ಜಯಾ ಸೋದರಸೊಸೆ ದೀಪಾ ರಾಜಕೀಯ ಪ್ರವೇಶ, ಒಪಿಎಸ್ ಗೆ ಬೆಂಬಲ!

By: ಅನುಷಾ ರವಿ
Subscribe to Oneindia Kannada
ಚೆನ್ನೈ, ಫೆಬ್ರವರಿ 14: ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರ ಸೋದರನ ಮಗಳು ದೀಪಾ ಜಯಕುಮಾರ್ ಮಂಗಳವಾರ ಅಧಿಕೃತವಾಗಿ ತಮ್ಮ ರಾಜಕೀಯ ಪ್ರವೇಶವನ್ನು ಘೋಷಿಸಿದರು. ಚೆನ್ನೈನ ಮರೀನಾ ಬೀಚ್ ನಲ್ಲಿರುವ ಜಯಲಲಿತಾ ಸಮಾಧಿ ಬಳಿ ಪನ್ನೀರ್ ಸೆಲ್ವಂ ಅವರನ್ನು ಭೇಟಿ ಮಾಡಿದ ನಂತರ, ಮಾಧ್ಯಮಗಳಿಗೆ ತಮ್ಮ ನಿಲುವು ತಿಳಿಸಿದರು.

ಇದು ನಿಮ್ಮ ಅಧಿಕೃತ ರಾಜಕೀಯ ಪ್ರವೇಶವೇ ಎಂಬ ಮಾಧ್ಯಮದವರ ಪ್ರಶ್ನೆಗೆ ಸಕಾರಾತ್ಮಕವಾಗಿ ಸ್ಪಂದಿಸಿದರು. ಪನ್ನೀರ್ ಸೆಲ್ವಂ ಮಂಗಳವಾರ ಮತ್ತೆ ಜಯಲಲಿತಾ ಸಮಾಧಿ ಬಳಿ ಕಾಣಿಸಿಕೊಂಡು ಕುತೂಹಲ ಹುಟ್ಟಿಸಿದರು. ದೀಪಾ ಅವರು ಪನ್ನೀರ್ ಸೆಲ್ವಂಗೆ ತಮ್ಮ ಬೆಂಬಲ ಎಂಬುದನ್ನು ತಿಳಿಸಿದರು.

ಅಕ್ರಮ ಆಸ್ತಿ ಪ್ರಕರಣದಲ್ಲಿ ಜಯಲಲಿತಾ, ಶಶಿಕಲಾ, ಇಳವರಸಿ, ಸುಧಾಕರನ್ ತಪ್ಪಿತಸ್ಥರು ಎಂಬ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದ ದಿನವೇ ದೀಪಾ ಜಯಕುಮಾರ್ ತಮ್ಮ ನಿರ್ಧಾರ ಘೋಷಿಸಿದ್ದಾರೆ. ಜಯಲಲಿತಾ ಅವರ ನಿಧನದ ನಂತರ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ದೀಪಾ ಸುಳಿವು ಕೊಟ್ಟಿದ್ದರು.[ಶಶಿ-ಜಯಾ ಒಡವೆ ಲೆಕ್ಕ ಹಾಕಲು ಕೋರ್ಟ್ ತೆಗೆದುಕೊಂಡಿದ್ದು ಮೂರು ದಿನ!]

Deepa Jayakumar

ಜಯಲಲಿತಾ ಜನ್ಮದಿನವಾದ ಫೆಬ್ರವರಿ 24ರಂದು ತಮ್ಮ ನಿಲುವು ಪ್ರಕಟಿಸುವುದಾಗಿ ದೀಪಾ ತಿಳಿಸಿದ್ದರು. ಸದ್ಯದ ತಮಿಳುನಾಡು ರಾಜಕೀಯ ಪರಿಸ್ಥಿತಿ ಆಕೆಯು ನಿರ್ಧಾರ ಬದಲಿಸಿಕೊಳ್ಳುವಂತೆ ಮಾಡಿದೆ. ಜಯಲಲಿತಾ ಅವರ ಸೋದರಳಿಯ ದೀಪಕ್ ಶಶಿಕಲಾ ಬಣದ ಜೊತೆ ಗುರುತಿಸಿಕೊಂಡಿದ್ದಾರೆ. ಆದರೆ ದೀಪಾ ಅವರು ಪನ್ನೀರ್ ಸೆಲ್ವಂ ಬಣವನ್ನು ಆರಿಸಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Deepa Jayaram, late Jayalalithaa's niece announced her official entry into politics on Tuesday. Deepa who arrived at Jayalalithaa memorial to meet Panneerselvam spoke to the media confirming her entry into political fray. Asked if this was her official entry into politics, she replied in the positive.
Please Wait while comments are loading...