ಜಯಲಲಿತಾಗೆ 10 ವರ್ಷ ಚುನಾವಣೆ ನಿಷೇಧ
ಚೆನ್ನೈ, ನ. 13: ಜಯಲಲಿತಾ ಅವರು 10 ವರ್ಷ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಿ ಅವರದ್ದೇ ಪಕ್ಷದ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.

ಜಯಲಲಿತಾ ಅವರು ಅಕ್ರಮ ಆಸ್ತಿ ಪ್ರಕರಣದಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಬುಧವಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಈ ಆದೇಶ ಶಿಕ್ಷೆಗೆ ಗುರಿಯಾದ ದಿನ 2014ರ ಸೆ. 27ರಿಂದಲೇ ಜಾರಿಗೆ ಬಂದಿದೆ.
ಕಾನೂನು ಪ್ರಕಾರ ಜೈಲು ಶಿಕ್ಷೆಗೆ ಗುರಿಯಾದ ದಿನದಿಂದಲೇ ನಾಲ್ಕು ವರ್ಷ ಚುನಾವಣೆಗೆ ಸ್ಪರ್ಧಿಸುವ ಅವಕಾಶವನ್ನು ಜಯಲಲಿತಾ ಕಳೆದುಕೊಂಡಿದ್ದಾರೆ. ಜತೆಗೆ ಶಿಕ್ಷೆ ಪೂರೈಕೆ ಹೊರ ಬಂದ ಮೇಲೆ 1951ರ ಪ್ರಜಾಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 8ರ ಅಡಿ ಮತ್ತೆ ಆರು ವರ್ಷಕಳ ಕಾಲ ಅವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.












Click it and Unblock the Notifications