ಶನಿವಾರ ಐಪಿಎಸ್ ಅಧಿಕಾರಿ ಹರೀಶ್ ಅಂತ್ಯಕ್ರಿಯೆ

Posted By:
Subscribe to Oneindia Kannada

ಚೆನ್ನೈ, ಫೆಬ್ರವರಿ 19 : ಚೆನ್ನೈನಲ್ಲಿ ಗುರುವಾರ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಕನ್ನಡಿಗ ಐಪಿಎಸ್ ಅಧಿಕಾರಿ ಎನ್.ಹರೀಶ್ ಅವರ ಅಂತ್ಯಸಂಸ್ಕಾರ ಕೋಲಾರದಲ್ಲಿ ಶನಿವಾರ ನಡೆಯಲಿದೆ. ಹರೀಶ್ ಸಾವಿನ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಒತ್ತಾಯ ಕೇಳಿಬಂದಿದೆ.

ಶುಕ್ರವಾರ ರಾಜೀವ್ ಗಾಂಧಿ ಹರೀಶ್ ಅವರ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬದವರಿಗೆ ಹಸ್ತಾಂತರ ಮಾಡಲಾಗಿದೆ. ಮೂವರು ತಜ್ಞ ವೈದ್ಯರ ತಂಡ ನಡೆಸಿದ ಮರಣೋತ್ತರ ಪರೀಕ್ಷೆಯ ವಿಡಿಯೋ ಚಿತ್ರೀಕರಣ ಮಾಡಲಾಗಿದೆ. [ಚೆನ್ನೈನಲ್ಲಿ ಕನ್ನಡಿಗ ಐಪಿಎಸ್ ಅಧಿಕಾರಿ ನಿಗೂಢ ಸಾವು]

n harish

ಹರೀಶ್ ಅವರ ತಂದೆ ನಾಗರಾಜಪ್ಪ, ತಾಯಿ ಶಿವಮ್ಮ, ಸಹೋದರಿ ಪೂರ್ಣಿಮಾ ಮತ್ತು ಆಶಾ ಅವರು ಚೆನ್ನೈನಿಂದ ವಿಶೇಷ ಆಂಬ್ಯುಲೆನ್ಸ್ ಮೂಲಕ ಹರೀಶ್ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತಗೆದುಕೊಂಡು ಹೋದರು. ಬೆಂಗಳೂರಿನ ರಾಜಾಜಿನಗರದ ನಿವಾಸಕ್ಕೆ ಪಾರ್ಥಿವ ಶರೀರ ತೆಗೆದುಕೊಂಡು ಹೋಗಲಿದ್ದು, ನಂತರ ಹುಟ್ಟೂರು ಬಂಡೆ ಹೊಸೂರಿಗೆ ತೆಗೆದುಕೊಂಡು ಹೋಗಲಾಗುತ್ತದೆ. [ಐಎಎಸ್ ಅಧಿಕಾರಿ ಡಿಕೆ ರವಿ ನಿಗೂಢ ಸಾವು]

ಶನಿವಾರ ಅಂತ್ಯಸಂಸ್ಕಾರ : ಬೆಂಗಳೂರಿನ ನಿವಾಸದಲ್ಲಿ ಹರೀಶ್ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಫೆ.20ರ ಶನಿವಾರ ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಬಂಡೆ ಹೊಸೂರಿನಲ್ಲಿ ಹರೀಶ್ ಅವರ ಅಂತ್ಯಕ್ರಿಯೆ ನಡೆಯಲಿದೆ.

ಸಿಬಿಐ ತನಿಖೆಗೆ ಒತ್ತಾಯ : ಹರೀಶ್ ಅವರದ್ದು ಆತ್ಮಹತ್ಯೆ ಮಾಡಿಕೊಳ್ಳುವಂತಹ ವ್ಯಕ್ತಿತ್ವವಲ್ಲ ಅವರ ಸಾವಿನ ನಿಗೂಢತೆ ಹೊರಬರಬೇಕು. ಆದ್ದರಿಂದ ಸಾವಿನ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಬಂಡೆ ಹೊಸೂರಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Last rites of the IPS officer N.Harish to be performed in Kolar, Karnataka on Saturday, February 21. 2016. 31-year-old IPS officer N.Harish was found dead in police officers mess at Egmore in Chennai on Thursday.
Please Wait while comments are loading...