ಕಮಲ್ ಹಾಸನ್ ಹುಟ್ಟುಹಬ್ಬ ಆಚರಣೆ ರದ್ದು, ಮತ್ತೇನ್ಮಾಡ್ತಿದ್ದಾರೆ?

Posted By:
Subscribe to Oneindia Kannada
ಕಮಲ್ ಹಾಸನ್ ತಮ್ಮ ಹುಟ್ಟುಹಬ್ಬದ ದಿನ ಚೆನ್ನೈನ ಮಳೆ ಸಂತ್ರಸ್ತರ ಭೇಟಿ | Oneindia Kannada

ಚೆನ್ನೈ, ನವೆಂಬರ್ 07:ಅಭಿಮಾನಿಗಳ ಪಾಲಿನ ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್ ಅವರಿಗೆ ಇಂದು 63ನೇ ಹುಟ್ಟುಹಬ್ಬದ ಸಂಭ್ರಮ. ಆದರೆ, ಹುಟ್ಟುಹಬ್ಬ ಆಚರಣೆಯನ್ನು ಕಮಲ್ ರದ್ದುಗೊಳಿಸಿದ್ದಾರೆ. ಮಹಾಮಳೆಗೆ ತತ್ತರಿಸಿರುವ ಚೆನ್ನೈ ನಗರದ ಸಂತ್ರಸ್ತರ ಬಳಿಗೆ ಕಮಲ್ ತೆರಳುತ್ತಿದ್ದಾರೆ.

ಹುಟ್ಟುಹಬ್ಬದಂದು ಸರ್ಪ್ರೈಸ್ ನೀಡುತ್ತಾರಂತೆ ಕಮಲ್!

ಹಿಂದೂ ಭಯೋತ್ಪಾದನೆ ಬಗ್ಗೆ ಮಾತನಾಡಿ ಚರ್ಚೆಗೆ ಕಾರಣವಾಗಿರುವ ನಟ ಕಮಲ್ ಹಾಸನ್ ಶೀಘ್ರದಲ್ಲಿಯೇ ರಾಜಕೀಯಕ್ಕೆ ರಂಗ್ತ್ತೊ ಪ್ರವೇಶದ ಬಗ್ಗೆ ಸುಳಿವು ನೀಡಿದ್ದಾರೆ.ಅಭಿಮಾನಿಗಳು ಹಾಗೂ ವೆಲ್ಫೇರ್ ಕ್ಲಬ್ 39ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದ ಕಮಲ್ ಹಾಸನ್, ಈ ಬಗ್ಗೆ ಮಾತನಾಡಿದರು.

Kamal Haasan cancels birthday bash; here's what he is doing instead

ಹೊಸ ಪಕ್ಷ ಸ್ಥಾಪನೆ, ಹೆಸರು ಘೋಷಣೆಗೂ ಮುನ್ನ ಕಮಲ್ ಅವರು ನವೆಂಬರ್ 7ರಂದು ಮೊಬೈಲ್ ಆಪ್ ಬಿಡುಗಡೆ ಮಾಡಲಿದ್ದಾರೆ.ಈ ಆಪ್ ಮೂಲಕ ತನ್ನ ಬೆಂಬಲಿಗರನ್ನು ಸಂಪರ್ಕಿಸುವ ಹಾಗೂ ಅವರಿಂದ ಸಿಗುವ ಹಣವನ್ನು ಸಂಗ್ರಹಿಸುವ ಕೆಲಸ ಮಾಡುವುದಾಗಿ ಕಮಲ್ ಹಾಸನ್ ಹೇಳಿದ್ದಾರೆ.

ಸತ್ಯ ಹೇಳುವವರು ಜೈಲು ಸೇರಬೇಕಾದ್ರೆ ಜೈಲಿನಲ್ಲಿ ಜಾಗವಿರೋದಿಲ್ಲ ಎಂದು ಹಿಂದೂ ಭಯೋತ್ಪಾದನೆ ಲೇಖನ ಹಾಗೂ ತಮ್ಮ ಹೇಳಿಕೆ ಬಗ್ಗೆ ಕಮಲ್ ಹಾಸನ್ ಪ್ರತಿಕ್ರಿಯಿಸಿದ್ದಾರೆ.

ಚೆನ್ನೈ ನಿಂದ ಸುಮಾರು 20 ಕಿ.ಮೀ. ದೂರದಲ್ಲಿ ಕಮಲ್‌ ಅಭಿಮಾನಿಗಳ ಸಂಘದ ವತಿಯಿಂದ ಅಯೋಜಿಸಲಾಗಿರುವ ಮೆಡಿಕಲ್‌ ಕ್ಯಾಂಪಿಗೆ ಕಮಲ್ ಭೇಟಿ ನೀಡಲಿದ್ದಾರೆ. ನಂತರ ಮಳೆ ಪೀಡಿತ ಪ್ರದೇಶಗಳಿಗೆ ಅವರು ಭೇಟಿ, ಸಂತ್ರಸ್ತರ ನೋವನ್ನು ಆಲಿಸಲಿದ್ದಾರೆ. ಇದಾದ ಬಳಿಕ ಮೊಬೈಲ್ ಆಪ್ಲಿಕೇಷನ್ ಬಿಡುಗಡೆ ಹಾಗೂ ಪಕ್ಷದ ಬಗ್ಗೆ ಮಾಹಿತಿ ನೀಡುವ ಸಾಧ್ಯತೆಯಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kamal Haasan, who turns 63 today, cancelled his birthday bash taking into account the heavy rains that has been taking Chennai down lately.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ