ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಜಿತ್ -ತಮಿಳುನಾಡಿನ ಮುಂದಿನ ಸಿಎಂ: ಜಯಲಲಿತಾ ಆಸೆ

By Mahesh
|
Google Oneindia Kannada News

ಚೆನ್ನೈ, ಅಕ್ಟೋಬರ್ 08: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ದೀರ್ಘಕಾಲದ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಈ ನಡುವೆ ತಮಿಳರ ಪಾಲಿನ 'ಅಮ್ಮ' ಜಯಾ ಅವರ ಉತ್ತರಾಧಿಕಾರಿ ಯಾರಾಗಬೇಕು? ಎಂಬ ಚರ್ಚೆ ಆರಂಭವಾಗಿದೆ. ಜನಪ್ರಿಯ ನಟ ಅಜಿತ್ ಅವರ ಹೆಸರನ್ನು ಜಯಲಲಿತಾ ಅವರೇ ಸೂಚಿಸಿದ್ದಾರೆ ಎಂಬ ಗಾಳಿ ಸುದ್ದಿಯೂ ಹಬ್ಬಿದೆ.

ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಜಯಲಲಿತಾ ಅವರು ಚಿಕಿತ್ಸೆ ಪಡೆಯುತ್ತಿದ್ದು, ತಮಿಳುನಾಡಿನಲ್ಲಿ ಆಡಳಿತ ಯಂತ್ರ ಕುಸಿದಿದೆ ಎಂಬ ಕೂಗೆದ್ದಿದೆ. ಹೀಗಾಗಿ ಸದ್ಯಕ್ಕೆ ತಾತ್ಕಾಲಿಕ ವ್ಯವಸ್ಥೆಯನ್ನು ಮಾಡಲು ಎಐಎಡಿಎಂಕೆ ಸಿದ್ಧವಾಗುತ್ತಿದೆ. ಜತೆಗೆ ಮುಂದಿನ ವಿಧಾನಸಭೆ ಚುನಾವಣೆಗೆ ಅಜಿತ್ ಅವರನ್ನು ಸಿಎಂ ಅಭ್ಯರ್ಥಿಯಾಗಿ ಘೋಷಿಸಲು ಎಐಎಡಿಎಂಕೆ ಸಜ್ಜಾಗುತ್ತಿದೆ.

ಜಯಲಲಿತಾ ಅವರ ಮನದಾಳದ ಇಚ್ಛೆಯಂತೆ ಎಲ್ಲವೂ ನಡೆಯಲಿದೆ. 'ತಲಾ' ಅಜಿತ್ ಅವರನ್ನು ಭೇಟಿ ಮಾಡಿ ಈ ಬಗ್ಗೆ ಸೂಕ್ತ ಸಂದರ್ಭದಲ್ಲಿ ಚರ್ಚಿಸಲಾಗುವುದು ಎಂದು ಜಯಾ ಸಚಿವ ಸಂಪುಟದ ಹಿರಿಯ ಸಚಿವರು ಹೇಳಿದ್ದಾರೆ.

ಆದರೆ, ರಾಜಕೀಯದಿಂದ ಸದಾಕಾಲ ದೂರ ಉಳಿದಿರುವ ಅಜಿತ್ ಅವರು ಈ ಆಫರ್ ಒಪ್ಪಿಕೊಳ್ಳುವುದು ಕಷ್ಟ ಎಂದು ನಮ್ಮ ಚೆನ್ನೈ ಬಾತ್ಮೀದಾರರಿಂದ ತಿಳಿದು ಬಂದಿದೆ. ಆದರೆ, ಎಐಎಡಿಎಂಕೆ ಪರ ಪ್ರಚಾರಕ್ಕೆ ಇಳಿದರೆ ಅಚ್ಚರಿ ಪಡಬೇಕಾಗಿಲ್ಲ, ಡಿಎಂಕೆಯಂತೂ ಅಜಿತ್ ವಿರುದ್ಧ ತಿರುಗಿ ಬಿದ್ದ ಇತಿಹಾಸವೆ ಇದೆ ಎನ್ನುತ್ತಾರೆ.

ತಾತ್ಕಾಲಿಕ ಆಡಳಿತ ಯಾರಿಗೆ?

ತಾತ್ಕಾಲಿಕ ಆಡಳಿತ ಯಾರಿಗೆ?

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜಯಲಲಿತಾ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲು ಸೇರಿದ್ದಾಗ ಅವರ ಆಪ್ತ ಮತ್ತು ಹಿರಿಯ ಸಚಿವ ಪನ್ನೀರ್ ಸೆಲ್ವಂ ಅವರು ತಮಿಳುನಾಡು ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈಗಲೂ ಆಡಳಿತ ಯಂತ್ರ ಚಲಿಸುವ ಹೊಣೆ ಅವರ ಮೇಲೆ ಬೀಳಬಹುದು. ಅಥವಾ ಎಡಪ್ಪಡಿ ಅವರಿಗೆ ಹೆಚ್ಚಿನ ಅಧಿಕಾರ ಸಿಗಬಹುದು.

ಪನ್ನೀರ್ ಸೆಲ್ವಂ ಆಯ್ಕೆಯಲ್ಲಿ ಗೊಂದಲ

ಪನ್ನೀರ್ ಸೆಲ್ವಂ ಆಯ್ಕೆಯಲ್ಲಿ ಗೊಂದಲ

ಪನ್ನೀರ್ ಸೆಲ್ವಂ ಅವರು ದುರ್ಬಲ ಮತ್ತು ಅಸಮರ್ಥ ಎಂದು ಪಕ್ಷದೊಳಗೆ ಮಾತಿಗೆ ಹೀಗಾಗಿ, ಎಐಎಡಿಎಂಕೆಗೆ ಉತ್ತರಾಧಿಕಾರಿ ಆಯ್ಕೆ ಕಷ್ಟಕರವಾಗಿದೆ. ಜಯಾ ಅವರ ಸಾಕುಪುತ್ರ ಸುಧಾಕರ್ ರಾಜಕೀಯ ಹಾದಿ ಬಂದ್ ಆಗಿದೆ. ಇತ್ತೀಚೆಗೆ ಆಸ್ಪತ್ರೆಗೆ ಬಂದ ಸುಧಾಕರ್ ಗೆ ಪ್ರವೇಶ ನಿರಾಕರಿಸಲಾಗಿತ್ತು. ಪನ್ನೀರ್ ಸೆಲ್ವಂ ನಂಬಿಕೆ ಬಗ್ಗೆ ಎರಡು ಮಾತಿಲ್ಲ. ಆದರೆ, ಡಿಎಂಕೆ ವಿರುದ್ಧ ಹೋರಾಡಿ ಮುಂದಿನ ಚುನಾವಣೆ ತನಕ ಪಕ್ಷವನ್ನು ಮುನ್ನಡೆಸುವ ಛಾತಿ ಇಲ್ಲ ಎಂಬ ಮಾತಿದೆ. ಚಿತ್ರದಲ್ಲಿ: ಅಪೊಲೊ ಆಸ್ಪತ್ರೆಯಲ್ಲಿ ರಾಹುಲ್ ಗಾಂಧಿ

ಅಜಿತ್ ಆಯ್ಕೆ ಮಾಡುವುದು ಹೇಗೆ?

ಅಜಿತ್ ಆಯ್ಕೆ ಮಾಡುವುದು ಹೇಗೆ?

ಅಜಿತ್ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಿ ನಂತರ ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕರಾಗಿ ಒಮ್ಮತದಿಂದ ಆಯ್ಕೆ ಮಾಡುವ ಸಾಧ್ಯತೆಯಿದೆ. ಈ ಮೂಲಕ ಜಯಾ ಅವರ ಉತ್ತರಾಧಿಕಾರಿಯಾಗಿ ನೇಮಿಸಲು ಸೂಚನೆಗಳು ಸಿಕ್ಕಿವೆಯಂತೆ. ಆದರೆ, ಮುಂದಿನ ಚುನಾವಣೆ ತನಕ ಈ ವಿಷಯ ತಣ್ಣಗಾಗಿಸಿ ಕೊನೆ ಕ್ಷಣದಲ್ಲಿ ಸಿಎಂ ಅಭ್ಯರ್ಥಿ ಹೆಸರನ್ನು ಘೋಷಿಸುವ ಸಾಧ್ಯತೆಯೂ ಇದೆ. ಆದರೆ, ಅಜಿತ್ ಎಲ್ಲಕೂ ಒಪ್ಪಬೇಕಷ್ಟೆ.

 ಇಷ್ಟಕ್ಕೂ ಅಜಿತ್ ಕುಮಾರ್ ಆಯ್ಕೆ ಏಕೆ?

ಇಷ್ಟಕ್ಕೂ ಅಜಿತ್ ಕುಮಾರ್ ಆಯ್ಕೆ ಏಕೆ?

ರಾಜಕೀಯವಾಗಿ ದೂರ ಉಳಿದು ಯಾವುದೇ ಪಕ್ಷದ ಜತೆ ಗುರುತಿಸಿಕೊಳ್ಳದ ಅಜಿತ್ ಅವರ ಮೇಲೆ ಡಿಎಂಕೆ ಪಕ್ಷ ಹಲವಾರು ಬಾರಿ ಕಿಡಿಕಾರಿತ್ತು. ಇದೇ ವಿಷಯವಾಗಿ ಜಯಲಲಿತಾ ಅವರು ಅಜಿತ್ ಜತೆ ಮಾತುಕತೆ ನಡೆಸಿ ಅವರ ಬೆನ್ನ ಹಿಂದೆ ನಿಂತಿದ್ದರು.

* ಫೋರ್ಬ್ಸ್ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಅಜಿತ್ ಅವರು ಜನಪ್ರಿಯ ನಟ ಮಾತ್ರವಲ್ಲದೆ, ದಾನಿ, ಎಫ್ 3 ಕಾರು ಚಾಲಕರಾಗಿ ಆಗಿ ಜನಪ್ರಿಯತೆ ಗಳಿಸಿದ್ದಾರೆ.
* ಅಜಿತ್ ಅವರ ತಾಯಿ ಮೋಹಿನಿ ಕೋಲ್ಕತ್ತಾ ಮೂಲದ ಸಿಂಧಿ ಪರಿವಾರದವರು, ತಾಯಿ ಹೆಸರಿನಲ್ಲಿ ಮೋಹಿನಿ- ಮಣಿ ಫೌಂಡೇಶನ್ ಸ್ಥಾಪಿಸಿ ದಾನ ಧರ್ಮ ಮಾಡುತ್ತಿದ್ದಾರೆ.


English summary
Who would become the successor of J Jayalalithaa? is the most trending question in the Tamil Nadu political arena now. It is reported that Jayalalithaa wished Actor Ajit to become Tamil Nadu CM and he will be projected as designated CM for next Assembly Election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X