಷಣೆಗಳನ್ನು ಸೃಷ್ಟಿಸುತ್ತದೆ. ಅನ್ವೇಷಣೆಗಳು ಬದುಕಿನ ದಾರಿಗಳಾಗುತ್ತವೆ" ಎಂದು ಹೇಳಿದ ಕಮಲ್ ಹಾಸನ್, ನಾನು ರಾಜ್ಯಾದ್ಯಂತ ಪ್ರವಾಸ ಮಾಡಲು ಯೋಜನೆ ರೂಪಿಸುತ್ತಿದ್ದೇನೆ ಎಂದು ಮಾಹಿತಿ ನೀಡಿದರು.

ನಮ್ಮ ಸ್ವಯಂಸೇವಕರು ಎಲ್ಲಾ ಜಿಲ್ಲೆಗಳಲ್ಲೂ ಉತ್ತಮ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಪಕ್ಷಗಳೂ ನಮ್ಮ ಕಲ್ಯಾಣ ಕಾರ್ಯಕ್ರಮಗಳನ್ನು ಮೆಚ್ಚಿಕೊಂಡಿದ್ದಾರೆ ಎಂದು ಕಮಲ್ ಹೇಳಿದರು

ರಾಜಕೀಯ ಪ್ರವೇಶದ ಬಗ್ಗೆ ಕೇಳಿದ ಪ್ರಶ್ನೆಗೆ, ಈ ಸಂದರ್ಭದಲ್ಲಿ ಹಿಂದುರುಗುವ ಪ್ರಶ್ನೆಯೇ ಇಲ್ಲ. ಅದಕ್ಕೇ ನಾನು ಹೇಳಿದ್ದು ಸಾಕಷ್ಟು ತಳಮಟ್ಟದ ಕೆಲಸಗಳನ್ನು ಮಾಡಬೇಕಾಗಿದೆ ಎಂಬುದಾಗಿ ವಿವರಿಸಿದರು.

ಇವತ್ತು ನಾನು ರಾಜಕೀಯ ಪಕ್ಷ ಘೋಷಣೆ ಮಾಡುತ್ತೇನೆ ಎಂದು ಸುದ್ದಿಗಳು ಓಡಾಡುತ್ತಿದ್ದವು. ಆದರೆ ನಾನು ತಳಮಟ್ಟದಲ್ಲಿ ಒಂದಷ್ಟು ಕೆಲಸಗಳನ್ನು ಮಾಡಬೇಕಾಗಿದೆ. ನಾವು ಕುಳಿತುಕೊಂಡು ಈ ಕುರಿತು ವಿಶ್ಲೇಷಣೆ ನಡೆಸುತ್ತಿದ್ದೇವೆ ಎಂದು ಕಮಲ್ ಹಾಸನ್ ಹೇಳಿದ್ದಾರೆ.

ಹಾಗಾಗಿ ಮುಂದಿನ ದಿನಗಳಲ್ಲಿ ಕಮಲ್ ಹಾಸನ್ ರ ರಾಜಕೀಯ ಪಕ್ಷವನ್ನು ನಿರೀಕ್ಷಿಸಬಹುದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Actor Kamal Haasan on Tuesday launched a mobile app and said that it would serve as a platform for the public to voice their concerns and dissent.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ