• search
 • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಅಮ್ಮಾ' ಆಸ್ಪತ್ರೆ ಬಿಲ್! ಶಿವ ಶಿವಾ, ಒಂದು ಇಡ್ಲಿಗೆ ಒಂದು ಕೋಟಿ ರೂಪಾಯಿನಾ?!

|
   ಜಯಲಲಿತಾ ಆಸ್ಪತ್ರೆ ಬಿಲ್ ಲೀಕ್ ಆದ ಬಗ್ಗೆ ಟ್ವಿಟ್ಟಿಗರು ಹೇಳಿದ್ದು ಹೀಗೆ | Oneindia Kannada

   ಚೆನ್ನೈ, ಡಿಸೆಂಬರ್ 19: 'ಒಂದು ಇಡ್ಲಿ ಬೆಲೆ ಒಂದು ಕೋಟಿನಾ?' ಜಯಲಲಿತಾ ಚಿಕಿತ್ಸೆಯ ವೆಚ್ಚದ ಬಿಲ್ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಟ್ವಿಟ್ಟರ್ ನಲ್ಲಿ 'ಇಡ್ಲಿ' ಟ್ರೆಂಡ್ ಆಗಿದೆ!

   ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಚಿಕಿತ್ಸೆಗೆ ವೆಚ್ಚವಾದ ಆಸ್ಪತ್ರೆಯ ಬಿಲ್ ಅನ್ನು ತನಿಖೆಯ ಉದ್ದೇಶದಿಂದ ಗೌಪ್ಯವಾಗಿ ಇಡಲಾಗಿತ್ತು. ಆದರೆ ಅದು ಸೋರಿಕೆಯಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

   ವೈರಲ್ ಆದ ಜಯಲಲಿತಾ ಆಸ್ಪತ್ರೆ ಬಿಲ್! ಲೀಕ್ ಆಗಿದ್ದು ಹೇಗೆ?

   ಜಯಲಲಿತಾ ಚಿಕಿತ್ಸೆಗೆ 6,85,00,000 ರೂ. ವೆಚ್ಚವಾಗಿದೆ ಎಂದು ಆಸ್ಪತ್ರೆ ಬಿಲ್ ವಿವರ ನೀಡಿದೆ. ಮಾತ್ರವಲ್ಲ, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಸುಮಾರು 1,17,04,925 ಕೋಟಿ ರೂ.ನಷ್ಟು ಕೇವಲ ಊಟ, ತಿಂಡಿಗೇ ವೆಚ್ಚವಾಗಿದೆ ಎಂದು ಈ ಬಿಲ್ ನಲ್ಲಿ ಹೇಳಲಾಗಿದೆ.

   ಅನಾರೋಗ್ಯದ ಕಾರಣ 2016 ರ ಸೆಪ್ಟೆಂಬರ್ ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಜಯಲಲಿತಾ ಅವರು ಡಿಸೆಂಬರ್ 5, 2016 ರಂದು ಇಹಲೋಕ ತ್ಯಜಿಸಿದ್ದರು.

   ಜಯಾ ಅವರ ಸಾವು ಸಹಜವಲ್ಲ ಎಂದು ಅವರ ಆಪ್ತೇಷ್ಟರು ದೂರಿ ತನಿಖೆಗೆ ಆಗ್ರಹಿಸಿದ ಪರಿಣಾಮ ಆರ್ಮುಗಂ ಸ್ವಾಮಿ ಸಮಿತಿ ಜಯಾ ಸಾವಿನ ತನಿಖೆ ನಡೆಸುತ್ತಿದೆ. ಈ ಹಂತದಲ್ಲಿ ಬಿಲ್ ಸೋರಿಕೆಯಾಗಿರುವುದು ಅನುಮಾನ ಹುಟ್ಟಿಸಿದೆ.

   ಜಯಾ ಆಸ್ಪತ್ರೆಯಲ್ಲಿದ್ದಾಗ 75 ದಿನಗಳೂ ಸಿಸಿಟಿವಿ ಸ್ವಿಚ್ಡ್ ಆಫ್ ಆಗಿದ್ದೇಕೆ?

   ಈ ಬಿಲ್ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರಿಗೆ ತಮಾಷೆಯ ವಿಷಯವಾಗಿದ್ದರೆ, ಮತ್ತೆ ಕೆಲವರಿಗೆ ಗಂಭೀರ ತನಿಖೆಯ ವಿಷಯವಾಗಿದೆ.

   ಒಂದು ಇಡ್ಲಿಗೆ ಒಂದು ಕೋಟಿ ರೂ!

   ದೆಬಿನ್ ದೇವರಾಜ್ ಎಂಬುವವರ ಟ್ವೀಟ್ ಇದು:

   ಮೋದಿ: ನಾನು ಹಲವು ಅಂತಾರಾಷ್ಟ್ರೀಯ ತಿಂಡಿಗಳ ರುಚಿ ನೋಡಿದ್ದೇನೆ. ಅಕಸ್ಮಾತ್ ನಾನು ರುಚಿ ನೋಡದ ತಿಂಡಿ ಯಾವುದಾದರೂ ಇದೆಯಾ?

   ಆಪ್ತಕಾರ್ಯದರ್ಶಿ: ಇದೆ ಸಾರ್. ಚೆನ್ನೈಯಲ್ಲಿ 1 ಕೋಟಿ ರೂ. ಬೆಲೆ ಬಾಳುವ ಇಡ್ಲಿ ಇದೆ!

   ಮೋದಿ: OMG, ಯಾವ ಹೊಟೇಲ್ ಅದು?

   ಆಪ್ತಕಾರ್ಯದರ್ಶಿ: ಅಪೋಲೋ ಆಸ್ಪತ್ರೆ ಸಾರ್! ನಾನು ಅಪಾಯಿಂಟ್ಮೆಂಟ್ ತೆಗೆದುಕೊಳ್ಳಲೇ?

   ಮೋದಿ: ??!!

   ಆಸ್ಪತ್ರೆ ಎದುರು ಇಡ್ಲಿ ಶಾಪ್!

   ಈಗ ಹಲವರು ಪ್ಲಾನ್ ಮಾಡುತ್ತಿದ್ದಾರೆ. ಐಟಿ ಕಂಪನೆಗಳ ಎದುರು ಟೀ ಸ್ಟಾಲ್ ಇಡುವುದಕ್ಕಿಂತ, ಆಸ್ಪತ್ರೆ ಎದುರಲ್ಲಿ ಇಡ್ಲಿ ಶಾಪ್ ಇಡುವುದೇ ಉತ್ತಮ ಅಂತ! ಎಂದು ಕಿಚಾಯಿಸಿದ್ದಾರೆ ಸಾಬೆಟ್ರಾ ಜೇನ್.

   'ಅಮ್ಮಾ' ಕೊನೆಯ ಕ್ಷಣದ ಬಗ್ಗೆ 'ಚಿನ್ನಮ್ಮ' ಬಿಚ್ಚಿಟ್ಟ ಸ್ಫೋಟಕ ಸತ್ಯ

   ಜಗತ್ತಿನ ದುಬಾರಿ ಹೊಟೇಲ್

   ಜಗತ್ತಿನ ದುಬಾರಿ ಹೊಟೇಲ್ ಎಂದರೆ ಅಪೋಲೋ ಆಸ್ಪತ್ರೆ ಎಂದು ಜೋಕರ್ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

   ಆಸ್ಪತ್ರೆ ಬಿಲ್ ನೋಡಿ ಹಾರ್ಟ್ ಅಟ್ಯಾಕ್ ಗ್ಯಾರಂಟಿ!

   ಅಕಸ್ಮಾತ್ ಯಾರಾದರೂ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖವಾಗಿದ್ದರೂ, ಡಿಸ್ಚಾರ್ಜ್ ಆಗುವಾಗ ಆಸ್ಪತ್ರೆ ಬಿಲ್ ನೋಡಿ ಹಾರ್ಟ್ ಅಟ್ಯಾಕ್ ಆಗುವುದಂತೂ ಸತ್ಯ ಎಂದು ಗೌತಮ್ ಕಲ್ಯಾಣ್ ಟ್ವೀಟ್ ಮಾಡಿದ್ದಾರೆ.

   ಅದು ಆಹಾರವೋ, ಬಂಗಾರವೋ!

   ಶಾಕಿಂಗ್! ಪ್ರತಿದಿನ ಕೇವಲ ಆಹಾರಕ್ಕೆ ಖರ್ಚು ಮಾಡಿದ ದುಡ್ಡು ಒಂದೂವರೆ ಲಕ್ಷಕ್ಕಿಂತಲೂ ಹೆಚ್ಚು! ಅದು ನಿಜವಾಗಿಯೂ ಆಹಾರವೋ, ಬಂಗಾರವೋ ಎಂಬ ಅನುಮಾನ ಕಾಡುತ್ತಿದೆ ಎಂದಿದ್ದಾರೆ ಸಂತೋಷ್ ಮುರುಗನ್.

   ಕುಂಬಕರ್ಣ ತಿಂದರೂ ಇಷ್ಟು ಬಿಲ್ ಆಗಲ್ಲ!

   ಕುಂಬಕರ್ಣ ಆರು ತಿಂಗಳ ಕಾಲ ತಿನ್ನುತ್ತಲೇ ಕೂತರೂ ಇಷ್ಟು ಬಿಲ್ ಆಗುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ ನಿವೇತಾ ನಾರಾಯಣದಾಸ್.

   English summary
   A Rs. 6.85 crore bill of Apollo Hospitals for the 75-day treatment of late Chief Minister J Jayalalithaa in 2016 the circumstances leading to her death, has gone viral in the social media.Here are twitter reactions.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X