ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡಿಯಾ ಟುಡೇ ಸಮೀಕ್ಷೆ: ಡಿಎಂಕೆ ಮೈತ್ರಿಕೂಟಕ್ಕೆ ಪೊಂಗಲ್ ಗಿಫ್ಟ್

By Mahesh
|
Google Oneindia Kannada News

ನವದೆಹಲಿ, ಜನವರಿ 16: ತಮಿಳುನಾಡಿನಲ್ಲಿ ಈ ಸಮಯಕ್ಕೆ ವಿಧಾನಸಭೆ ಚುನಾವಣೆ ನಡೆದರೆ ಯಾವ ಪಕ್ಷ ಅಧಿಕಾರಕ್ಕೆ ಬರಬಹುದು? ಎಂಬ ಪ್ರಶ್ನೆಯೊಂದಿಗೆ ಸುಮಾರು 77 ಅಸೆಂಬ್ಲಿ ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಿದ ಇಂಡಿಯಾ ಟುಡೇ ಹಾಗೂ ಕಾರ್ವಿ ಸಂಸ್ಥೆಯಿಂದ ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಮೈತ್ರಿಕೂಟಕ್ಕೆ ಪೊಂಗಲ್ ಉಡುಗೊರೆ ಸಿಕ್ಕಿದೆ. ತಮಿಳುನಾಡಿನ ಜನತೆ ಆಡಳಿತದಲ್ಲಿ ಬದಲಾವಣೆ ಬಯಸಿದ್ದಾರೆ ಎಂದು ದಿಕ್ಸೂಚಿ ಹೇಳುತ್ತಿದೆ.

ರಜನಿಕಾಂತ್ 33 ಸೀಟಿಗಿಂತ ಹೆಚ್ಚು ಗೆಲ್ಲಲ್ಲ : ಇಂಡಿಯಾ ಟುಡೇ ಸಮೀಕ್ಷೆರಜನಿಕಾಂತ್ 33 ಸೀಟಿಗಿಂತ ಹೆಚ್ಚು ಗೆಲ್ಲಲ್ಲ : ಇಂಡಿಯಾ ಟುಡೇ ಸಮೀಕ್ಷೆ

ಎಐಎಡಿಎಂಕೆ ಆಡಳಿತದಲ್ಲಿ ಬದಲಾವಣೆ ಕಾಣಬಹುದೇ? ತಮಿಳುನಾಡಿನ ನೆಚ್ಚಿನ ಮುಖ್ಯಮಂತ್ರಿ ಯಾರು? ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್ ಅವರ ರಾಜಕೀಯ ಪ್ರವೇಶದಿಂದ ಬದಲಾವಣೆ ಸಾಧ್ಯವೇ? ಎಂಬೆಲ್ಲ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಇಂಡಿಯಾ ಟುಡೇ ಕಾರ್ವಿ ಸಂಸ್ಥೆ ನಡೆಸಿದ ಸಮೀಕ್ಷೆಯ ಫಲಿತಾಂಶ ಮಂಗಳವಾರ ರಾತ್ರಿ ಪ್ರಕಟವಾಗಿದೆ.

India Today-Karvy survey: AIADMK will get 68 seats and DMK alliance 130

ತಮಿಳುನಾಡಿನಲ್ಲಿ ಸದ್ಯ ಎಐಎಡಿಎಂಕೆ ಪಕ್ಷ ಅಧಿಕಾರದಲ್ಲಿದ್ದು 2021ರಲ್ಲಿ ಅವಧಿ ಮುಗಿಯಲಿದೆ. 2016ರಲ್ಲಿ ಎಐಎಡಿಎಂಕೆ ಶೇ40ರಷ್ಟು ಮತಗಳ ಪಾಲು ಗಳಿಸಿ 135 ಸ್ಥಾನಗಳನ್ನು ಪಡೆದುಕೊಂಡಿತ್ತು. ಆದರೆ, ಇಂಡಿಯಾ ಟುಡೇ- ಕಾರ್ವಿ ಸಂಸ್ಥೆ ಈಗ ನಡೆಸಿರುವ ಸಮೀಕ್ಷೆಯಂತೆ ಈಗ ಚುನಾವಣೆ ನಡೆದರೆ, ಎಐಎಡಿಎಂಕೆ ಅಧಿಕಾರ ಕಳೆದುಕೊಳ್ಳಲಿದ್ದು, ಕೇವಲ 68 ಸ್ಥಾನಗಳನ್ನು ಗಳಿಸಲಿದೆ. ಶೇ 26ರಷ್ಟು ಮತ ಪಾಲು ಹೊಂದಲಿದೆ.

ಎಂ. ಕರುಣಾನಿಧಿ-ಸ್ಟಾಲಿನ್ ನೇತೃತ್ವದ ಡಿಎಂಕೆ, ಕಾಂಗ್ರೆಸ್ ಹಾಗೂ ಐಯುಎಂಎಲ್ ಮೈತ್ರಿಕೂಟಕ್ಕೆ ಶೇ 34ರಷ್ಟು ಶೇಕಡಾವರು ಮತ ಪಾಲಿನೊಂದಿಗೆ 130 ಸೀಟುಗಳನ್ನು ಗೆಲ್ಲಲಿದೆ.

ನೆಚ್ಚಿನ ಸಿಎಂ: ಡಿಎಂಕೆ ವರಿಷ್ಠ ಎಂ ಕರುಣಾನಿಧಿ ಅವರು ಇಲ್ಲಿ ತನಕ ತಮಿಳುನಾಡು ಕಂಡಿರುವ ಉತ್ತಮ ಮುಖ್ಯಮಂತ್ರಿ ಎಂದು ಶೇ 29ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಎಂಜಿಆರ್ ಹಾಗೂ ಜೆ ಜಯಲಲಿತಾ ಅವರಿಗೆ ಕ್ರಮವಾಗಿ ಶೇ 25 ಹಾಗೂ ಶೇ 21ರಷ್ಟು ಮತಗಳು ಸಿಕ್ಕಿವೆ.

English summary
India Today-Karvy survey: The ruling AIADMK will get just 68 seats with a vote share of 26 per cent, The opposition DMK+ alliance - that includes the DMK, the Congress, and the IUML - will get 130 seats with a vote share of 34 per cent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X