ಜಯಲಲಿತಾ ನಿಧನ ನಂತರದ 10 ಬೆಳವಣಿಗೆ

By: ವಿಕಾಸ್ ನಂಜಪ್ಪ
Subscribe to Oneindia Kannada

ಚೆನ್ನೈ, ಡಿಸೆಂಬರ್ 6: ಜಯಲಲಿತಾ ಪಾರ್ಥಿವ ಶರೀರದ ಮೇಲೆ ತ್ರಿವರ್ಣ ಧ್ವಜ ಹೊದಿಸಿ, ಮಂಗಳವಾರ ಬೆಳಗ್ಗೆ ರಾಜಾಜಿ ಹಾಲ್ ಕಡೆಗೆ ತೆಗೆದುಕೊಂಡು ಹೋಗಲಾಯಿತು. ಇನ್ನು ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ. ಲಕ್ಷಾಂತರ ಸಂಖ್ಯೆಯ ಆಕೆ ಬೆಂಬಲಿಗರು ಆ ಸ್ಥಳಕ್ಕೆ ತೆರಳಲು, ತಮ್ಮ ನೆಚ್ಚಿನ ನಾಯಕಿಯನ್ನು ಕೊನೆ ಬಾರಿಗೆ ನೋಡಲು ಸಾಗರದಂತೆ ಇದ್ದಾರೆ.

[ಗ್ಯಾಲರಿ: ಶೋಕಸಾಗರದಲ್ಲಿ 'ಅಮ್ಮ'ನ ಮಕ್ಕಳು]

ಜಯಲಲಿತಾ ನಿಧನ ನಂತರದ ಹತ್ತು ಬೆಳವಣಿಗೆಗಳನ್ನು ಇಲ್ಲಿ ನೀಡಲಾಗಿದೆ.
-ಅಪೋಲೋ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ 11.30ಕ್ಕೆ ಜಯಲಲಿತಾ ನಿಧನ

-ಪಾರ್ಥಿವ ಶರೀರವನ್ನು ಮೊದಲಿಗೆ ಪೋಯೆಸ್ ಗಾರ್ಡನ್ ನಲ್ಲಿರುವ ಮನೆಗೆ ತೆಗೆದುಕೊಂಡು ಹೋಗಿ ಅಂತಿಮ ಸಂಸ್ಕಾರ ನಡೆಸಿದ ನಂತರ ರಾಜಾಜಿ ಹಾಲ್ ಗೆ

-ತಮಿಳುನಾಡಿನಲ್ಲಿ ಏಳು ದಿನಗಳ ಶೋಕಾಚರಣೆ ಘೋಷಿಸಿದ ರಾಜ್ಯಪಾಲ

Apollo hospital

-ಶಾಲೆ-ಕಾಲೇಜುಗಳಿಗೆ ಮೂರು ದಿನ ರಜಾ ಘೋಷಣೆ

-ಒ.ಪನ್ನೀರ್ ಸೆಲ್ವಂ ತಮಿಳುನಾಡಿನ ಹೊಸ ಮುಖ್ಯಮಂತ್ರಿ

-ರಾಜ್ಯಪಾಲರ ಸಮ್ಮುಖದಲ್ಲಿ 31 ಸಚಿವರು ಅಧಿಕಾರ ಸ್ವೀಕಾರ

-ತ್ರಿವರ್ಣ ಧ್ವಜದಿಂದ ಸುತ್ತಿದ ಜಯಲಲಿತಾ ಪಾರ್ಥಿವ ಶರೀರ ಅಂತಿಮ ದರ್ಶನಕ್ಕಾಗಿ ರಾಜಾಜಿ ಹಾಲ್ ನಲ್ಲಿ ಅವಕಾಶ

-ಎಂಜಿಆರ್ ಸಮಾಧಿಯ ಬಳಿ ಮರೀನಾದಲ್ಲಿ ಮಂಗಳವಾರ ಸಂಜೆ 4ಕ್ಕೆ ಜಯಲಲಿತಾ ಅಂತ್ಯಕ್ರಿಯೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The mortal remains of J Jayalalithaa draped in the Tricolour was taken to the Rajaji Hall this morning for the public to pay their last respects. Scores of followers thronged the venue to catch a glimpse of their beloved leader. Security is very high in Tamil Nadu Here are the ten developments.
Please Wait while comments are loading...