ತಮಿಳುನಾಡಿನ ಏಳು ಕಡೆಗಳಲ್ಲಿ ಆದಾಯ ತೆರಿಗೆ ದಾಳಿ

ಚೆನ್ನೈ, ಏಪ್ರಿಲ್ 12: ತಮಿಳುನಾಡಿನಲ್ಲಿ ಚುನಾವಣೆಗೆ ಇನ್ನೊಂದು ವಾರ ಬಾಕಿ ಇರುವಾಗ(ಏಪ್ರಿಲ್ 18) ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಚೆನ್ನೈನ 3 ಕಡೆ ಮತ್ತು ನಮಕ್ಕಳ್ ನ 4 ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ಪಿಎಸ್ಕೆ ಇಂಜಿನಿಯರಿಂಗ್ ಕನ್ಸ್ಟ್ರಕ್ಷನ್ ಕಂಪನಿ ಗೆ ಸಂಬಮಧಿಸಿದ ಕೆಲವು ಸ್ಥಳಗಳಲ್ಲಿ ಅಕ್ರಮ ಹಣ ಸಂಗ್ರಹವಾಗಿರುವ ಕುರಿತು ಖಚಿತ ಮಾಹಿತಿ ಪಡೆದ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.

ಚೆನ್ನೈನ ಆದಾಯ ತೆರಿಗೆ ನಿರ್ದೇಶನಾಲಯಕ್ಕೆ ಅಕ್ರಮ ಹಣ ಸಂಗ್ರಹದ ಕುರಿತಂತೆ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಚುನಾವಣೆಗಾಗಿ ಹಣ ಹಂಚಿಕೆಯಾಗುತ್ತಿರುವ ದೂರೂ ಇದ್ದಿದ್ದರಿಂದ ತಕ್ಷಣವೇ ದಾಳಿ ನಡೆಸಲಾಗಿತ್ತು. ಲೋಕಸಭೆ ಚುನಾವಣೆ ತಮಿಳುನಾಡಿನಲ್ಲಿ ಒಂದೇ ಹಂತದಲ್ಲಿ ಏಪ್ರಿಲ್ 18 ರಂದು ನಡೆಯಲಿದೆ.

ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಹಣ ಸಾಗಣೆಯಾಗುತ್ತಿರುವ ಕುರಿತು ಖಚಿತ ಮಾಹಿತಿ ಲಭ್ಯವಾದ ಕಾರಣ ದಾಳಿ ನಡೆಸಲಾಗಿದೆ.

IT raid in Tamil Nadus Chennai and Namakkal

ಇತ್ತೀಚೆಗಷ್ಟೇ ಕರ್ನಾತಕದ ಹಲವು ರಾಜಕಾರಣಿಗಳ ಆಪ್ತರ ಮನೆ ಮೇಲೆ ಐಟಿ ದಾಳಿ ನಡೆದಿತ್ತು. ಚುನಾವಣೆ ಹತ್ತಿರವಾಗುತ್ತಿರುವುದರಿಂದ ಕೇಂದ್ರ ಸರ್ಕಾರವೇ ಬೇಕೆಂದು ಈ ರೀತಿ ಮಾಡಿಸುತ್ತಿದೆ ಎಂದು ಕಾಂಗ್ರೆಸ್ ಮತ್ತು ಜೆಡಿ ಎಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನೂ ನಡೆಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+