ಲಾಠಿ ಬಿಟ್ಟು ಬಲೂನ್ ಗೆ 'ಗುಂಡು ಪಿನ್' ಚುಚ್ಚಿದ ತಮಿಳುನಾಡು ಪೊಲೀಸರು!

Subscribe to Oneindia Kannada

ಚೆನ್ನೈ, ಏಪ್ರಿಲ್ 12: ಸಾಮಾನ್ಯವಾಗಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಹಿಡಿಯುವುದು ಮಾಮೂಲಿ. ಆದರೆ ಇಂದು ತಮಿಳುನಾಡಿನಲ್ಲಿ ಪೊಲೀಸರು ಗುಂಡು ಪಿನ್ ಹಿಡಿದುಕೊಂಡು ಬೀದಿಗೆ ಇಳಿದಿದ್ದರು. ಅವರಿಗಿವತ್ತು ಪ್ರತಿಭಟನಾಕಾರರನ್ನು ಚದುರಿಸುವುದಕ್ಕಿಂತ ಹಾರಿ ಬಿಟ್ಟ ನೂರಾರು ಕಪ್ಪು ಬಲೂನ್ ಒಡೆಯುವುದೇ ಮಹಾ ಕೆಲಸ.

ಇದೆಲ್ಲಾ ಯಾಕೆ ಅಂತೀರಾ? ಅದಕ್ಕೆ ನೀವು ಈ ಸ್ಟೋರಿ ಓದಲೇ ಬೇಕು.

ಡಿಫೆನ್ಸ್ ಎಕ್ಸ್ ಪೋದಲ್ಲಿ ಮೋದಿ ಭಾಷಣ: ಮುಖ್ಯಾಂಶಗಳು

ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಒತ್ತಾಯಿಸಿ ತಮಿಳುನಾಡಿನಲ್ಲಿ ಹಲವು ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ. ಕೇಂದ್ರ ಮೇಲೆ ಒತ್ತಡ ಹೇರಲು ತಮಿಳಿಗರು ಇಲ್ಲ ಸಲ್ಲದ ಕಸರತ್ತು ಮಾಡಿದ್ದರು. ಆದರೆ ಯಾವುದೂ ಕೈಗೂಡಿರಲಿಲ್ಲ.

Instead of Lathi police took Pin to bust Go Back Modi balloons

ಅದೇ ಸಮಯಕ್ಕೆ ಸರಿಯಾಗಿ ಇಂದು ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಭೇಟಿ ನೀಡಿದರು. ಡಿಫೆನ್ಸ್ ಎಕ್ಸ್ ಪೋದಲ್ಲಿ ಭಾಗವಹಿಸಲು ಅವರು ನೇರ ದೆಹಲಿಯಿಂದ ತಮಿಳುನಾಡಿನಲ್ಲಿ ಬಂದಿಳಿದರು.

ಹಾಗೆ ಬಂದ ಮೋದಿಗೆ ಕಪ್ಪು ಪಟ್ಟಿ ತೋರಿಸಲು ತಮಿಳುನಾಡಿಗರು ಇಂದು ಮಾಡಿದ ಕಸರತ್ತುಗಳು ಒಂದೆರಡಲ್ಲ. ಪರಿಣಾಮ ಪೊಲೀಸರು ಲಾಠಿ ಬಿಟ್ಟು ಪಿನ್ ಹಿಡಿಯಬೇಕಾಯಿತು. ಏನೇನೋ ಮಾಡಬೇಕಾಯಿತು.

'ಗೋ ಬ್ಯಾಕ್ ಮೋದಿ...' ತಮಿಳು ನಾಡಲ್ಲಿ ಮೋದಿಗೆ ಧಿಕ್ಕಾರದ ಸ್ವಾಗತ!

'ಗೋ ಬ್ಯಾಕ್ ಮೋದಿ' ಎಂಬ ಅಭಿಯಾನ ಹಮ್ಮಿಕೊಂಡಿದ್ದ ತಮಿಳುನಾಡಿನ ವಿರೋಧ ಪಕ್ಷಗಳು ಸಾಮಾಜಿಕ ಜಾಲತಾಣಗಳಲ್ಲಷ್ಟೇ ಅಬ್ಬರಿಸಲಿಲ್ಲ. ತಮಿಳುನಾಡಿನ ರಸ್ತೆ ರಸ್ತೆಗಳಲ್ಲೂ ಅಬ್ಬರಿಸಿದರು.

Instead of Lathi police took Pin to bust Go Back Modi balloons

ಒಂದಷ್ಟು ಜನ ಮೋದಿ ಬಂದಿಳಿಯುವ ವಿಮಾನ ನಿಲ್ದಾಣದ ಸೂರಿನ ಮೇಲೆ ಹತ್ತಿದ್ದರು. ಇನ್ನೊಂದಷ್ಟು ಜನ ಕಪ್ಪು ಬಟ್ಟೆ ಹಾಕಿ, ಕೈಯಲ್ಲಿ ಕಪ್ಪು ಬಟ್ಟೆಯ ಧ್ವಜ ಹಿಡಿದು ಮೋದಿ ಗೋ ಬ್ಯಾಕ್ (ಹಿಂದಕ್ಕೆ ಹೋಗಿ) ಎಂಬ ಘೋಷಣೆ ಕೂಗುತ್ತಿದ್ದರು.

ಒಂದಷ್ಟು ಜನರನ್ನು ಪೊಲೀಸರು ಬಂಧಿಸಿದರು. ಆದರೆ ಪೊಲೀಸರು ಚಾಪೆ ಕೆಳಗೆ ತೂರಿದರೆ ಪ್ರತಿಭಟನಾಕಾರರು ರಂಗೋಲಿ ಕೆಳಗೆ ತೂರಿದರು. ಡಿಎಂಕೆ ವತಿಯಿಂದ ದೊಡ್ಡದಾದ ಬಲೂನಿನಲ್ಲಿ ಗೋ ಬ್ಯಾಕ್ ಮೋದಿ ಎಂದು ಬರೆದು ಹಾರಿ ಬಿಡಲಾಯಿತು. ಇದರ ಜತೆಗೆ ಡಿಎಂಡಿಕೆ ನಾಯಕ ವೈಕೋ ಮೊದಲಾದವರು ನೂರಾರು ಕಪ್ಪು ಬಲೂನುಗಳನ್ನು ಹಾರಿ ಬಿಟ್ಟರು. ಇದು ಈಗೇನು ಮಾಡ್ತೀರಿ ಪೊಲೀಸರೇ ಎಂದು ಸವಾಲು ಹಾಕಿದಂತಿತ್ತು.

ಇದರಿಂದ ಅನಿವಾರ್ಯವಾಗಿ ಮೋದಿಗೆ ಕಪ್ಪು ಬಣ್ಣದ ಪ್ರದರ್ಶನ ಆಗಬಾರದು ಎಂಬ ಕಾರಣಕ್ಕೆ ಪೊಲೀಸರು ಲಾಠಿ ಬಿಟ್ಟು ಪಿನ್ ಎತ್ತಿಕೊಂಡು ಚಿಕ್ಕ ಮಕ್ಕಳ ಹಾಗೆ ಬಲೂನಿಗೆ ಚುಚ್ಚಿಕೊಂಡು ಓಡಾಡಬೇಕಾಯಿತು.

ಪ್ರತಿಭಟನಾಕಾರರು ಮತ್ತು ಪೊಲೀಸರ ಈ ಕಣ್ಣಾಮುಚ್ಚಾಲೆ ಆಟ ನೋಡುವವರನ್ನು ನಗೆಗಡಲಿನಲ್ಲಿ ತೇಲಿಸಿತು. ಆದರೆ ಪಾಪ ಪೊಲೀಸರು ಮಾತ್ರ ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ ಎಂಬಂತೆ ಗಂಭೀರವಾಗಿ ಬಲೂನ್ ಒಡೆಯುವುದರಲ್ಲಿ ನಿರತರಾಗಿದ್ದರು.

ಅತ್ತ ಬಲೂನ್ ಕಥೆ ಹೀಗಾದರೆ #GoBackModi ಹ್ಯಾಷ್ ಟ್ಯಾಗ್ ಟ್ಟಿಟ್ಟರ್ ನಲ್ಲಿ ಇಂದು ದೇಶದಲ್ಲಿ ಟ್ರೆಂಡಿಂಗ್ ನಲ್ಲಿತ್ತು. ಇನ್ನೊಂದೆಡೆ ಡಿಎಂಕೆ ವರಿಷ್ಠ ಕರುಣಾನಿಧಿ ಮನೆಯಲ್ಲೇ ಕಪ್ಪು ಬಟ್ಟೆ ಧರಿಸಿ ತಮ್ಮ ಸಾಂಕೇತಿಕ ಪ್ರತಿಭಟನೆಯನ್ನೂ ತೋರಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
GoBackModi: Cops burst balloons one by one which protesters brought against to fly against Prime minister Narendra Modi, who visited chennai on today morning.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ