ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯಲಲಿತಾ ಆರೋಗ್ಯ ಹದಗೆಟ್ಟಿದ್ದು ಏಕೆ? ಶಶಿಕಲಾ ನೀಡಿದ ಕಾರಣ...

By ವಿಕಾಸ್ ನಂಜಪ್ಪ
|
Google Oneindia Kannada News

Recommended Video

ಜಯಲಲಿತಾ ಆರೋಗ್ಯದ ಬಗ್ಗೆ ಮಾತನಾಡಿದ ಶಶಿಕಲಾ ನಟರಾಜನ್ | Oneindia Kannada

ಚೆನ್ನೈ, ಮಾರ್ಚ್ 21: ಜಯಲಲಿತಾ ಅವರಿಗೆ ಅತಿಯಾಗಿ ಒತ್ತಡ ಮತ್ತು ಅನಾರೋಗ್ಯ ಉಂಟಾಗಿದ್ದು ಅವರನ್ನು ಅಕ್ರಮ ಆಸ್ತಿ ಪ್ರಕರಣದಲ್ಲಿ ದೋಷಿ ಎಂದು ಪರಿಗಣಿಸಿ, ಜೈಲುಶಿಕ್ಷೆ ವಿಧಿಸಿದ ನಂತರ ಎಂದು ಜಯಾ ಆಪ್ತೆ ಶಶಿಕಲಾ ನಟರಾಜನ್ ಹೇಳಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಾವಿನ ತನಿಖೆ ನಡೆಸುತ್ತಿರುವ ನ್ಯಾ ಆರ್ಮುಗಂ ಸ್ವಾಮಿ ಆಯೋಗಕ್ಕೆ ಅಫಿಡವಿಟ್ ಸಲ್ಲಿಸಿದ ಶಶಿಕಲಾ, 'ನನಗೆ ಆರೋಗ್ಯ ಸರಿಯಿಲ್ಲ ಎಂದು ಜಯಲಲಿತಾ ಅವರೇ ಸ್ವತಃ ಹೇಳಿದ್ದರಿಂದ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು' ಎಂದಿದ್ದಾರೆ.

ಜಯಲಲಿತಾ ಕೊನೆಯ ದಿನಗಳ ಬಗ್ಗೆ ಕಾರು ಡ್ರೈವರ್ ಬಿಚ್ಚಿಟ್ಟ ಸತ್ಯ ಜಯಲಲಿತಾ ಕೊನೆಯ ದಿನಗಳ ಬಗ್ಗೆ ಕಾರು ಡ್ರೈವರ್ ಬಿಚ್ಚಿಟ್ಟ ಸತ್ಯ

ಸೆ.22, 2016 ರಂದು ಸಂಜೆ 9:30ಕ್ಕೆ ಬಾತ್ ರೂಮಿನಿಂದ ಬಂದ ಜಯಲಲಿತಾ ಅವರು ನನಗ್ಯಾಕೋ ಆರೋಗ್ಯ ಸರಿಯಿಲ್ಲ ಎಂದರು. ನಾನೇ ಅವರನ್ನು ಅವರ ಬೆಡ್ ಗೆ ಕರೆದೊಯ್ದೆ. ಆದರೆ ಬೆಡ್ ಮೇಲೆ ಮಲಗುತ್ತಿದ್ದಂತೆಯೇ ಅವರು ತೀರಾ ಸುಸ್ತಾದಂತೆ ಕಂಡರು. ಇದ್ದಕ್ಕಿದ್ದಂತೆ ಅವರು ಪ್ರಜ್ಞೆ ಕಳೆದುಕೊಂಡರು. ತಕ್ಷಣ ಅಂಬುಲೆನ್ಸ್ ಕರೆಸಿ ಅವರನ್ನು ಅಪೊಲೋ ಆಸ್ಪತ್ರೆಗೆ ಸೇರಿಸಲಾಯಿತು. ಅಂಬುಲೆನ್ಸ್ ನಲ್ಲಿ ಅವರಿಗೆ ಪ್ರಜ್ಞೆ ಮರಳಿಬಂತು. ಆಗ ಅವರು ಪಕ್ಕದಲ್ಲೇ ಇದ್ದ ಶಶಿಕಲಾ ಅವರ ಬಳಿ, 'ನನ್ನನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀರಿ' ಎಂದು ಕೇಳಿದರು. ಅದಕ್ಕೆ, 'ಆಸ್ಪತ್ರೆಗೆ' ಎಂದು ಶಶಿಕಲಾ ಉತ್ತರಿಸಿದರು.

Jayalalithaa’s stress, health issues due to conviction in DA case says Sasikala

ಇದಕ್ಕೂ ಮುನ್ನವೇ, ಸೆ.22 ರಂದು ಬೆಳಗ್ಗೆಯಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದ ಜಯಲಲಿತಾ ಅವರ ಬಳಿ ಆಸ್ಪತ್ರೆಗೆ ಹೋಗೋಣ ಎಂದು ಹಲವು ಬಾರಿ ಹೇಳಿದ್ದರೂ, ಅವರು ನಿರಾಕರಿಸಿದ್ದರು ಎಂದು ಸಹ ಶಶಿಕಲಾ ತಿಳಿಸಿದ್ದಾರೆ.

ವಿರೋಧಿಗಳನ್ನು ಬೆಚ್ಚಿಬೀಳಿಸುವ ಜಯಲಲಿತಾ ವಿಡಿಯೋ! ವಿರೋಧಿಗಳನ್ನು ಬೆಚ್ಚಿಬೀಳಿಸುವ ಜಯಲಲಿತಾ ವಿಡಿಯೋ!

ಅವರನ್ನು ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ದೋಷಿ ಎಂದು ಪರಿಗಣಿಸಿದ್ದು ಅವರಿಗೆ ತೀರಾ ಆಘಾತವನ್ನುಂಟುಮಾಡಿತ್ತು. ಅವರು ಅದರಿಂದಾಗಿಯೇ ಬಹಳ ಒತ್ತಡ ಅನುಭವಿಸುತ್ತಿದ್ದರು ಎಂದು ಶಶಿಕಲಾ ಹೇಳಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರನ್ನು ಚೆನ್ನೈನ ಅಪೋಲೋ ಆಸ್ಪತ್ರೆಗೆ ಸೆ.22 ರಂದು ದಾಖಲಿಸಲಾಗಿತ್ತು. ಸುಮಾರು ಎರಡೂವರೆ ತಿಂಗಳ ಚಿಕಿತ್ಸೆ ಫಲಕಾರಿಯಾಗದೆ ಅವರು ಡಿ.05 2016 ರಂದು ಕೊನೆಯುಸಿರೆಳೆದಿದ್ದರು.

English summary
Jayalalithaa's stress and health issues were mainly caused due to the conviction and imprisonment in the disproportionate assets case, her close aide Sasikala Natrajan has claimed. In an affidavit filed before the Justice Arumughaswamy Commission of Inquiry probing the death of the former Tamil Nadu Chief Minister, Sasikala said that Jayalalithaa had indicated that she was unwell, following which she was rushed to the hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X